ಟಾಲಿವುಡ್​​ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರೊಂದಿಗೆ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಭಿಮಾನಿಗಳಲ್ಲಿ ಸಂತೋಷವನ್ನು ತಂದಿದೆ. 'AA22xA6' ಎಂಬ ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸುತ್ತಿದ್ದಾರೆ.

ಟಾಲಿವುಡ್​​ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ
ರಶ್ಮಿಕಾ

Updated on: Jul 10, 2025 | 7:00 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ ಗೆಲ್ಲುವ ಕುದುರೆ. ಅವರು ಮುಟ್ಟಿದ್ದೆಲ್ಲ ಚಿನ್ನ. ಅವರು ಇದ್ದರೆ ಸಿನಿಮಾ ಗೆಲ್ಲುತ್ತದೆಯೋ ಅಥವಾ ಗೆಲ್ಲುವ ಚಿತ್ರದಲ್ಲಿ ಅವರಿರುತ್ತಾರೋ ಎಂಬುದು ಸದ್ಯದ ಪ್ರಶ್ನೆ. ಒಟ್ಟಿನಲ್ಲಿ ನಿರ್ಮಾಪಕರ ಪಾಲಿಗೆ ರಶ್ಮಿಕಾ ಅದೃಷ್ಟ ಲಕ್ಷ್ಮೀ. ಈ ಕಾರಣದಿಂದಲೇ ನಿರ್ಮಾಪಕರು ಅವರ ಮನೆಯ ಬಾಗಿಲು ತಟ್ಟುವ ಕೆಲಸ ಮಾಡುತ್ತಿದ್ದಾರೆ. ಈಗ ರಶ್ಮಿಕಾಗೆ ಒಂದು ಬಂಪರ್ ಆಫರ್ ಸಿಕ್ಕಿದೆ. ಅವರು ಅಲ್ಲು ಅರ್ಜುನ್ ಜೊತೆ ಮತ್ತೆ ಸಿನಿಮಾ ಮಾಡಲಿದ್ದಾರೆ!

ಅಲ್ಲು ಅರ್ಜುನ್ ಟಾಲಿವುಡ್​ನ ಬೇಡಿಕೆಯ ಹೀರೋ. ಅವರು ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಜೊತೆ ನಟಿಸಿದ್ದರು. ಈ ಎರಡೂ ಚಿತ್ರಗಳು ಯಶಸ್ಸು ಕಂಡಿದ್ದು ಗೊತ್ತೇ ಇದೆ. ಈಗ ಇವರಿಬ್ಬರೂ ಮತ್ತೊಂದು ಸಿನಿಮಾಗಾಗಿ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈ ವಿಚಾರ ರಶ್ಮಿಕಾ ಫ್ಯಾನ್ಸ್ ಖುಷಿ ಹೆಚ್ಚಿಸಿದೆ.

ಸನ್ ಪಿಕ್ಚರ್ಸ್ ನಿರ್ಮಾಣದ ‘AA22xA6’ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ಅಟ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸೆಟ್ಟೇರಿದ್ದು, 2026ರ ಕೊನೆ ಅಥವಾ 2027ರ ಆರಂಭದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಹಾಗೂ ಮೃಣಾಲ್ ಠಾಕೂರ್ ಇರೋದು ಖಚಿತವಾಗಿದೆ. ಇವರ ಜೊತೆ ರಶ್ಮಿಕಾ ಕೂಡ ನಟಿಸುತ್ತಿದ್ದಾರೆ. ಆದರೆ, ಈ ಬಾರಿ ಅಲ್ಲು ಅರ್ಜುನ್ ಜೊತೆ ರೊಮ್ಯಾನ್ಸ್ ಮಾಡೋ ಅವಕಾಶ ನಟಿಗೆ ಸಿಗೋದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ
‘ನಾನು ಗೌರಿಯನ್ನು ಮದುವೆಯಾಗಿ ಆಗಿದೆ..’; ಶಾಕಿಂಗ್ ಅಪ್​ಡೇಟ್ ಕೊಟ್ಟ ಆಮಿರ್
ನಿರ್ದೇಶಕನ ಜೊತೆಗಿನ ಪ್ರೀತಿ ವಿಚಾರವನ್ನು ಖಚಿತಪಡಿಸಿದ ಸಮಂತಾ; ಕ್ಯೂಟ್ ಫೋಟೋ
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಸದ್ಯ ‘ಪುಷ್ಪ 3’ ಸಿನಿಮಾ ಕೂಡ ಬರಬೇಕಿದೆ. ಅದು ಕೂಡ ಸೆಟ್ಟೇರಿದರೆ ರಶ್ಮಿಕಾ ಅವರು ನಾಲ್ಕನೇ ಬಾರಿಗೆ ಅಲ್ಲು ಅರ್ಜುನ್ ಜೊತೆ ಒಂದಾಗಲಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಜೋಡಿಯನ್ನು ಇಷ್ಟಪಡುವವರಿಗೆ ಇದು ತುಂಬಾನೇ ಖುಷಿ ಸುದ್ದಿ.

ಇದನ್ನೂ ಓದಿ: ಬಾಲಿವುಡ್​ಗೆ ಹೋಲಿಸಿದರೆ ಸ್ಯಾಂಡಲ್​ವುಡ್​ನಲ್ಲಿ ಕೆಲಸ ಮಾಡೋದು ಸುಲಭ ಎಂದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಿಟ್ ನೀಡುತ್ತಿದ್ದಾರೆ. ‘ಅನಿಮಲ್’, ‘ಛಾವ’, ‘ಪುಷ್ಪ 2’ ರೀತಿಯ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಗೆದ್ದು ಬೀಗಿವೆ. ಇದರಿಂದ ರಶ್ಮಿಕಾ ಬೇಡಿಕೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us