ಬಿಡುಗಡೆಗೆ ನಾಲ್ಕು ದಿನವಿರುವಾಗ ರಶ್ಮಿಕಾ ಸಿನಿಮಾ ರಿಲೀಸ್ ಮುಂದೂಡಿಕೆ

ರಶ್ಮಿಕಾ ಮಂದಣ್ಣ ‘ಮೈಸಾ’ ಸಿನಿಮಾನಲ್ಲಿ ಮೊದಲ ಬಾರಿಗೆ ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದ ಪೋಸ್ಟರ್, ಟೀಸರ್​​ಗಳಲ್ಲಿ ರಕ್ತ-ಸಿಕ್ತವಾಗಿ ಅತ್ಯಂತ ವಯಲೆಂಟ್ ಆಗಿ ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ರಶ್ಮಿಕಾ ಅಭಿಮಾನಿಗಳಿಗೆ ನಿರೀಕ್ಷೆಗಳಿದ್ದವು. ಸಿನಿಮಾ ನವೆಂಬರ್ 27ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಬಿಡುಗಡೆಗೆ ಇನ್ನು ನಾಲ್ಕು ದಿನಗಳಿರುವಾಗ ಸಿನಿಮಾ ರಿಲೀಸ್ ಅನ್ನು ಮುಂದೂಡಲಾಗಿದೆ.

ಬಿಡುಗಡೆಗೆ ನಾಲ್ಕು ದಿನವಿರುವಾಗ ರಶ್ಮಿಕಾ ಸಿನಿಮಾ ರಿಲೀಸ್ ಮುಂದೂಡಿಕೆ
Rashmika Mandanna Mysaa

Updated on: Nov 22, 2026 | 7:07 PM

ಮುಖ್ಯಾಂಶಗಳು

  • ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ನಿರಾಸೆ
  • ಮುಂದೆ ಹೋಯ್ತು ರಶ್ಮಿಕಾ ನಟನೆಯ ಸಿನಿಮಾ
  • ‘ಮೈಸಾ’ ಸಿನಿಮಾ ಮುಂದೂಡಲ್ಪಟ್ಟಿದೆ

ರಶ್ಮಿಕಾ ಮಂದಣ್ಣ ನಟನೆ ಮಾಡಿರುವ ಆಕ್ಷನ್ ಸಿನಿಮಾ ‘ಮೈಸಾ’ ತನ್ನ ಟೀಸರ್, ಹಾಡು, ಬಿಹೈಂಡ್​​ ದಿ ಕ್ಯಾಮೆರಾ ವಿಡಿಯೋಗಳಿಂದ ಸಖತ್ ಕುತೂಹಲ ಮೂಡಿಸಿತ್ತು. ರಶ್ಮಿಕಾ ಮಂದಣ್ಣ ಅಂತೂ ಮೊದಲ ಬಾರಿಗೆ ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದ ಪೋಸ್ಟರ್, ಟೀಸರ್​​ಗಳಲ್ಲಿ ರಕ್ತ-ಸಿಕ್ತವಾಗಿ ಅತ್ಯಂತ ವಯಲೆಂಟ್ ಆಗಿ ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ರಶ್ಮಿಕಾ ಅಭಿಮಾನಿಗಳಿಗೆ ನಿರೀಕ್ಷೆಗಳಿದ್ದವು. ಸಿನಿಮಾ ನವೆಂಬರ್ 27ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಬಿಡುಗಡೆಗೆ ಇನ್ನು ನಾಲ್ಕು ದಿನಗಳಿರುವಾಗ ಸಿನಿಮಾ ರಿಲೀಸ್ ಅನ್ನು ಮುಂದೂಡಲಾಗಿದೆ.

‘ಮೈಸಾ’ ಸಿನಿಮಾದ ನಿರ್ಮಾಪಕರಾದ ಅನ್‌ಫಾರ್ಮುಲಾ ಫಿಲ್ಮ್ಸ್ ಮತ್ತು ನಿರ್ದೇಶಕ ರವೀಂದ್ರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ‘ಮೈಸಾ’ ಸಿನಿಮಾ ರಿಲೀಸ್​​ ಮುಂದೂಡಿಕೆಯನ್ನು ಖಾತ್ರಿಪಡಿಸಿದ್ದಾರೆ. ‘’ಮೈಸಾ’ ಚಿತ್ರವನ್ನು ತೆಲುಗು ಸಿನಿಮಾದಿಂದ ತಾಂತ್ರಿಕವಾಗಿ ಹೆಚ್ಚು ಉತ್ತಮವಾದ, ತನ್ನದೇ ಆದ ವಿಶಿಷ್ಟ ಆಕ್ಷನ್ ದೃಶ್ಯಕಾವ್ಯವಾಗಿ ಕಲ್ಪಿಸಲಾಗಿದೆ, ಇದು ದೊಡ್ಡ ಪರದೆಯ ತಲ್ಲೀನಗೊಳಿಸುವ ಅನುಭವವನ್ನು ನೀಡಲು ಸಿದ್ಧವಾಗಿದೆ. ಈ ದೃಷ್ಟಿಕೋನವನ್ನು ಯಾವುದೇ ರಾಜಿಯಿಲ್ಲದೆ ಪ್ರೇಕ್ಷಕರಿಗೆ ತಲುಪಿಸಲು, ನವೆಂಬರ್ 27ರಂದು ನಿಗದಿಯಾಗಿದ್ದ ಚಿತ್ರದ ಚಿತ್ರಮಂದಿರ ಬಿಡುಗಡೆಯನ್ನು ಮುಂದೂಡಲು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ. ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ: “ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು, ನಿಮ್ಮ ನಿರಂತರ ಪ್ರೀತಿ, ತಾಳ್ಮೆ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಕಾಯುವಿಕೆ ಹೆಚ್ಚು ಕಾಲ ಇರುವುದಿಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.”

Loading...

ರಶ್ಮಿಕಾ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಹೇಳಿಕೆಯನ್ನು ಹಂಚಿಕೊಂಡು, ಹೊಸ ಬಿಡುಗಡೆ ದಿನಾಂಕ ತನಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಅವರು ಬರೆದುಕೊಂಡಿರುವುದು ಹೀಗೆ: “ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುತ್ತಿದೆ, ಯಾವಾಗಕ್ಕೆ ಅಂತ ಗೊತ್ತಿಲ್ಲ, ಆದರೆ ಪಕ್ಕಾ ನನಗೆ ಗೊತ್ತಾದಾಗ ನಿಮಗೂ ತಿಳಿಸ್ತೀನಿ’ ಎಂದಿದ್ದಾರೆ.

ಇದನ್ನೂ ಓದಿ:ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು

‘ಮೈಸಾ’ ಚಿತ್ರ ನವೆಂಬರ್ 27ರಂದು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು. ಈಶ್ವರಿ ರಾವ್, ರಾಹುಲ್ ರವೀಂದ್ರನ್, ಸಮುದ್ರಕನಿ, ರಾವ್ ರಮೇಶ್, ಶಿವ ಕಂದುಕೂರಿ, ಕಾರ್ತಿಕ್ ರಂಜಿನಿ, ತಾರಕ್ ಪೊನ್ನಪ್ಪ ಮತ್ತು ನಿಧಿ ಸಿಂಗ್ ಕೂಡ ಇದರಲ್ಲಿ ನಟಿಸಿದ್ದಾರೆ. ಜೇಕ್ಸ್ ಬಿಜೋಯ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ಮೈಸಾ’ ಟೀಸರ್ ಅನ್ಯಾಯದ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿಗೆ ಸಿಲುಕುವ ಗೊಂಡ ಬುಡಕಟ್ಟು ಹುಡುಗಿಯ ಕಥೆಯನ್ನು ಹೇಳುತ್ತದೆ.

ರಶ್ಮಿಕಾ, ಸಾಕಷ್ಟು ಆಕ್ಷನ್ ದೃಶ್ಯಗಳಲ್ಲಿ ಈ ಸಿನಿಮಾಕ್ಕಾಗಿ ಪಾಲ್ಗೊಂಡಿದ್ದಾರೆ. ನೀರಿನ ಆಳದಲ್ಲಿ ಸತತವಾಗಿ ಶೂಟ್ ಮಾಡಿದ್ದಾರೆ. 90 ಅಡಿ ಎತ್ತರಿಂದ ರೋಪ್ ಕಟ್ಟಿಕೊಂಡು ಖುದ್ದು ಅವರೇ ಧುಮುಕಿದ್ದಾರೆ. ಥಾಯ್ಲೆಂಡ್​​ಗೆ ಹೋಗಿ ಮುವಥಾಯ್ ಸೇರಿದಂತೆ ಇನ್ನೂ ಕೆಲವು ಸಮರ ಕಲೆಗಳನ್ನು ಕಲಿತು ಬಂದಿದ್ದಾರೆ. ಒಟ್ಟಾರೆ ಈ ಸಿನಿಮಾಕ್ಕಾಗಿ ಸಾಕಷ್ಟು ಶ್ರಮವನ್ನು ನಟಿ ರಶ್ಮಿಕಾ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us