Rasmika Mandanna: ಹೊಸ ಅವತಾರದಲ್ಲಿ ಬಂದ ರಶ್ಮಿಕಾ ಮಂದಣ್ಣ; ಬರ್ತ್​​ಡೇಗೆ ಪೋಸ್ಟರ್ ಗಿಫ್ಟ್

‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಆಗಿ ಕಾಣಿಸಿಕೊಂಡಿದ್ದರು. ಹಳ್ಳಿ ಹುಡುಗಿ ಆಗಿರುವ ಈಕೆಗೆ ಸಖತ್ ನಾಚಿಕೆ. ಹುಡುಗನ ಎದುರು ನಿಂತು ಮಾತನಾಡಲೂ ಆಕೆ ಹೆದರುತ್ತಾಳೆ. ಪುಷ್ಪರಾಜ್ ಜೊತೆ ಸೇರಿ ಶ್ರೀವಲ್ಲಿ ಕೂಡ ಬದಲಾಗುತ್ತಾಳೆಯೇ ಎನ್ನುವ ಪ್ರಶ್ನೆಯನ್ನು ಪೋಸ್ಟರ್ ಹುಟ್ಟುಹಾಕಿದೆ.

Rasmika Mandanna: ಹೊಸ ಅವತಾರದಲ್ಲಿ ಬಂದ ರಶ್ಮಿಕಾ ಮಂದಣ್ಣ; ಬರ್ತ್​​ಡೇಗೆ ಪೋಸ್ಟರ್ ಗಿಫ್ಟ್
ರಶ್ಮಿಕಾ
Edited By:

Updated on: Apr 05, 2024 | 11:43 AM

ಸೆಲೆಬ್ರಿಟಿಗಳ ಬರ್ತ್​ಡೇ ದಿನ ಅವರ ಮುಂದಿನ ಸಿನಿಮಾಗಳ ಪೋಸ್ಟರ್​, ಟೀಸರ್ ರಿಲೀಸ್ ಮಾಡಲಾಗುತ್ತದೆ. ಇಂದು (ಏಪ್ರಿಲ್ 5) ರಶ್ಮಿಕಾ ಮಂದಣ್ಣ ಅವರ ಬರ್ತ್​ಡೇ. ಆ ಪ್ರಯುಕ್ತ ‘ಪುಷ್ಪ 2’ (Pushpa 2 Movie) ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಪುಷ್ಪ’ ಚಿತ್ರದಲ್ಲಿನ ಲುಕ್​ಗೂ ಈ ಲುಕ್​ಗೂ ಸಾಕಷ್ಟು ಭಿನ್ನತೆ ಇದೆ. ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಆಗಿದೆ.

‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಆಗಿ ಕಾಣಿಸಿಕೊಂಡಿದ್ದರು. ಹಳ್ಳಿ ಹುಡುಗಿ ಆಗಿರುವ ಈಕೆಗೆ ಸಖತ್ ನಾಚಿಕೆ. ಹುಡುಗನ ಎದುರು ನಿಂತು ಮಾತನಾಡಲೂ ಆಕೆ ಹೆದರುತ್ತಾಳೆ. ಆಕೆ ಎಲ್ಲದಕ್ಕೂ ಅಂಜುತ್ತಾಳೆ. ಆದರೆ, ‘ಪುಷ್ಪ 2’ ಚಿತ್ರದಲ್ಲಿ ಅವರ ಪಾತ್ರ ಆ ರೀತಿ ಇರುವುದಿಲ್ಲ ಎನ್ನಲಾಗಿದೆ. ಪುಷ್ಪರಾಜ್ ಜೊತೆ ಸೇರಿ ಶ್ರೀವಲ್ಲಿ ಕೂಡ ಬದಲಾಗುತ್ತಾಳೆಯೇ ಎನ್ನುವ ಪ್ರಶ್ನೆಯನ್ನು ಪೋಸ್ಟರ್ ಹುಟ್ಟುಹಾಕಿದೆ.

ರಶ್ಮಿಕಾ ಮಂದಣ್ಣ ಅವರು ಸೀರೆ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ತಿನಲ್ಲಿ ಸಾಕಷ್ಟು ಜ್ಯುವೆಲರಿ ಹೇರಿಕೊಂಡಿದ್ದಾರೆ. ಕಣ್ಣಿನ ಬಳಿ ಕೈ ಇದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ. ಈ ಮೂಲಕ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹಾಕಿಕೊಳ್ಳುವ ಮಾತೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಮೊದಲು ಅನೇಕರು ಸಿನಿಮಾ ರಿಲೀಸ್ ಬಗ್ಗೆ ಸಾಕಷ್ಟು ವದಂತಿ ಹಬ್ಬಿಸಿದ್ದರು. ಈ ವದಂತಿಗೆ ತೆರೆ ಬಿದ್ದಂತೆ ಆಗಿದೆ.  ‘ಪುಷ್ಪ’ ಸಿನಿಮಾದ ಟ್ವಿಟರ್ ಖಾತೆ ಮೂಲಕ ಪೋಸ್ಟರ್ ಹಂಚಿಕೊಳ್ಳಲಾಗಿದೆ. ರಶ್ಮಿಕಾ ಲುಕ್ ಅನೇಕರಿಗೆ ಇಷ್ಟ ಆಗಿದೆ.

‘ಪುಷ್ಪ’ ಸಿನಿಮಾಗಿಂತಲೂ ದೊಡ್ಡ ಬಜೆಟ್​ನಲ್ಲಿ ‘ಪುಷ್ಪ 2’ ಸಿನಿಮಾ ಮೂಡಿ ಬರುತ್ತಿದೆ. ಈ ಮೊದಲು ರಶ್ಮಿಕಾ ಮಂದಣ್ಣ ಕೂಡ ಈ ಬಗ್ಗೆ ಮಾತನಾಡಿದ್ದರು. ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ದೊಡ್ಡದಾಗಿರಲಿದೆ ಎಂದು ಹೇಳಿಕೊಂಡಿದ್ದರು. ಪೋಸ್ಟರ್ ನೋಡಿದ ಅನೇಕರಿಗೆ ಇದು ಹೌದೆನ್ನಿಸುತ್ತಿದೆ.


ರಶ್ಮಿಕಾ ಮಂದಣ್ಣ ಜೊತೆ ಅಲ್ಲು ಅರ್ಜುನ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಕಳೆದ ವರ್ಷ ಅವರ ಲುಕ್ ರಿವೀಲ್ ಮಾಡಲಾಗಿತ್ತು. ಅಲ್ಲು ಅರ್ಜುನ್ ಅವರು ಸೀರೆ ಉಟ್ಟು, ಮೈಗೆ ಬಣ್ಣ ಬಳಿದುಕೊಂಡು ಕಾಣಿಸಿದ್ದರು. ಅವರ ಕತ್ತಿನಲ್ಲೂ ಸಾಕಷ್ಟು ಜ್ಯುವೆಲರಿಗಳು ಇದ್ದವು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಹೇಗಿತ್ತು? ಕೆಲವೇ ವರ್ಷಗಳಲ್ಲಿ ಎಲ್ಲವೂ ಬದಲಾಯ್ತು

ರಶ್ಮಿಕಾ ಮಂದಣ್ಣ ಅವರು ಸದ್ಯ ಬರ್ತ್​ಡೇ ಆಚರಿಸಿಕೊಳ್ಳಲು ಅಬು ಧಾಬಿಗೆ ತೆರಳಿದ್ದಾರೆ. ಅಲ್ಲಿನ ರೆಸಾರ್ಟ್ ಒಂದರಲ್ಲಿ ಅವರು ವಾಸವಾಗಿದ್ದಾರೆ. ಕಾಡುಪ್ರಾಣಿಗಳ ಜೊತೆ ಇರೋ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ. ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ತೆರಳಿದ್ದಾರೆ ಎಂದು ವರದಿ ಆಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:41 am, Fri, 5 April 24