
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿ ಹರಿದಾಡಿದೆ. ಇದಕ್ಕೆ ರಶ್ಮಿಕಾ ಮಂದಣ್ಣ ಅವರು ಎಲ್ಲಿಯೂ ಪ್ರತಿಕ್ರಿಯಿಸಿಲ್ಲ. ಈಗ ಅವರು ಪರೋಕ್ಷವಾಗಿ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಅಭಿಮಾನಿಗಳ ಎದುರು ಅವರು ನೀಡಿದ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ. ರಶ್ಮಿಕಾಗೆ ಈಗಲೇ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ ‘ಥಾಮಾ’ ಸೂಪರ್ ಹಿಟ್ ಆಗಿದೆ. ಈ ಚಿತ್ರ ನೂರು ಕೋಟಿ ರೂಪಾಯಿ ಕ್ಲಬ್ ಸೇರುವುದರಲ್ಲಿದೆ. ರಶ್ಮಿಕಾ ಮಂದಣ್ಣ ತೆರಳಿಲ್ಲೆಲ್ಲ ಅವರಿಗೆ ಮಾಧ್ಯಮದವರಿಂದ, ಅಭಿಮಾನಿಗಳಿಂದ ಈ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿವೆ. ಇದಕ್ಕೆ ರಶ್ಮಿಕಾ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಈ ಬಾರಿ ರಶ್ಮಿಕಾ ಈ ವಿಚಾರಕ್ಕೆ ಸ್ಪಷ್ಟನೆ ಕೊಡುವ ಕೆಲಸ ಮಾಡಿದರು.
ರಶ್ಮಿಕಾ ಮಂದಣ್ಣ ನಟನೆಯ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ರಶ್ಮಿಕಾಗೆ ಅಭಿಮಾನಿಗಳಿಂದಲೇ ಈ ಬಗ್ಗೆ ಪ್ರಶ್ನೆಗಳು ಎದುರಾದವರು. ‘ನೀವು ಹಾಗೂ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದೀರಂತೆ ಹೌದಾ’ ಎಂದು ಪ್ರಶ್ನೆ ಮಾಡಲಾಯಿತು. ಆದರೆ, ಈ ವಿಚಾರವನ್ನು ರಶ್ಮಿಕಾ ಅಲ್ಲಗಳೆದಿಲ್ಲ. ಬದಲಿಗೆ, ‘ಸಮಯ ಬಂದಾಗ ಹೇಳುತ್ತೇನೆ’ ಎಂದಿದ್ದಾರೆ.
ఎప్పుడు చెప్పాలో అప్పుడు చెప్తాను… #Rashmika first reaction on her engagement with #VijayDeverakonda pic.twitter.com/niLxyU8xpc
— Rajesh Manne (@rajeshmanne1) October 27, 2025
ಸಾಮಾನ್ಯವಾಗಿ ವದಂತಿಗಳು ಎಂದಾಗ ಸೆಲೆಬ್ರಿಟಿಗಳು ಕಡ್ಡಿ ಮುರಿದಂತೆ ಮಾತನಾಡಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ನಾಚುತ್ತಲೇ ‘ಸಮು ಬಂದಾಗ ಹೇಳ್ತೀನಿ’ ಎಂದಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ವಿಚಾರವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ತಮ್ಮದೇ ಸಿನಿಮಾವನ್ನು ಕದ್ದು-ಮುಚ್ಚಿ ನೋಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಹಲವು ಸಿನಿಮಾಗಳು ಯಶಸ್ಸು ಕಂಡಿದೆ. ‘ದಿ ಗರ್ಲ್ಫ್ರೆಂಡ್’ ಚಿತ್ರದ ಬಗ್ಗೆಯೂ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಕನ್ನಡದವರೇ ಆದ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ತೆಲುಗು ಜೊತೆಗೆ ಕನ್ನಡ ಮೊದಲಾದ ಭಾಷೆಗಳಲ್ಲೂ ಬಿಡುಗಡೆ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:33 am, Tue, 28 October 25