
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿರುವ ‘ರಣಬಾಲಿ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಯ್ತು. ಬೆಳಿಗ್ಗೆ ಬಿಡುಗಡೆ ಆದ ಸಿನಿಮಾಕ್ಕೆ ಸಂಜೆಯೇ ಸಕ್ಸಸ್ ಪಾರ್ಟಿಯನ್ನು ಚಿತ್ರತಂಡ ಮಾಡಿತ್ತು. ಸ್ವಾತಂತ್ರ್ಯ ಪೂರ್ವದ ಕತೆ ಹೊಂದಿರುವ ಈ ಸಿನಿಮಾನಲ್ಲಿ ಹಾಲಿವುಡ್ ನಟರೂ ಸಹ ನಟಿಸಿದ್ದರು. ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ.
ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ರಾಣಾಬಾಲಿ’ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದ್ದು, ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಅಕ್ಟೋಬರ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಇನ್ನು ಮೂರು ದಿನಗಳಲ್ಲಿ ಅಂದರೆ ನವೆಂಬರ್ 11 ರಂದು ಒಟಿಟಿಗೆ ಕಾಲಿಡಲಿದೆ. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ಅನ್ನು ತೆಲುಗಿನ ಜೊತೆಗೆ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿಯೂ ವೀಕ್ಷಣೆ ಮಾಡಬಹುದಾಗಿದೆ.
ಈ ಕುರಿತು ಅಧಿಕೃತವಾಗಿ ಪೋಸ್ಟ್ ಹಂಚಿಕೊಂಡಿರುವ ನೆಟ್ಫ್ಲಿಕ್ಸ್ ‘ಸಿಂಗನಮಲ ಬೊಬ್ಬಲಿ ರಾಣಾಬಾಲಿ ಒಸ್ತುನ್ನಾಡು’ ಎಂದು ಬರೆಯಲಾಗಿದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಕಾಲದ 19 ನೇ ಶತಮಾನದ ರಾಯಲಸೀಮೆಯ ಹಿನ್ನೆಲೆಯಲ್ಲಿ ಸಾಗುವ ‘ರಾಣಾಬಾಲಿ’ ಚಿತ್ರವು, ವಿಚಿತ್ರ ಪರಿಸ್ಥಿತಿಗಳಲ್ಲಿ ಜನಿಸಿ ಮಹೋದ್ದೇಶವನ್ನು ಪೂರೈಸಲು ಹುಟ್ಟಿದ ಸಿಂಗನಮಲ ಬೊಬ್ಬಲಿ ರಾಣಾಬಾಲಿ ಎಂಬಾತನ ಕತೆಯನ್ನು ಹೇಳುತ್ತದೆ. ರಾಯಲಸೀಮೆ ಭಾಗದಲ್ಲಿ ಜನರನ್ನು ಹುಳಗಳಂತೆ ಭಾವಿಸುವ ಬ್ರಿಟೀಷ್ ಅಧಿಕಾರಿಯ ವಿರುದ್ಧ ಸಶಸ್ತ್ರ ಹೋರಾಟ ಮಾಡುವ ರಣಬಾಲಿಯ ಕತೆಯನ್ನು ಸಿನಿಮಾ ಒಳಗೊಂಡಿದೆ.
ಇದನ್ನೂ ಓದಿ:ವಿಜಯ್ ಬಗ್ಗೆ ಟೀಕೆ ಮಾಡಿದವರಿಗೆ ನಟಿ ರಶ್ಮಿಕಾ ಮಂದಣ್ಣ ಖಡಕ್ ತಿರುಗೇಟು
‘ರಣಬಾಲಿ’ ಸಿನಿಮಾನಲ್ಲಿ ವಿಜಯ್ ದೇವರಕೊಂಡ ನಾಯಕ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದರು. ಸಿನಿಮಾ ಅನ್ನು ಭಾರಿ ಅದ್ಧೂರಿಯಾಗಿ ತೆರೆಗೆ ತರಲಾಗಿತ್ತು. ಆದರೆ ಸಿನಿಮಾ ನಿರೀಕ್ಷಿತ ಪ್ರದರ್ಶನವನ್ನು ಚಿತ್ರಮಂದಿರಗಳಲ್ಲಿ ಕಂಡಿರಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ