ಫೋಟೋದಿಂದ ಬಯಲಾಯ್ತು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಡುವಿನ ಗುಟ್ಟು

ಬರ್ತ್​ಡೇ ಸಲುವಾಗಿ ಬ್ರೇಕ್ ಪಡೆದಿರುವ ರಶ್ಮಿಕಾ ಮಂದಣ್ಣ ಅವರು ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರ ಜೊತೆ ವಿಜಯ್ ದೇವರಕೊಂಡ ಕೂಡ ಇದ್ದಾರೆ. ಅವರಿಬ್ಬರು ಹಂಚಿಕೊಂಡಿರುವ ಫೋಟೋಗಳು ಬೇರೆ ಬೇರೆ ಆಗಿದ್ದರೂ ಕೂಡ ಬ್ಯಾಕ್​ಗ್ರೌಂಡ್ ಒಂದೇ ರೀತಿಯಲ್ಲಿ ಇದೆ. ಇದರಿಂದ ಜನರಿಗೆ ಎಲ್ಲವೂ ಅರ್ಥ ಆಗಿದೆ.

ಫೋಟೋದಿಂದ ಬಯಲಾಯ್ತು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಡುವಿನ ಗುಟ್ಟು
Rashmika Mandanna, Vijay Devarakonda

Updated on: Apr 06, 2025 | 9:39 PM

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ವಿಷಯವನ್ನು ರಶ್ಮಿಕಾ ಅವರಾಗಲಿ, ದೇವರಕೊಂಡ ಅವರಾಗಲಿ ಅಧಿಕೃತಪಡಿಸಿಲ್ಲ. ಅವರಿಬ್ಬರ ರಿಲೇಷನ್​ಶಿಪ್​ಗೆ ಸಾಕ್ಷಿ ನೀಡುವಂತಹ ಹಲವು ಘಟನೆಗಳು ಇವೆ. ಈಗ ಅವರಿಬ್ಬರ ನಡುವಿನ ಆಪ್ತತತೆ ಸಾಕ್ಷಿಯಾಗಿ ಕೆಲವು ಫೋಟೋಗಳು ವೈರಲ್ ಆಗಿವೆ. ಆದರೆ ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Devarakonda) ಅವರು ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ಕೂಡ ನೆಟ್ಟಿಗರಿಗೆ ಅಸಲಿ ವಿಷಯ ಏನೆಂಬುದು ಗೊತ್ತಾಗಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಲೊಕೇಷನ್!

ಹೌದು, ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಸಾಲು ಸಾಲು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿರುವುದರಿಂದ ಈ ಬಾರಿಯ ಹುಟ್ಟುಹಬ್ಬ ಅವರಿಗೆ ತುಂಬ ವಿಶೇಷ ಆಗಿದೆ. ಹಾಗಾಗಿ ಅವರು ಒಮನ್​ಗೆ ತೆರಳಿ ಬರ್ತ್​ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ವಿಜಯ್ ದೇವಕೊಂಡ ಕೂಡ ಕೆಲವು ಫೋಟೋ ಪೋಸ್ಟ್ ಮಾಡಿದ್ದು, ಅವರ ಬ್ಯಾಕ್​ಗ್ರೌಂಡ್ ನೋಡಿದ ನೆಟ್ಟಿಗರಿಗೆ ಸಾಕ್ಷಿ ಸಿಕ್ಕಂತೆ ಆಗಿದೆ.

ಇದನ್ನೂ ಓದಿ
‘ನನ್ನ ತಂಗಿಗೆ ಸವಲತ್ತು ಸಿಗಬಾರದು’; ರಶ್ಮಿಕಾ ಮಂದಣ್ಣ ಹೀಗೆ ಅಂದಿದ್ಯಾಕೆ?
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
‘ನಾನು ಹೈದರಾಬಾದ್​ನವಳು’ ಎಂದು ಹೆಮ್ಮೆಯಿಂದ ಹೇಳಿದ ರಶ್ಮಿಕಾ
‘ಎಲ್ಲರಿಗೂ ಆ ವಿಚಾರ ಗೊತ್ತಿದೆ’; ಮದುವೆ ಬಗ್ಗೆ ನೇರವಾಗಿ ಮಾತನಾಡಿದ ರಶ್ಮಿಕಾ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಜೊತೆಯಾಗಿ ವಿಮಾನದಲ್ಲಿ ಪ್ರಯಾಣ ಮಾಡಿಲ್ಲ. ಜನರಿಗೆ ಅನುಮಾನ ಬಾರದೇ ಇರಲಿ ಎಂಬ ಕಾರಣಕ್ಕೆ ಒಂದು ದಿನದ ಅಂತರದಲ್ಲಿ ಅವರಿಬ್ಬರು ಬೇರೆ ಬೇರೆಯಾಗಿ ವಿದೇಶಕ್ಕೆ ತೆರಳಿದ್ದರು.

ಆದರೆ ವಿದೇಶಕ್ಕೆ ಹೋಗಿ ಸೇರಿಕೊಂಡಿರುವುದು ಒಂದೇ ಲೊಕೇಷನ್​ನಲ್ಲಿ! ಇಬ್ಬರು ಕೂಡ ಒಂದೇ ಬೀಚ್​ನನಲ್ಲಿ ಇದ್ದಾರೆ ಎಂಬುದಕ್ಕೆ ಅವರಿಬ್ಬರ ಫೋಟೋದಲ್ಲಿ ಇರುವ ಬ್ಯಾಕ್​ಗ್ರೌಂಡ್ ಸಾಕ್ಷಿಯಾಗಿದೆ.

ಈ ಮೊದಲು ಕೂಡ ಇದೇ ರೀತಿ ಆಗಿತ್ತು. ಗುಟ್ಟಾಗಿ ಫಾರಿನ್ ಟ್ರಿಪ್​ಗೆ ತೆರಳಿದ್ದ ಅವರು ಬೇರೆ ಬೇರೆ ಫೋಟೋಗಳನ್ನು ಹಂಚಿಕೊಂಡಿದ್ದರೂ ಕೂಡ ಜನರು ಫೋಟೋದ ಬ್ಯಾಕ್​ಗ್ರೌಂಡ್ ನೋಡಿ ಅಸಲಿ ವಿಷಯ ಪತ್ತೆ ಮಾಡಿದ್ದರು. ಈ ಬಾರಿ ಕೂಡ ಅದು ಮರುಕಳಿಸಿದೆ. ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಆಪ್ತವಾಗಿದ್ದಾರೆ. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತುಕೊಂಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್-ರಶ್ಮಿಕಾ ನಡುವಿನ 31 ವರ್ಷ ವಯಸ್ಸಿನ ಅಂತರ ಸಮರ್ಥಿಸಿಕೊಂಡ ಅಮೀಶಾ ಪಟೇಲ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಸಾಕಷ್ಟು ಗಾಸಿಪ್​ಗಳು ಹರಿದಾಡುತ್ತಿವೆ. ಅನೇಕ ವಿಶೇಷ ಸಂದರ್ಭಗಳಲ್ಲಿ ರಶ್ಮಿಕಾ ಮಂದಣ್ಣ ಅವರು ದೇವರಕೊಂಡ ಕುಟುಂಬದ ಜೊತೆಗೆ ಕಾಣಿಸಿಕೊಂಡಿದ್ದರು. ಆದರೆ ಎಂದಿಗೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿಲ್ಲ ಅಷ್ಟೇ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.