AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ-ವಿಜಯ್​ ದೇವರಕೊಂಡ ಪ್ರೀತಿಗೆ ಇನ್ನೊಂದು ಸಾಕ್ಷಿ; ಒಂದೇ ರೀತಿಯ ಬಟ್ಟೆ ಧರಿಸಿದ ಜೋಡಿ

ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವೆ ಆಪ್ತತೆ ಇದೆ. ಅನೇಕ ಸಂದರ್ಭಗಳಲ್ಲಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಅವರಿಬ್ಬರು ಒಂದೇ ರೀತಿಯ ಬಟ್ಟೆ ಧರಿಸಿ ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಅಭಿಮಾನಿಗಳ ಮನದಲ್ಲಿನ ಗುಮಾನಿ ಜೋರಾಗಿದೆ.

ರಶ್ಮಿಕಾ-ವಿಜಯ್​ ದೇವರಕೊಂಡ ಪ್ರೀತಿಗೆ ಇನ್ನೊಂದು ಸಾಕ್ಷಿ; ಒಂದೇ ರೀತಿಯ ಬಟ್ಟೆ ಧರಿಸಿದ ಜೋಡಿ
ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ
ಮದನ್​ ಕುಮಾರ್​
|

Updated on: Dec 01, 2023 | 4:05 PM

Share

ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅಭಿಮಾನಿಗಳು ಇವರನ್ನು ‘ನ್ಯಾಶನಲ್ ಕ್ರಶ್’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆದರೆ ರಶ್ಮಿಕಾ ಮಂದಣ್ಣ ಅವರ ಪ್ರೀತಿ ಯಾರ ಮೇಲಿದೆ? ಥಟ್​ ಅಂತ ನೆನಪಾಗುವ ಹೆಸರು ವಿಜಯ್​ ದೇವರಕೊಂಡ (Vijay Deverakonda). ಹಾಗಿದ್ದರೂ ಕೂಡ ತಮ್ಮ ಸಂಬಂಧದ ಬಗ್ಗೆ ಈ ಜೋಡಿ ಹಕ್ಕಿಗಳು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿಲ್ಲ. ಆದರೂ ಸಹ ಅನುಮಾನಗಳು ಜೋರಾಗಿವೆ. ಅದಕ್ಕೆ ಬೆಸ್ಟ್​ ಉದಾಹರಣೆ ಇಲ್ಲಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅವರು ಒಂದೇ ರೀತಿಯ ಡ್ರೆಸ್​ ಧರಿಸಿ ಕಾಣಿಸಿಕೊಂಡಿದ್ದಾರೆ. ‘ರೌಡಿ’ ಬ್ರ್ಯಾಂಡ್​ನ ಹೂಡಿ ಧರಿಸಿದ ರಶ್ಮಿಕಾ ಮಂದಣ್ಣ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ತ, ವಿಜಯ್​ ದೇವರಕೊಂಡ ಅವರು ತೆಲಂಗಾಣದಲ್ಲಿ ಮತದಾನ ಮಾಡಲು ಬಂದಾಗ ಇದೇ ಬಣ್ಣದ ಹೂಡಿ ಧರಿಸಿದ್ದರು. ಈ ಎರಡೂ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ: ಮತ್ತೆ ವಿಜಯ್​ ದೇವರಕೊಂಡ ಜೊತೆ ತೆರೆ ಹಂಚಿಕೊಂಡ ರಶ್ಮಿಕಾ ಮಂದಣ್ಣ; ವಿಡಿಯೋ ವೈರಲ್​

ಸಾಮಾನ್ಯವಾಗಿ ಪ್ರೇಮಿಗಳು ಒಂದೇ ಬಗೆಯ ಡ್ರೆಸ್​ ಧರಿಸಿ ಪೋಸ್​ ನೀಡುತ್ತಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅದೇ ಉದ್ದೇಶದಿಂದಲೇ ಈ ರೀತಿ ಡ್ರೆಸ್​ ಧರಿಸಿದ್ದಾರಾ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ.

ಆದಷ್ಟ ಬೇಗ ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಇತ್ತೀಚೆಗೆ ‘ಹಾಯ್​ ನಾನ್ನ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ವೇದಿಕೆಯಲ್ಲಿ ಇವರಿಬ್ಬರ ಫೋಟೋ ಪ್ರದರ್ಶಿಸಿದ್ದು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: Animal Twitter Review: ಹೇಗಿದೆ ರಶ್ಮಿಕಾ-ರಣಬೀರ್​ ನಟನೆಯ ‘ಅನಿಮಲ್​’ ಸಿನಿಮಾ? ಇಲ್ಲಿದೆ ಟ್ವಿಟರ್​ ವಿಮರ್ಶೆ

ರಶ್ಮಿಕಾ ಮಂದಣ್ಣ ನಟಿಸಿರುವ ‘ಅನಿಮಲ್​’ ಸಿನಿಮಾ ಇಂದು (ಡಿಸೆಂಬರ್​ 1) ಬಿಡುಗಡೆ ಆಗಿದೆ. ಬಾಲಿವುಡ್​ನ ಈ ಸಿನಿಮಾ ಕನ್ನಡ, ತೆಲುಗು ಮುಂತಾದ ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ಇದರ ಜೊತೆಗೆ ಇನ್ನೊಂದು ಸುದ್ದಿ ಕೇಳಿಬಂದಿದೆ. ವಿಜಯ್​ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್​’ ಸಿನಿಮಾದ ಒಂದು ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್​ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಈ ಹಾಡಿನ ಶೂಟಿಂಗ್​ ವೇಳೆ ಯಾರೋ ಮೊಬೈಲ್​ನಲ್ಲಿ ಚಿತ್ರಿಸಿದ ವಿಡಿಯೋ ವೈರಲ್​ ಆಗಿದೆ. ‘ಗೀತ ಗೋವಿಂದಂ’, ‘ಡಿಯರ್​ ಕಾಮ್ರೇಡ್​’ ಬಳಿಕ ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಅವರು 3ನೇ ಬಾರಿಗೆ ಒಟ್ಟಿಗೆ ನಟಿಸಿದಂತಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.