ಸಂದರ್ಶನದಲ್ಲಿ ರಶ್ಮಿಕಾಗೆ ಕಂಗ್ರಾಜ್ಯುಲೇಷನ್ ಹೇಳಿದ ಆ್ಯಂಕರ್; ನಾಚಿ ನೀರಾದ ನಟಿ
ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ವಿಜಯ್ ದೇವರಕೊಂಡ ಜೊತೆ ಹಲವು ವರ್ಷಗಳಿಂದ ರಿಲೇಶನ್ಶಿಪ್ನಲ್ಲಿ ಇದ್ದಾರೆ. ಇವರ ಸಂಬಂಧದ ಮೇಲೆ ಯಾರ ಕಣ್ಣೂ ಬೀಳದಿರಲಿ ಎಂಬುದು ಅನೇಕರ ಕೋರಿಕೆ. ಫೆಬ್ರವರಿ ವೇಳೆಗೆ ರಶ್ಮಿಕಾ ಮಂದಣ್ಣ ಮದುವೆ ಆಗಬಹುದು ಎಂದು ಹೇಳಲಾಗುತ್ತಿದೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಈ ವಿಚಾರದಲ್ಲಿ ಯಾರೊಬ್ಬರೂ ಸ್ಪಷ್ಟನೆ ಕೊಟ್ಟಿಲ್ಲ. ಈ ಮಧ್ಯೆ ರಶ್ಮಿಕಾ ಮಂದಣ್ಣ ಅವರ ಉಂಗುರ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದು ಎಂಗೇಜ್ಮೆಂಟ್ ಗಿಫ್ಟ್ ಎಂದು ಅನೇಕರು ಊಹಿಸಿದ್ದಾರೆ. ಹೀಗಿರುವಾಗಲೇ ಒಂದು ವಿಷಯ ಚರ್ಚೆಗೆ ಕಾರಣ ಆಗಿದೆ. ಅವರಿಗೆ ಸಂದರ್ಶಕ ಕಂಗ್ರಾಜ್ಯುಲೇಷನ್ ಹೇಳಿದರು. ಇದರಿಂದ ರಶ್ಮಿಕಾ ನಾಚಿ ನೀರಾದರು.
ರಶ್ಮಿಕಾ ಸಣ್ಣ ಸಣ್ಣ ವಿಚಾರಕ್ಕೂ ಹೆಚ್ಚು ನಾಚಿಕೊಳ್ಳುತ್ತಾರೆ. ಈಗ ಅವರು ‘ಥಮ’ ಸಿನಿಮಾ ಪ್ರಮೋಷನ್ ಅಲ್ಲಿ ಭಾಗಿ ಆಗುತ್ತಿದ್ದಾರೆ. ಹಲವು ಕಡೆಗಳಲ್ಲಿ ಸಂದರ್ಶನ ನೀಡುತ್ತಾ ಇದ್ದಾರೆ. ಇದೇ ರೀತಿ ಸಂದರ್ಶನ ನೀಡುವಾಗ ‘ರಶ್ಮಿಕಾ ಅವರೇ ಕಂಗ್ರ್ಯಾಜ್ಯಲೇಷನ್’ ಎಂದು ಸಂದರ್ಶಕ ಹೇಳಿದರು. ಆಗ ರಶ್ಮಿಕಾ ಯೋಚಿಸುತ್ತಾ ನಿಂತರು. ‘ಸಿನಿಮಾದಲ್ಲಿ ನಿಮ್ಮ ಪರ್ಫಾರ್ಮೆನ್ಸ್ಗೆ’ ಎಂದು ಸಂದರ್ಶಕ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ದೈವ vs ದೆವ್ವ: ‘ಕಾಂತಾರ 1’ ನಾಗಾಲೋಟಕ್ಕೆ ಬ್ರೇಕ್ ಹಾಕಲಿದೆಯೇ ರಶ್ಮಿಕಾ ಮಂದಣ್ಣ ಸಿನಿಮಾ
ಆಗ ರಶ್ಮಿಕಾ ಮಂದಣ್ಣ ಅವರು ನಾಚುತ್ತಲೇ, ‘ಧನ್ಯವಾದ’ ಹೇಳಿದರು. ಆಗ ರಶ್ಮಿಕಾಗೆ ಒಂದು ವಿಚಾರವನ್ನು ಸಂದರ್ಶಕರು ಕೇಳಿದರು. ‘ನೀವು ಬೇರೆ ಏನಾದರೂ ಯೋಚಿಸುತ್ತಿದ್ದಿರಾ’ ಎಂದರು. ಆಗ ರಶ್ಮಿಕಾ ಅವರು ಇಲ್ಲ ಎಂಬ ಉತ್ತರ ನೀಡಿದರು. ಇದನ್ನು ವೈರಲ್ ಮಾಡಲಾಗುತ್ತಾ ಇದೆ. ಅನೇಕರು ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಕಂಗ್ರ್ಯಾಜ್ಯುಲೇಷನ್ ಹೇಳಿದಾಗ ಅವರು ಕೊಂಚ ಅಂಜಿದರು ಎಂದು ಅನೇಕರು ಹೇಳುತ್ತಿದ್ದಾರೆ.
Girlll🤣 thought something else🤭@iamRashmika pic.twitter.com/aM5uCmPMwn
— Rushieee_Stan (@rashmika_girllv) October 15, 2025
ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ವಿಜಯ್ ದೇವರಕೊಂಡ ಜೊತೆ ಹಲವು ವರ್ಷಗಳಿಂದ ರಿಲೇಶನ್ಶಿಪ್ನಲ್ಲಿ ಇದ್ದಾರೆ. ಇವರ ಸಂಬಂಧದ ಮೇಲೆ ಯಾರ ಕಣ್ಣೂ ಬೀಳದಿರಲಿ ಎಂಬುದು ಅನೇಕರ ಕೋರಿಕೆ. ಫೆಬ್ರವರಿ ವೇಳೆಗೆ ರಶ್ಮಿಕಾ ಮಂದಣ್ಣ ಮದುವೆ ಆಗಬಹುದು ಎಂದು ಹೇಳಲಾಗುತ್ತಿದೆ. ಅವರು ಒಪ್ಪಿಕೊಂಡಿರುವ ಕೆಲಸವು ಸಿನಿಮಾಗಳು ಬಾಕಿ ಇದ್ದು, ಅದರ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ‘ಪುಷ್ಪ 2’, ‘ಅನಿಮಲ್’ ಮೊದಲಾದ ಸಿನಿಮಾಗಳು ಗೆದ್ದಿವೆ. ಈಗ ‘ಥಮ’ ಮೂಲಕ ಅವರು ಮತ್ತೊಂದು ಗೆಲುವಿಗಾಗಿ ಕಾಯುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್ 21ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







