
ಧನುಷ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಕುಬೇರ’ ಸಿನಿಮಾ ಇಂದು (ಜೂನ್ 20) ರಿಲೀಸ್ ಆಗಿದೆ. ಈ ಸಿನಿಮಾನ ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಚಿತ್ರ ಯಾವ ರೀತಿಯಲ್ಲಿದೆ ಎಂಬ ಸ್ಪಷ್ಟ ಚಿತ್ರಣ ಶನಿವಾರದ ವೇಳೆಗೆ ಸಿಗಲಿದೆ. ಹೀಗಿರುವಾಗಲೇ ರಶ್ಮಿಕಾ ಅವರನ್ನು ಧನುಷ್ ಹೊಗಳಿದೆ ವಿಡಿಯೋ ವೈರಲ್ ಆಗಿದೆ. ವೇದಿಕೆ ಮೇಲೆ ಧನುಷ್ ಅವರು ನಟಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು.
‘ಕುಬೇರ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ಧನುಷ್, ‘ರಶ್ಮಿಕಾ ನೀವು 1000 ಕೋಟಿ ರೂಪಾಯಿ, 2000 ಕೋಟಿ ರೂಪಾಯಿ, ನ್ಯಾಷನಲ್ ಕ್ರಶ್ ಇದನ್ನೆಲ್ಲ ಮರೆತುಬಿಡಿ. ನೀವು ತುಂಬಾ ಅದೃಷ್ಟವಂತೆ ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ, ನಿಮ್ಮ ಅದೃಷ್ಟವನ್ನು ನೀವೇ ಸೃಷ್ಟಿಸಿಕೊಂಡಿರೋದು’ ಎಂದು ಅವರು ಹೇಳಿದ್ದಾರೆ.
‘ನಿಮಗೆ ಏನೆಲ್ಲ ಟ್ಯಾಗ್ ಸಿಕ್ಕಿದೆಯೋ ಅದನ್ನು ಪಡೆಯಲು ನೀವು ಸಾಕಷ್ಟು ಕಷ್ಟ ಪಟ್ಟು ಕೆಲಸ ಮಾಡಿದ್ದೀರಿ. ನಿಮ್ಮ ಸಿನಿಮಾ 2000 ಕೋಟಿ ರೂಪಾಯಿ ಮಾಡಿದೆ. ನಿಮ್ಮ ಅದೃಷ್ಟವನ್ನು ನೀವೇ ಪಡೆದುಕೊಂಡಿದ್ದೀರಿ. ಕೊಡಗಿನ ಸಣ್ಣ ಹುಡುಗಿಯಾಗಿದ್ದ ನೀವು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದೀರಿ. ಈ ಪ್ರಯಾಣ ನಿಜಕ್ಕೂ ಅದ್ಭುತ. ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಫ್ಯೂಚರ್ ಪ್ರಾಜೆಕ್ಟ್ಗೆ ಆಲ್ ದಿ ಬೆಸ್ಟ್’ ಎಂದರು ಅವರು.
ರಶ್ಮಿಕಾ ಮಂದಣ್ಣ ಅವರಿಗೆ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಗೆಲುವು ಸಿಗುತ್ತಿದೆ. ‘ಅನಿಮಲ್’, ‘ಪುಷ್ಪ 2’, ‘ಛಾವಾ’ ರೀತಿಯ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದೆ. ಇದು ರಶ್ಮಿಕಾ ಮಂದಣ್ಣ ಖ್ಯಾತಿ ಹೆಚ್ಚಿಸಿದೆ. ಈ ರೀತಿಯ ಅಪರೂಪದ ಸಾಧನೆ ಮಾಡಿದ ಖ್ಯಾತಿ ಅವರಿಗೆ ಇದೆ. ಈ ಬಗ್ಗೆ ಅವರ ಅಭಿಮಾನಿಗಳಿಗೆ ಖುಷಿ ಇದೆ. ಆದರೆ, ರಶ್ಮಿಕಾ ಹೇಟರ್ಗಳು, ‘ಅವರು ಲಕ್ಕಿ. ಹೀಗಾಗಿ ಸುಲಭದಲ್ಲಿ ಅವಕಾಶ ಸಿಕ್ಕಿತು’ ಎಂದೆಲ್ಲ ಹೇಳುತ್ತಿದ್ದಾರೆ. ಇವರಿಗೆ ಧನುಷ್ ಮಾತು ಖಾರ ಎನಿಸಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಟನೆಯನ್ನು ಹಾಡಿ ಹೊಗಳಿದ ಪರಭಾಷಾ ನಿರ್ದೇಶಕ
ರಶ್ಮಿಕಾ ಮಂದಣ್ಣ, ಧನುಷ್, ನಾಗಾರ್ಜುನ ಮೊದಲಾದವರು ‘ಕುಬೇರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಅಭಿಮಾನಿಗಳಿಗೆ ಇಷ್ಟ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಪಾಸಿಟಿವ್ ವಿಮರ್ಶೆ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:53 am, Fri, 20 June 25