
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಭಾಷೆಗಳ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಅವರಿಗೆ ಹೊಸ ಹೊಸ ಆಫರ್ಗಳು ಬರುತ್ತಿವೆ. ಎಲ್ಲ ಪ್ರಾಜೆಕ್ಟ್ಗಳ ಪೈಕಿ ಅವರ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವುದು ‘ಪುಷ್ಪ 2’ (Pushpa 2) ಸಿನಿಮಾ ಮೇಲೆ. ಹತ್ತು ಹಲವು ಕಾರಣಗಳಿಂದ ರಶ್ಮಿಕಾ ಮಂದಣ್ಣ ಅವರಿಗೆ ಈ ಸಿನಿಮಾ ಸ್ಪೆಷಲ್ ಎನಿಸಿಕೊಂಡಿದೆ. ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಗಿದ್ದರಿಂದ ಹೆಚ್ಚಿನ ಕಾಳಜಿ ವಹಿಸಿ ಅದರ ಸೀಕ್ವೆಲ್ ಮಾಡಲಾಗುತ್ತಿದೆ. ನಿರ್ದೇಶಕ ಸುಕುಮಾರ್ (Sukumar) ಅವರ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ನೀಡಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಅದರ ಬೆನ್ನಲ್ಲೇ ಅಭಿಮಾನಿಗಳು ಕಥಾನಾಯಕಿ ಶ್ರೀವಲ್ಲಿ ಪಾತ್ರದ ಬಗ್ಗೆ ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ ನಾಯಕ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ರಶ್ಮಿಕಾ ನಿಭಾಯಿಸುತ್ತಿರುವ ಶ್ರೀವಲ್ಲಿ ಪಾತ್ರ ಚೆನ್ನಾಗಿ ಮೂಡಿಬರಬೇಕು ಎಂಬುದು ಅಭಿಮಾನಿಗಳ ಬಯಕೆ. ಅದಕ್ಕಾಗಿ ಈಗಲೇ ಬೇಡಿಕೆ ಇಡಲಾಗಿದೆ. ‘ಶ್ರೀವಲ್ಲಿ ಪಾತ್ರವನ್ನು ಇನ್ನಷ್ಟು ಸ್ಟ್ರಾಂಗ್ ಆಗಿ ತೋರಿಸಿ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಹಾಗೆಯೇ ಆಗಬೇಕು ಅಂತ ನಾನು ಕೂಡ ಅಂದುಕೊಂಡಿದ್ದೇನೆ. ನೋಡೋಣ..’ ಎಂದು ರಶ್ಮಿಕಾ ಮಂದಣ್ಣ ಕಮೆಂಟ್ ಮಾಡಿದಾರೆ.
ಈ ಸಿನಿಮಾ ಬಗ್ಗೆ ಮೊದಲಿನಿಂದಲೂ ಹಲವು ಗಾಸಿಪ್ಗಳು ಹರಿದಾಡುತ್ತಲೇ ಇವೆ. ಸಿನಿಮಾದ ಆರಂಭದಲ್ಲೇ ಕಥಾನಾಯಕಿ ಶ್ರೀವಲ್ಲಿ ಪಾತ್ರ ಸಾಯಲಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅದು ನಿಜವಲ್ಲ ಎಂದು ನಿರ್ಮಾಪಕರು ಒಮ್ಮೆ ಸ್ಪಷ್ಟನೆ ನೀಡಿದ್ದರು. ‘ಪುಷ್ಪ 2’ ಚಿತ್ರವನ್ನು ಜನರ ನಿರೀಕ್ಷೆಗೂ ಮೀರಿ ಕಟ್ಟಿಕೊಡಬೇಕು ಎಂಬ ಆಶಯದೊಂದಿಗೆ ಇಡೀ ತಂಡ ಕೆಲಸ ಮಾಡುತ್ತಿದೆ.
ತೆಲುಗು ಮಾತ್ರವಲ್ಲದೇ ಇಡೀ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪುಷ್ಪ’ ಸಿನಿಮಾ ಯಶಸ್ಸು ಕಂಡಿತು. ಹಿಂದಿ ಪ್ರೇಕ್ಷಕರು ಈ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದರು. ಅದರ ಪರಿಣಾಮವಾಗಿ ಹಿಂದಿ ವರ್ಷನ್ನಿಂದಲೇ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಆ ಚಿತ್ರದ ಹೆಚ್ಚುಗಾರಿಕೆ. ಈಗ ಅದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ‘ಪುಷ್ಪ 2’ ಹಿಟ್ ಆಗಬೇಕು ಎಂಬ ಗುರಿ ಇಟ್ಟುಕೊಂಡಿದೆ ಚಿತ್ರತಂಡ. ‘ಮೈತ್ರಿ ಮೂವೀ ಮೇಕರ್ಸ್’ ಬ್ಯಾನರ್ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.