Rashmika Mandanna: ‘ಪುಷ್ಪ’ ಚಿತ್ರ ತಂಡದ ನಡೆಯಿಂದ ಚಿಂತೆಗೆ ಒಳಗಾದ ರಶ್ಮಿಕಾ ಮಂದಣ್ಣ?

 ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿನ ಲಿರಿಕಲ್​ ವಿಡಿಯೋ ಹಿಟ್​ ಆಗಿದೆ. ಈವರೆಗೆ ಈ ಹಾಡು ಎರಡು ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.

Rashmika Mandanna: ‘ಪುಷ್ಪ’ ಚಿತ್ರ ತಂಡದ ನಡೆಯಿಂದ ಚಿಂತೆಗೆ ಒಳಗಾದ ರಶ್ಮಿಕಾ ಮಂದಣ್ಣ?
ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 13, 2021 | 4:41 PM

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರು ಶ್ರೀವಲ್ಲಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಆರಂಭದಲ್ಲಿ ಅವರ ಪಾತ್ರ ಸಾಕಷ್ಟು ಹೈಪ್​ ಪಡೆದುಕೊಂಡಿತ್ತು. ಆದರೆ, ಇತ್ತೀಚೆಗೆ ರಶ್ಮಿಕಾ ಪಾತ್ರದ ಬಗ್ಗೆ ಯಾರೂ ಅಷ್ಟಾಗಿ ಮಾತನಾಡುತ್ತಿಲ್ಲ. ಎಲ್ಲರ ಗಮನ ಈಗ ಸಮಂತಾ ಅವರ ಮೇಲೆ ಕೇಂದ್ರೀಕೃತವಾಗಿದೆ. ಇದೇ ಅವಕಾಶವನ್ನು ಚಿತ್ರತಂಡದವರು ಕೂಡ ಉತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಮಂತಾ ಐಟಂ ಡಾನ್ಸ್​ಗೆ ಚಿತ್ರತಂಡದವರು ಹೆಚ್ಚು ಒತ್ತು ನೀಡುತ್ತಿದ್ದಾರೆ.

‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿನ ಲಿರಿಕಲ್​ ವಿಡಿಯೋ ಹಿಟ್​ ಆಗಿದೆ. ಈವರೆಗೆ ಈ ಹಾಡು ಎರಡು ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಈ ಮೂಲಕ ತನ್ನ ನಾಗಾಲೋಟವನ್ನು ಇನ್ನೂ ಮುಂದುವರಿಸಿದೆ. ಸದ್ಯ, ಎಲ್ಲ ಕಡೆಗಳಲ್ಲೂ ಸಮಂತಾ ಅವರು ಡ್ಯಾನ್ಸ್​ ಮಾಡಿರುವ ಹಾಡಿನ ಬಗ್ಗೆ ಚರ್ಚೆ ಆಗುತ್ತಿದೆ. ಸದ್ಯ, ಈ ಹಾಡಿನ ವಿಡಿಯೋ ಸಾಂಗ್​ ಪ್ರೋಮೋ ಕೂಡ ರಿಲೀಸ್​ ಆಗಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

‘ಜನತಾ ಗ್ಯಾರೇಜ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಮಂತಾ ಇದೇ ರೀತಿಯ ತೊಂದರೆ ಅನುಭವಿಸಿದ್ದರು. ಅವರು ಆ ಚಿತ್ರದ ನಾಯಕಿ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಐಟಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಇಲ್ಲಿ ಸಮಂತಾಗಿಂತ ಕಾಜಲ್​ ಹೈಲೈಟ್​ ಆಗಿದ್ದರು. ಈಗ ರಶ್ಮಿಕಾಗೂ ಅದೇ ರೀತಿ ಆಗುತ್ತಿದೆ ಎನ್ನುವ ಮಾತು ಟಾಲಿವುಡ್​ ಅಂಗಳದಲ್ಲಿ ಕೇಳಿ ಬಂದಿದೆ.  ಚಿತ್ರತಂಡದವರು ಸಮಂತಾ ಅವರನ್ನು ಹೈಲೈಟ್​ ಮಾಡುತ್ತಿರುವ ಬಗ್ಗೆ ರಶ್ಮಿಕಾ ಚಿಂತೆಗೆ ಒಳಗಾಗಿದ್ದಾರೆ  ಎನ್ನುವ ಮಾತೂ ಕೇಳಿ ಬರುತ್ತಿದೆ. ಆದರೆ, ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸದ್ಯ, ಈ ವಿಚಾರ ಸಾಕಷ್ಟು ಹೈಲೈಟ್​ ಆಗುತ್ತಿದೆ.

ಸಮಂತಾ ಅವರಿಗೆ ಈಗ ಭರ್ಜರಿ ಡಿಮ್ಯಾಂಡ್​ ಇದೆ. ಅದೇ ರೀತಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ‘ಪುಷ್ಪ’ ಸಿನಿಮಾದ ಈ ಹಾಡಿನಲ್ಲಿ ನರ್ತಿಸಲು ಸಮಂತಾ ಅವರು ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಮಾಹಿತಿ ಹರಡಿದೆ. ಆ ಬಗ್ಗೆ ಚಿತ್ರತಂಡದವರಾಗಲಿ, ಸಮಂತಾ ಆಗಲಿ ಈವರೆಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ.

ಇದನ್ನೂ ಓದಿ:  ‘ಈ ಬಾರಿ ನಿಮ್ಮಿಂದ ಸ್ವಲ್ಪ ದೂರ, ಆದರೆ ಬೇಗ ಮರಳುವೆ’ ಎಂದು ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ  

‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಡಿಫರೆಂಟ್​ ಗೆಟಪ್​

ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ