ರಶ್ಮಿಕಾಗೋಸ್ಕರ ಅತಿಥಿ ಪಾತ್ರ ಮಾಡಲು ರೆಡಿ ಆಗಿದ್ದ ಸಂದೀಪ್ ವಂಗ; ನೋ ಎಂದಿದ್ದೇಕೆ?
ರಶ್ಮಿಕಾ ಮಂದಣ್ಣ ಅವರು ‘ದಿ ಗರ್ಲ್ಫ್ರೆಂಡ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೀಕ್ಷಿತ್ ಶೆಟ್ಟಿ ಹೀರೋ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಹುಡುಗ ಹಾಗೂ ಹುಡುಗಿ ಮಧ್ಯೆ ಇರೋ ಪ್ರೀತಿ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಂದೀಪ್ ಅವರು ಅತಿಥಿ ಪಾತ್ರ ಮಾಡಬೇಕಿತ್ತು.

ಸಂದೀಪ್ ರೆಡ್ಡಿ ವಂಗ (Sandeep Reddy Vanga) ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಿರ್ದೇಶನ ಮಾಡುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ಅತಿಥಿ ಪಾತ್ರ ಮಾಡಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರು ನೋ ಎಂದರು. ಈ ವಿಚಾರ ಸಾಕಷ್ಟು ಚರ್ಚೆ ಆಯಿತು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದವು. ಈಗ ಸಂದೀಪ್ ರೆಡ್ಡಿ ವಂಗ ಅವರೇ ಸಿನಿಮಾ ಒಂದರಲ್ಲಿ ನಟಿಸೋದಾಗಿ ಹೇಳಿ ಆ ಬಳಿಕ ನೋ ಎಂದಿದ್ದಾರೆ ಎಂದು ವರದಿ ಆಗಿದೆ.
ರಶ್ಮಿಕಾ ಮಂದಣ್ಣ ಅವರು ‘ದಿ ಗರ್ಲ್ಫ್ರೆಂಡ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೀಕ್ಷಿತ್ ಶೆಟ್ಟಿ ಹೀರೋ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಹುಡುಗ ಹಾಗೂ ಹುಡುಗಿ ಮಧ್ಯೆ ಇರೋ ಪ್ರೀತಿ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಂದೀಪ್ ಅವರು ಅತಿಥಿ ಪಾತ್ರ ಮಾಡಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಇದನ್ನು ತಿರಸ್ಕರಿಸಿದರು ಎನ್ನಲಾಗಿದೆ.
ಸಂದೀಪ್ ನಿರ್ದೇಶನದ ‘ಅನಿಮಲ್’ ಸಿನಿಮಾಗೆ ರಶ್ಮಿಕಾ ನಾಯಕಿ. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಹೀಗಾಗಿ, ರಶ್ಮಿಕಾ ಹಾಗೂ ಸಂದೀಪ್ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಈ ಗೆಳೆತನದ ಕಾರಣದಿಂದಲೇ ರಶ್ಮಿಕಾ ಮಂದಣ್ಣ ಅವರು ಸಂದೀಪ್ ಬಳಿ ‘ಗರ್ಲ್ಫ್ರೆಂಡ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವಂತೆ ಕೋರಿದ್ದರು. ಇದಕ್ಕೆ ಸಂದೀಪ್ ಒಪ್ಪಿದ್ದರು. ಆದರೆ, ಅವರಿಗೆ ಈ ಪಾತ್ರ ತಮಗೆ ಸೂಕ್ತ ಅಲ್ಲ ಎನಿಸಿತು.
ಇದನ್ನೂ ಓದಿ: ಸಂದೀಪ್ ರೆಡ್ಡಿ ವಂಗ ಯಾವಾಗಲೂ ಕುರ್ತಾ ಧರಿಸೋದು ಏಕೆ? ಆ ಘಟನೆಯೇ ಕಾರಣ
ಸಂದೀಪ್ಗೆ ಕೊಡಲಾದ ಪಾತ್ರ ಕೇವಲ ಅತಿಥಿ ಪಾತ್ರ ಆಗಿರಲಿಲ್ಲ. ಇದಕ್ಕೆ ಸಾಕಷ್ಟು ತೂಕ ಇದೆಯಂತೆ. ಇದನ್ನು ತಾವು ಮಾಡೋ ಬದಲು ಅದಕ್ಕೆ ಸೂಕ್ತ ಎನಿಸಿದ ಕಲಾವಿದರೇ ಮಾಡಲಿ ಎಂಬುದು ಸಂದೀಪ್ ಅವರ ಅಭಿಪ್ರಾಯ ಆಗಿತ್ತು. ಈ ಕಾರಣದಿಂದಲೇ ಅವರು ತಾವು ನಟಿಸೋದಿಲ್ಲ ಎಂದರು. ನಂತರ ಇದನ್ನು ವೆನ್ನಲ್ಲ ಕಿಶೋರ್ಗೆ ನೀಡಲಾಯಿತು. ಅವರು ಕೂಡ ಆಫರ್ ತಿರಸ್ಕರಿಸಿದರು. ಕೊನೆಗೆ ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್ ಅವರೇ ಈ ಚಿತ್ರದಲ್ಲಿ ನಟಿಸಬೇಕಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








