Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿನಲ್ಲಿ ಮುಳುಗುತ್ತಿರುವ ‘ಗರ್ಲ್​ಫ್ರೆಂಡ್’ ರಶ್ಮಿಕಾ ಮಂದಣ್ಣ: ಕಾಪಾಡುವ ನಾಯಕ ಯಾರು?

Rashmika Mandanna: ನಟಿ ರಶ್ಮಿಕಾ ಮಂದಣ್ಣ ಯಾಕೋ ನೀರಿನಲ್ಲಿ ಮುಳುಗಿದ್ದಾರೆ. ಅವರ ಮುಖಚಹರೆ ನೋಡಿದರೆ ಆತ್ಮಹತ್ಯೆ ಪ್ರಯತ್ನ ಎನಿಸುತ್ತದೆ. ಅವರನ್ನು ಕಾಪಾಡುವ ನಾಯಕ ಯಾರು?

ನೀರಿನಲ್ಲಿ ಮುಳುಗುತ್ತಿರುವ 'ಗರ್ಲ್​ಫ್ರೆಂಡ್' ರಶ್ಮಿಕಾ ಮಂದಣ್ಣ: ಕಾಪಾಡುವ ನಾಯಕ ಯಾರು?
Follow us
ಮಂಜುನಾಥ ಸಿ.
|

Updated on:Oct 22, 2023 | 4:54 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಲು-ಸಾಲು ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ರಶ್ಮಿಕಾ ನಟನೆಯ ಎರಡು ಹಿಂದಿ ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದ್ದು, ಸ್ಟಾರ್ ನಟ ರಣ್​ಬೀರ್ ಕಪೂರ್ ಜೊತೆ ನಟಿಸಿರುವ ಸಿನಿಮಾ ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್​ನಲ್ಲಿ ಸಾಲು-ಸಾಲು ಅವಕಾಶಗಳು ಬರುತ್ತಿರುವ ಕಾರಣ ತೆಲುಗು ಚಿತ್ರರಂಗದಿಂದ ರಶ್ಮಿಕಾ ದೂರಾಗಿದ್ದಾರೆ ಎನ್ನಲಾಗಿತ್ತು, ಆದರೆ ಇದೀಗ ರಶ್ಮಿಕಾ ಹೊಸದೊಂದು ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದು, ತುಸು ಭಿನ್ನವಾದ ಕತೆಯನ್ನು ರಶ್ಮಿಕಾ ಆಯ್ಕೆ ಮಾಡಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ‘ದಿ ಗರ್ಲ್​ಫ್ರೆಂಡ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮಹಿಳಾ ಪ್ರದಾನ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಸಣ್ಣ ಪ್ರೋಮೋ ಒಂದು ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೋ ಸಹ ಕುತೂಹಲ ಮೂಡಿಸುತ್ತಿದೆ. ನೀರಿನಲ್ಲಿ ಮುಳುಗಿರುವ ರಶ್ಮಿಕಾ ಮಂದಣ್ಣ ನಗುತ್ತಿರುತ್ತಾರೆ, ಆದರೆ ಹಠಾತ್ತನೆ ಬೇಸರದ ಮುಖಚಹರೆ ಪ್ರದರ್ಶಿಸುತ್ತಾರೆ, ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆ ಕಣ್ಣು ಮುಚ್ಚಿಬಿಡುತ್ತಾರೆ. ರಶ್ಮಿಕಾ ನೀರಿಗೆ ಇಳಿದಿದ್ದು, ಏಕೆ, ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ರಶ್ಮಿಕಾರನ್ನು ಕಾಪಾಡುವವರು ಯಾರು? ಇನ್ನೂ ಹಲವು ಪ್ರಶ್ನೆಗಳನ್ನು ಈ ಪ್ರೋಮೋ ಮೂಡಿಸುತ್ತಿದೆ.

ಸಿನಿಮಾದ ಪ್ರೋಮೋ ನೋಡಿದರೆ ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ಖಾತ್ರಿ ಆಗುತ್ತಿದೆ. ತಮ್ಮ ಬಾಯ್​ಫ್ರೆಂಡ್​ ಜೊತೆಗಿನ ಪ್ರೇಮಸಂಬಂಧದಿಂದ ಗರ್ಲ್​ಫ್ರೆಂಡ್ ಅಥವಾ ರಶ್ಮಿಕಾ ಮಂದಣ್ಣ ಎದುರಿಸುವ ಭಾವನೆಗಳ ಏರಿಳಿತ, ಸಮಸ್ಯೆಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಇಷ್ಟು ದಿನ ‘ಗರ್ಲ್​ ನೆಕ್ಸ್ಟ್ ಡೋರ್’ ಮಾದರಿಯ ಅಥವಾ ಮರ ಸುತ್ತುವ ನಾಯಕಿಯ ಪಾತ್ರಗಳಲ್ಲಿ ಮಾತ್ರ ನಟಿಸಿದ್ದ ರಶ್ಮಿಕಾಗೆ ಇದು ಮೊಟ್ಟ ಮೊದಲ ಮಹಿಳಾ ಪ್ರಧಾನ ಸಿನಿಮಾ. ಈ ಪಾತ್ರವನ್ನು ರಶ್ಮಿಕಾ ಹೇಗೆ ನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ಚಿನ್ನದ ಸೀರೆ ಉಟ್ಟು ಗಮನ ಸೆಳೆದ ನಟಿ ರಶ್ಮಿಕಾ ಮಂದಣ್ಣ

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿದ್ದು, ವಿದ್ಯಾ ಕೊಪ್ಪಿನೇಡಿ ಹಾಗೂ ಧೀರಜ್ ಮೊಗಿಲಿನೇನಿ ಅವರುಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಹೃದಯಂ’ ಸೇರಿದಂತೆ ಹಲವು ಸಿನಿಮಾಗಳಿಗೆ ಮಧುರವಾದ ಸಂಗೀತ ನೀಡಿರುವ ಮಲಯಾಳಂ ಸಂಗೀತ ನಿರ್ದೇಶನ ಹೆಷಾಮ್ ಅಬ್ದುಲ್ ವಹಾಬ್ ಅವರು ಸಂಗೀತ ನೀಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ, ರಣ್​ಬೀರ್ ಕಪೂರ್ ಜೊತೆಗೆ ನಟಿಸಿರುವ ‘ಅನಿಮಲ್’ ಸಿನಿಮಾ ಡಿಸೆಂಬರ್ 01 ರಂದು ತೆರೆಗೆ ಬರಲಿದೆ. ಅಲ್ಲು ಅರ್ಜುನ್ ಜೊತೆಗೆ ‘ಪುಷ್ಪ 2’ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಟೈಗರ್ ಶ್ರಾಫ್ ಜೊತೆಗೆ ಹೊಸ ಹಿಂದಿ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಒಂದು ತಮಿಳು ಸಿನಿಮಾವನ್ನು ಸಹ ಈ ನಡುವೆ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆಗೂ ಹೊಸ ಸಿನಿಮಾ ಒಂದನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಹಲವು ಹೊಸ ನಟಿಯರು ಬಂದರೂ ರಶ್ಮಿಕಾರ ಬೇಡಿಕೆ ಇನ್ನೂ ಕಡಿಮೆ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Sun, 22 October 23