ನಟಿ ಆಲಿಯಾ ಭಟ್ ಅವರು ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅದರ ನಡುವೆಯೇ ಆಲಿಯಾ ಮತ್ತು ರಣವೀರ್ ಸಿಂಗ್ ಜೋಡಿಯ ಒಂದು ಪ್ರೇಮ್ ಕಹಾನಿಯನ್ನು ಜಗತ್ತಿಗೆ ತೋರಿಸಲು ಕರಣ್ ಜೋಹರ್ ಪ್ಲ್ಯಾನ್ ಮಾಡಿದ್ದಾರೆ. ಅಂದಹಾಗೆ, ಇದು ಇವರಿಬ್ಬರ ರಿಯಲ್ ಲವ್ಸ್ಟೋರಿ ಅಲ್ಲ. ಹೊಸದೊಂದು ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಒಂದಾಗುತ್ತಿದ್ದು, ಅದಕ್ಕೆ ಕರಣ್ ಜೋಹರ್ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾ ಹೆಸರು, ‘ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ’.
ಇಂದು (ಜು.6) ರಣವೀರ್ ಸಿಂಗ್ ಜನ್ಮದಿನ. ಆ ಪ್ರಯುಕ್ತ ‘ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆ ಇದೆ. ಕರಣ್ ಜೋಹರ್ ಹಲವು ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವುದರಿಂದ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ. 2016ರಲ್ಲಿ ಐಶ್ವರ್ಯಾ ರೈ ಮತ್ತು ರಣಬೀರ್ ಕಪೂರ್ ಜೋಡಿಯ ‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರದ ಬಳಿಕ ಬೇರೆ ಯಾವುದೇ ಸಿನಿಮಾಗೂ ಕರಣ್ ನಿರ್ದೇಶನ ಮಾಡಿರಲಿಲ್ಲ.
ಇನ್ನು, ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಜೋಡಿ ಎಂದ ತಕ್ಷಣ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚುತ್ತದೆ. ಯಾಕೆಂದರೆ, ಈ ಪ್ರತಿಭಾವಂತ ಕಲಾವಿದರಿಬ್ಬರು ಜೊತೆಯಾಗಿ ನಟಿಸಿದ್ದ ‘ಗಲ್ಲಿ ಬಾಯ್’ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದೂ ಅಲ್ಲದೆ, ಹಲವು ಪ್ರಶಸ್ತಿಗಳನ್ನು ಬಾಚಿ ಕೊಂಡಿತ್ತು. ಹಾಗಾಗಿ ಇವರಿಬ್ಬರು ಮತ್ತೆ ಜೊತೆಯಾಗಿ ನಟಿಸಲಿರುವ ‘ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಬಗ್ಗೆ ಹೈಪ್ ಸೃಷ್ಟಿ ಆಗುತ್ತಿದೆ.
ಇದೇ ಸಿನಿಮಾದಲ್ಲಿ ಶಬನಾ ಆಜ್ಮಿ, ಧರ್ಮೇಂದ್ರ, ಜಯಾ ಬಚ್ಚನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕರೇ ಅಧಿಕೃತ ಮಾಹಿತಿ ನೀಡಬೇಕಿದೆ. ಇಂದು ರಣವೀರ್ ಸಿಂಗ್ ಜನ್ಮದಿನಕ್ಕೆ ಸೆಲೆಬ್ರಿಟಿಗಳು, ಸ್ನೇಹಿತರು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅದರ ಜೊತೆ ಹೊಸ ಸಿನಿಮಾ ಅನೌನ್ಸ್ ಆದರೆ ಫ್ಯಾನ್ಸ್ಗೆ ಹೆಚ್ಚು ಖುಷಿ ಆಗಲಿದೆ.
ಇದನ್ನೂ ಓದಿ:
ರಣವೀರ್ ಸಿಂಗ್ ನಟಿಸಿದ ಈ ಟಾಪ್ 10 ಚಿತ್ರಗಳಲ್ಲಿ ನಿಮಗೆ ಯಾವುದು ಇಷ್ಟ?
ಬೆಳ್ಳಿ ಪರದೆಯಲ್ಲಿ ಉತ್ತುಂಗದಲ್ಲಿರುವಾಗಲೇ ಕಿರುತೆರೆಗೆ ಕಾಲಿಟ್ಟ ನಟ ರಣವೀರ್ ಸಿಂಗ್
Published On - 9:53 am, Tue, 6 July 21