ದುಬೈ ಏರ್​ಪೋರ್ಟ್​ ಅಧಿಕಾರಿಗಳಿಗೆ ಯಾಮಾರಿಸಿದ್ದ ರನ್ಯಾ, ಸ್ವಿಟ್ಜರ್ಲೆಂಡ್​ಗೆ ಹೋಗ್ತೇನೆಂದು ಬೆಂಗಳೂರಿಗೆ ಬಂದಳು

|

Updated on: Mar 15, 2025 | 1:39 PM

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ನಟಿ ರನ್ಯಾ ರಾವ್ ಅವರನ್ನು ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ತಂದ ಆರೋಪದ ಮೇಲೆ ಬಂಧಿಸಿದೆ. ತನಿಖೆಯಿಂದ, ರನ್ಯಾ ರಾವ್ ದುಬೈನಲ್ಲಿ ಅಪರಿಚಿತ ವ್ಯಕ್ತಿಯಿಂದ ಚಿನ್ನ ಪಡೆದು, ಯೂಟ್ಯೂಬ್​ ನಲ್ಲಿ ನೋಡಿದ ವಿಡಿಯೋಗಳನ್ನು ನೋಡಿ, ಅದರ ಪ್ರಕಾರ ತನ್ನ ದೇಹದ ಮೇಲೆ ಚಿನ್ನವನ್ನು ಅಂಟಿಸಿಕೊಂಡು ಬೆಂಗಳೂರಿಗೆ ತಂದಿದ್ದಾರೆ ಎಂದು ಬಹಿರಂಗಗೊಂಡಿದೆ. ಡಿಆರ್​​ಐ ಅಧಿಕಾರಿಗಳು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.

ದುಬೈ ಏರ್​ಪೋರ್ಟ್​ ಅಧಿಕಾರಿಗಳಿಗೆ ಯಾಮಾರಿಸಿದ್ದ ರನ್ಯಾ, ಸ್ವಿಟ್ಜರ್ಲೆಂಡ್​ಗೆ ಹೋಗ್ತೇನೆಂದು ಬೆಂಗಳೂರಿಗೆ ಬಂದಳು
ರನ್ಯಾ ರಾವ್​
Follow us on

ಬೆಂಗಳೂರು, ಮಾರ್ಚ್​ 15: ಚಿನ್ನ ಕಳ್ಳಸಾಗಾಣಿಕೆ (Gold Sumgling) ಆರೋಪದಲ್ಲಿ ನಟಿ ರನ್ಯಾ ರಾವ್ (Ranya Rao) ​ರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಬಂಧಿಸಿದೆ. ನಟಿ ರನ್ಯಾ ರಾವ್​ಗೆ ಚಿನ್ನ ನೀಡಿದ ವ್ಯಕ್ತಿ ಯಾರು ಮತ್ತು ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ತಂದಿದ್ದು ಹೇಗೆ ಎಂಬುವುದನ್ನು ಡಿಆರ್​ಐ ಅಧಿಕಾರಿಗಳು ತನಿಖೆ ವೇಳೆ ಪತ್ತೆಹಚ್ಚಿದ್ದಾರೆ. ನಟಿ ರನ್ಯಾ ರಾವ್​ ಸ್ವಿಟ್ಜರ್ಲೆಂಡ್‌ನ ಜಿನೆವಾಕ್ಕೆ ಹೋಗುವುದಾಗಿ ಹೇಳಿ ದುಬೈದಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನವನ್ನು ತಂದಿದ್ದಾರೆ ಎಂಬ ಸಂಗತಿ ಡಿಆರ್​ಐ ತನಿಖೆ ವೇಳೆ ಬೆಳಕಿಗೆ ಬಂದಿದೆ.

2024ರ ಡಿಸೆಂಬರ್​ 13 ಹಾಗೂ 20 ರಂದು ಪ್ರತ್ಯೇಕವಾಗಿ ಎರಡು ಬಾರಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ರನ್ಯಾ ರಾವ್​ ಖರೀದಿಸಿದ್ದರು. ಬಳಿಕ, ಚಿನ್ನವನ್ನು ಸಾಗಿಸುವಾಗ ಅಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಾವು ಸ್ವಿಜರ್ಲೆಂಡ್​ನ ಜಿನೆವಾಕ್ಕೆ ಹೋಗುವುದಾಗಿ ಸುಳ್ಳು ಹೇಳಿ ಬೆಂಗಳೂರಿಗೆ ಬಂದಿದ್ದರು. ಈ ರೀತಿಯಾಗಿ ನಟಿ ರನ್ಯಾ ರಾವ್​ ದುಬೈ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳ ಕಣ್ತಪ್ಪಿಸಿದ್ದಾರೆ ಎಂದು ಡಿಆರ್​ಐ ಹೇಳಿದೆ ಎಂದು ವರದಿಯಾಗಿದೆ.

ರನ್ಯಾಗೆ ಚಿನ್ನ ನೀಡಿದವ ಯಾರು?

ತನಗೆ ಚಿನ್ನ ನೀಡಿದ ವ್ಯಕ್ತಿ “ಆರು ಅಡಿಗೂ ಹೆಚ್ಚು ಎತ್ತರವಿದ್ದ, ಉತ್ತಮ ಮೈಕಟ್ಟು ಹೊಂದಿದ್ದ, ಆಫ್ರಿಕನ್-ಅಮೇರಿಕನ್ ಉಚ್ಚಾರಣೆ ಮತ್ತು ಗೋಧಿ ಮೈ ಬಣ್ಣವಿತ್ತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರ ಗೇಟ್ ‘ಎ’ ನಲ್ಲಿರುವ ಊಟದ ಕೋಣೆಯ ಎಸ್ಪ್ರೆಸೊ ಯಂತ್ರದ ಬಳಿ ಆ ವ್ಯಕ್ತಿಯನ್ನು ಭೇಟಿಯಾದೆ. ಈ ಭೇಟಿಗೂ ಮೊದಲು ಅತ ಇಂಟರ್ನೆಟ್ ಕರೆ ಮಾಡಿ, ಎಲ್ಲಿ ಭೇಟಿಯಾಗಬೇಕು ಎಂಬುವುದನ್ನು ತಿಳಿಸಿದ್ದನು. ಅಲ್ಲದೇ, ಗುರುತಿಗಾಗಿ ತಾನು ಬಿಳಿ ಕಂದುರಾ (ಸಾಂಪ್ರದಾಯಿಕ ಅರಬ್ ನಿಲುವಂಗಿ) ಧರಿಸಿವುದಾಗಿ ಹೇಳಿದ್ದನು ಎಂದು ಎಂದು ಡಿಆರ್​ಐ ಅಧಿಕಾರಿಗಳ ಮುಂದೆ ನಟಿ ರನ್ಯಾ ರಾವ್​ ಹೇಳಿದ್ದಾರೆ.

ಇದನ್ನೂ ಓದಿ
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
ಕಾರವಾರದಲ್ಲಿ SSLC ವಿದ್ಯಾರ್ಥಿ, ತುಮಕೂರಿನಲ್ಲಿ PUC ವಿದ್ಯಾರ್ಥಿನಿ ಸಾವು
ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ: ಪತಿ ದುರಂತ ಸಾವು

ಭೇಟಿಯಾದ ಬಳಿಕ ಕೆಲವೇ ಕ್ಷಣಗಳಲ್ಲಿ ಟಾರ್ಪೌಲಿನ್ ಮಾದರಿಯ ಬಟ್ಟೆಯಿಂದ ಸುತ್ತಿದ ಎರಡು ಪ್ಯಾಕೇಟ್​ಗಳನ್ನು ನನಗೆ (ರನ್ಯಾ ರಾವ್​) ಕೊಟ್ಟನು. ನಂತರ, ತಾನು (ರನ್ಯಾ ರಾವ್) ಊಟದ ಕೋಣೆಯ ಬಳಿಯಿರುವ ಶೌಚಾಲಯಕ್ಕೆ ಹೋಗಿ ಒಂದು ಪ್ಯಾಕೇಟ್​ ತೆರೆದಾಗ ಅದರಲ್ಲಿ 12 ಚಿನ್ನದ ಬಾರ್‌ಗಳಿದ್ದವು, ಅವುಗಳನ್ನು ನಾಲ್ಕು ಸೆಟ್‌ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಇನ್ನೊಂದು ಪ್ಯಾಕ್‌ನಲ್ಲಿ ಐದು ಕತ್ತರಿಸಿದ ಚಿನ್ನದ ತುಂಡುಗಳನ್ನು ಒಟ್ಟಿಗೆ ಜೋಡಿಸಲಾಗಿತ್ತು ಎಂದು ಡಿಆರ್​ಐ ಅಧಿಕಾರಿಗಳಿಗೆ ರನ್ಯಾ ತಿಳಿಸಿದ್ದಾರೆ. ಈ ಮೊದಲು ಅಥವಾ ನಂತರ ತಾನು ಆ ವ್ಯಕ್ತಿಯನ್ನು ಎಂದಿಗೂ ಭೇಟಿಯಾಗಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.

ಯುಟ್ಯೂಬ್ ವಿಡಿಯೋ ನೋಡಿ ಚಿನ್ನ ಸಾಗಾಟ ಕಲಿತ ರನ್ಯಾ

ದೇಹದ ಮೇಲೆ ಚಿನ್ನವನ್ನು ಹೇಗೆ ಅಂಟಿಸಿಕೊಳ್ಳುವುದು ಎಂಬುದನ್ನು ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಕಲಿತೆ. ಟರ್ಮಿನಲ್ ಪ್ರವೇಶಿಸುವ ಮೊದಲು, ವಿಮಾನ ನಿಲ್ದಾಣದ ಸುಮಾರು ಒಂದು ಕಿಮೀ ದೂರದಲ್ಲಿರುವ ಸ್ಟೇಷನರಿ ಅಂಗಡಿಯಿಂದ ಅಂಟಿಕೊಳ್ಳುವ ಟೇಪ್ ಖರೀದಿಸಿದೆ. ವಿಮಾನ ನಿಲ್ದಾಣದೊಳಗೆ ಕತ್ತರಿ ನಿಷೇಧಿಸಲಾಗಿದೆ. ಹೀಗಾಗಿ, ಟೇಪ್ ಅನ್ನು ಮೊದಲೇ ವಿವಿಧ ಗಾತ್ರಗಳಿಗೆ ಕತ್ತರಿಸಿಟ್ಟುಕೊಂಡಿರುವುದಾಗಿ ಡಿಆರ್​ಐ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಇದನ್ನೂ ಓದಿ: Ranya Rao Gold Smuggling: ರನ್ಯಾ ರಾವ್​​ ಜಾಮೀನು ಅರ್ಜಿ ವಜಾ, ಚಿನ್ನದ ರಾಣಿಗೆ ಜೈಲೇ ಗತಿ

ಸೊಂಟ ಮತ್ತು ಮೊಣಕಾಲಿಗೆ ಚಿನ್ನ ಅಂಟಿಸಿಕೊಂಡ ರನ್ಯಾ

ನಂತರ ಶೌಚಾಲಯದ ಒಳಗೆ ತೆರಳಿ, ಚಿನ್ನದ ಗಟ್ಟಿಗಳನ್ನು ಕಾಲುಗಳು ಮತ್ತು ಸೊಂಟದ ಸುತ್ತಲೂ ಚಿನ್ನವನ್ನು ಇಟ್ಟುಕೊಂಡು ಮೇಲೆ ಟಿಶ್ಯೂ ಸುತ್ತಿಕೊಂಡೆ. ಮೇಲೆ ಟೇಪ್​ ಅಂಟಿಸಿಕೊಂಡೆ. ತುಂಡು ಮಾಡಿದ್ದ ಕೆಲವು ಚಿನ್ನದ ಬಾರ್‌ಗಳನ್ನು ಶೂಗಳ ಕೆಳಗೆ ಮತ್ತು ಉಳಿದವುಗಳನ್ನು ಪ್ಯಾಂಟ್‌ನ ಜೇಬಿನಲ್ಲಿ ಇಟ್ಟುಕೊಂಡಿರುವುದಾಗಿ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ