
ರಶ್ಮಿಕಾ ಮಂದಣ್ಣ (Rashmika Mandanna) ಅವರ ಜೀವನದಲ್ಲಿ ಈಗ ಎಲ್ಲವೂ ಒಳ್ಳೆಯದೇ ಆಗುತ್ತಿದೆ. ಅವರು ನಟಿಸಿದ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಲವ್ ಲೈಫ್ ಕೂಡ ಚೆನ್ನಾಗಿದೆ. ಇತ್ತೀಚೆಗೆ ರಿಲೀಸ್ ಅವರ ನಟನೆಯ ‘ಕುಬೇರ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದೇ ಖುಷಿಯಲ್ಲಿ ಅವರು ಮತ್ತೊಂದು ಸಿನಿಮಾ ಘೋಷಿಸಲು ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರದ್ದು ವಾರಿಯರ್ ಅವತಾರ. ಈ ಚಿತ್ರದ ಟೈಟಲ್ ಜೂನ್ 27ರಂದು ಅನೌನ್ಸ್ ಆಗಲಿದೆ.
ರಶ್ಮಿಕಾ ಮಂದಣ್ಣ ಈವರೆಗೆ ಮಾಡಿದ ಬಹುತೇಕ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಮರಸುತ್ತುವ ಪಾತ್ರ ಸಿಕ್ಕಿದ್ದೇ ಹೆಚ್ಚು. ಈಗ ಅವರಿಗೆ ಮಹಿಳಾ ಪ್ರಧಾನ ಸಿನಿಮಾ ಸಿಕ್ಕಿದೆ ಎನ್ನಲಾಗಿದೆ. ಸದ್ಯ ಅಸ್ಪಷ್ಟವಾದ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ.
ಕಾಡಿನ ಮಧ್ಯೆ ರಶ್ಮಿಕಾ ನಿಂತಿದ್ದಾರೆ. ಅವರು ವಾರಿಯರ್ ರೀತಿ ಕಾಣಿಸಿದ್ದಾರೆ. ಅವರ ಕೈಯಲ್ಲಿ ಯಾವುದೋ ಆಯುಧ ರೀತಿಯ ವಸ್ತುವಿದೆ. ‘ಬೇಟೆಗೊಳಗಾಗಿ ಗಾಯಗೊಂಡರೂ ಅಚಲವಾಗಿ ನಿಂತಿದ್ದಾಳೆ’ಎಂಬ ಅರ್ಥ ಬರುವ ರೀತಿಯಲ್ಲಿ ಪೋಸ್ಟರ್ ಮೇಲೆ ಬರೆಯಲಾಗಿದೆ. ಈ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಜೂನ್ 27ರ ಮುಂಜಾನೆ 10:08ಕ್ಕೆ ರಿಲೀಸ್ ಆಗಲಿದೆ.
Brace for the blast!💥 @iamRashmika‘s next big reveal drops tomorrow! till then can you guys title? 💭#RashmikaMandanna pic.twitter.com/265u9iSULl
— Rashmika Trends (@RashmikaTrends) June 26, 2025
ಈ ಚಿತ್ರವನ್ನು ಅನ್ಫಾರ್ಮುಲಾ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈ ಸಂಸ್ಥೆಗೆ ಇದು ಮೊದಲ ಅನುಭವ. ಸಿನಿಮಾ ಬಗ್ಗೆ ಹಾಗೂ ನಿರ್ಮಾಣ ಸಂಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಚಿತ್ರದ ಟೈಟಲ್ ಜೊತೆ ಈ ವಿಚಾರವೂ ರಿವೀಲ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಕುಬೇರ’ ಸೆಟ್ನ ವಿಶೇಷ ಚಿತ್ರಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಈಗಾಗಲೇ ‘ದಿ ಗರ್ಲ್ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಚಿತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ. ಹೀಗಿರುವಾಗಲೇ ಅವರ ಮತ್ತೊಂದು ಚಿತ್ರ ಅನೌನ್ಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.