- Kannada News Photo gallery Shine S Shetty Ankita Amar starrer Just Married Kannada movie new Song released
‘ಜಸ್ಟ್ ಮ್ಯಾರೀಡ್’ ಹೊಸ ಗೀತೆಯಲ್ಲಿ ಮಿಂಚಿದ ಅಂಕಿತಾ ಅಮರ್, ಶೈನ್ ಶೆಟ್ಟಿ
‘ಜಸ್ಟ್ ಮ್ಯಾರೀಡ್’ ಸಿನಿಮಾದ ‘ಮಾಂಗಲ್ಯಂ ತಂತುನಾನೇನ’ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಸಂಜಿತ್ ಹೆಗ್ಡೆ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಕೆಲವೇ ದಿನಗಳಲ್ಲಿ ಈ ಮದುವೆ ಥೀಮ್ ಹಾಡು ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ.
Updated on: Jul 20, 2025 | 10:09 AM

ಅಂಕಿತಾ ಅಮರ್ ಮತ್ತು ಶೈನ್ ಶೆಟ್ಟಿ ಅವರು ‘ಜಸ್ಟ್ ಮ್ಯಾರೀಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ನೂತನ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆ ಆಗಿದೆ.

ನಾಗೇಂದ್ರ ಪ್ರಸಾದ್ ಅವರ ಹೃದಯಸ್ಪರ್ಶಿ ಸಾಹಿತ್ಯ, ಅಜನೀಶ್ ಲೋಕನಾಥ್ ಅವರ ಸುಮಧುರ ಸಂಗೀತದಲ್ಲಿ ‘ಮಾಂಗಲ್ಯಂ ತಂತುನಾನೇನ’ ಹಾಡು ಸಿದ್ಧವಾಗಿದೆ. ಮದುವೆಯ ಸಂಭ್ರಮ ಮತ್ತು ಸಡಗರ ಈ ಹಾಡಿನಲ್ಲಿ ಇದೆ.

ಈಗಾಗಲೇ ಹಲವಾರು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಜಿತ್ ಹೆಗ್ಡೆ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ. ಅವರ ಸೂಪರ್ ಹಿಟ್ ಗೀತೆಗಳ ಸಾಲಿಗೆ ‘ಮಾಂಗಲ್ಯಂ ತಂತುನಾನೇನ’ ಹಾಡು ಕೂಡ ಸೇರ್ಪಡೆ ಆಗಿದೆ.

‘ಈ ಹಾಡು ರೀಲ್ಸ್‌ಗೆ ಮಾತ್ರವಲ್ಲ, ರಿಯಲ್ ಲೈಫ್ಗೆ’ ಎಂದು ಚಿತ್ರತಂಡ ಹೇಳಿದೆ. ಅಂಕಿತಾ ಅಮರ್ ಹಾಗೂ ಶೈನ್ ಶೆಟ್ಟಿ ಅವರ ನಡುವಿನ ಕೆಮಿಸ್ಟ್ರಿ ಈ ಹಾಡಿನಲ್ಲಿ ಕಾಣಿಸಿದೆ. ಸಿನಿಪ್ರಿಯರಿಗೆ ಈ ಹಾಡು ಇಷ್ಟ ಆಗಿದೆ.

ಎಲ್ಲ ಮದುವೆ ಮನೆಯಲ್ಲಿ ಈ ಹಾಡು ಮೊಳಗಲಿದೆ. ಕಲರ್ಫುಲ್ ಆಗಿ ಈ ಹಾಡು ಚಿತ್ರೀಕರಣಗೊಂಡಿದೆ. ಈ ಮೊದಲು ಟೀಸರ್ ಮೂಲಕ ಗಮನ ಸೆಳೆದಿದ್ದ ‘ಜಸ್ಟ್ ಮ್ಯಾರೀಡ್’ ಸಿನಿಮಾ ಈಗ ಹಾಡಿನಿಂದ ಸದ್ದು ಮಾಡುತ್ತಿದೆ.




