ರಶ್ಮಿಕಾ ಮಂದಣ್ಣ ಹೊಸ ಬಿಸ್ನೆಸ್ ಶುರು; ತಾಯಿ ಆಶೀರ್ವಾದ ಪಡೆದ ನಟಿ
ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ ಕಳೆಯುವುದರೊಳಗೆ ರಶ್ಮಿಕಾ ಮಂದಣ್ಣ ಅವರು ತುಂಬಾ ಸಾಧನೆ ಮಾಡಿದ್ದಾರೆ. ಈಗ ಅವರು ಹೊಸ ಬಿಸ್ನೆಸ್ ಶುರು ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರ ಆ ಹಣವನ್ನು ಬಿಸ್ನೆಸ್ನಲ್ಲಿ ಹೂಡಿಕೆ ಮಾಡಲಿದ್ದಾರೆ. ಅವರಿಗೆ ತಾಯಿಯ ಆಶೀರ್ವಾದ ಸಿಕ್ಕಿದೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಕೈ ತುಂಬ ಆಫರ್ಗಳಿವೆ. ಸದ್ಯಕ್ಕಂತೂ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅನಿಮಲ್, ಪುಷ್ಪ 2, ಛಾವಾ ಮುಂತಾದ ಸಿನಿಮಾಗಳ ಮೂಲಕ ಅವರು ಭಾರಿ ಯಶಸ್ಸು ಕಂಡಿದ್ದಾರೆ. ಅವರು ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಿದ್ದಾರೆ. ಸ್ಟಾರ್ ಹೀರೋಗಳಿಗೆ ರಶ್ಮಿಕಾ ಮಂದಣ್ಣ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ಈ ನಡುವೆ ಅವರು ಹೊಸ ಬಿಸ್ನೆಸ್ (Business) ಆರಂಭಿಸುತ್ತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈಗ ರಶ್ಮಿಕಾ ಮಂದಣ್ಣ ಅವರಿಗೆ 29 ವರ್ಷ ವಯಸ್ಸು. ಕನ್ನಡ ಚಿತ್ರರಂಗದಿಂದ ಶುರುವಾದ ಅವರ ಸಿನಿಜರ್ನಿ ಬಾಲಿವುಡ್ ತಲುಪಿದೆ. ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ. ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ಸೂಪರ್ ಹಿಟ್ ಆಯಿತು. ಅದಾಗಿ 10 ವರ್ಷ ಕಳೆಯುವುದರೊಳಗೆ ರಶ್ಮಿಕಾ ಮಂದಣ್ಣ ಅವರು ಟಾಪ್ ಹೀರೋಯಿನ್ ಆಗಿ ಮಿಂಚಿದರು.
ಬಣ್ಣದ ಲೋಕಕ್ಕೆ ಬಂದು ಕೆಲವೇ ವರ್ಷಗಳು ಕಳೆಯುವುದರಲ್ಲಿ ರಶ್ಮಿಕಾ ಮಂದಣ್ಣ ಅವರು ಸಖತ್ ಹಣ ಸಂಪಾದನೆ ಮಾಡಿದ್ದಾರೆ. ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ 60 ಕೋಟಿ ರೂಪಾಯಿ ಮೀರಿದೆ. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇಷ್ಟೆಲ್ಲ ಹಣ ಗಳಿಸಿರುವ ಅವರು ಬಿಸ್ನೆಸ್ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
View this post on Instagram
‘ಇಂದು ನಾನು ತುಂಬ ಮುಖ್ಯವಾದ ಶೂಟಿಂಗ್ಗೆ ತೆರಳುತ್ತಿದ್ದೇನೆ. ನೀವು ಹೇಳಿದ ಬಿಸ್ನೆಸ್ ನಾನು ಆರಂಭಿಸುತ್ತೇನೆ’ ಎಂದು ವಿಡಿಯೋ ಕಾಲ್ ಮೂಲಕ ತಾಯಿ ಸುಮನ್ ಮಂದಣ್ಣಗೆ ರಶ್ಮಿಕಾ ಅವರು ಮಾಹಿತಿ ನಿಡಿದ್ದಾರೆ. ಮಗಳ ಹೊಸ ಕಾರ್ಯಕ್ಕೆ ತಾಯಿ ಶುಭ ಕೋರಿದ್ದಾರೆ. ಆದರೆ ತಾವು ಆರಂಭಿಸುತ್ತಿರುವ ಬಿಸ್ನೆಸ್ ಯಾವುದು ಎಂದು ರಶ್ಮಿಕಾ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ರಶ್ಮಿಕಾ, ದೀಕ್ಷಿತ್ ಶೆಟ್ಟಿ ನಟನೆಯ ‘ದಿ ಗರ್ಲ್ಫ್ರೆಂಡ್’ ಚಿತ್ರದ ಮೊದಲ ಹಾಡು
ಬೇರೆ ಸ್ಟಾರ್ ನಟ-ನಟಿಯರ ರೀತಿ ರಶ್ಮಿಕಾ ಮಂದಣ್ಣ ಕೂಡ ತಮ್ಮದೇ ಫ್ಯಾಷನ್ ಬ್ರ್ಯಾಂಡ್ ಆರಂಭಿಸುತ್ತಾರೆ ಎಂಬುದು ಅಭಿಮಾನಿಗಳ ಊಹೆ. ಅದರ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಬೇಕಿದೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಅವರ ಹೊಸ ಬಿಸ್ನೆಸ್ಗೆ ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








