AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ ನಟನೆಯನ್ನು ಹಾಡಿ ಹೊಗಳಿದ ಪರಭಾಷಾ ನಿರ್ದೇಶಕ

Rashmika Mandanna: ನಟಿ ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಬಾಲಿವುಡ್​ನಲ್ಲಿ ಬಲು ಬೇಡಿಕೆಯ ನಟಿಯಾಗಿದ್ದಾರೆ. ಹೋದಲ್ಲೆಲ್ಲ ತಮ್ಮ ವೃತ್ತಿಪರತೆಯಿಂದ ಹಾಗೂ ನಟನೆಯಿಂದ ಗಮನ ಸೆಳೆಯುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಸಲ್ಮಾನ್ ಖಾನ್ ಸೇರಿದಂತೆ ಹಲವು ನಟ, ನಿರ್ದೇಶಕರು ರಶ್ಮಿಕಾರ ಕೊಂಡಾಡಿದ್ದಾರೆ. ಇದೀಗ ಖ್ಯಾತ ನಿರ್ದೇಶಕರೊಬ್ಬರು ರಶ್ಮಿಕಾರ ನಟನೆಯ ಹೊಗಳಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆಯನ್ನು ಹಾಡಿ ಹೊಗಳಿದ ಪರಭಾಷಾ ನಿರ್ದೇಶಕ
Rashmika Mandanna
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 18, 2025 | 7:39 PM

Share

‘ಕುಬೇರ’ (Kubera) ಚಿತ್ರ ರಿಲೀಸ್ ಆಗಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇವೆ. ರಶ್ಮಿಕಾ ಮಂದಣ್ಣ, ಧನುಷ್, ನಾಗಾರ್ಜುನ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹಣದ ಬಗ್ಗೆ, ಶ್ರೀಮಂತ ವ್ಯಕ್ತಿಗಳ ಬಗ್ಗೆ ಇದೆ ಎಂಬುದು ಟ್ರೇಲರ್ ನೋಡಿದವರಿಗೆ ಸ್ಪಷ್ಟವಾಗಿದೆ. ಈಗ ‘ಕುಬೇರ’ ರಿಲೀಸ್​ಗೂ ಮೊದಲೇ ರಶ್ಮಿಕಾ ನಟನೆಯನ್ನು ಚಿತ್ರದ ನಿರ್ದೇಶಕ ಶೇಖರ್ ಕಮ್ಮುಲಾ ಅವರು ಹೊಗಳಿದ್ದಾರೆ. ಅವರನ್ನು ಸಾಕಷ್ಟು ಶ್ಲಾಘನೆ ಮಾಡಿದ್ದಾರೆ.

ಧನುಷ್ ಹಾಗೂ ನಾಗಾರ್ಜುನ ಅವರು ‘ಕುಬೇರ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವುದು ಟ್ರೇಲರ್​ನಲ್ಲಿ ಕಂಡು ಬಂದಿದೆ. ರಶ್ಮಿಕಾ ಮಂದಣ್ಣ ಪಾತ್ರಕ್ಕೂ ಸಿನಿಮಾದಲ್ಲಿ ಪ್ರಾಮುಖ್ಯತೆ ಇರಲಿದೆ ಎನ್ನಲಾಗಿದೆ. ರಶ್ಮಿಕಾ ಅವರ ನಟನೆಯನ್ನು ನೋಡಿ ಶೇಖರ್​ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

‘ರಶ್ಮಿಕಾ ಅವರು ಅದ್ಭುತ ನಟನೆ ಮಾಡಿದ್ದಾರೆ. ಅದು ನನಗೆ ಸರ್​ಪ್ರೈಸ್ ಆಗಿತ್ತು. ನೈಸರ್ಗಿಕವಾಗಿ ಪಾತ್ರದ ಒಳಗೆ ಇಳಿಯುತ್ತಿದ್ದರು ಎಂದು ಅವರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಡಿಗ್ಲಾಮ್ ಪಾತ್ರವಾಗಿದೆ. ಸಿನಿಮಾ ಜೂನ್ 20ರಂದು ರಿಲೀಸ್ ಆಗಲಿದೆ.

ರಶ್ಮಿಕಾ ಬಗ್ಗೆ ಕೇವಲ ಶೇಖರ್ ಮಾತ್ರವಲ್ಲ, ಈ ಮೊದಲು ಅಕ್ಕಿನೇನಿ ನಾಗಾರ್ಜುನ ಹಾಗೂ ಸಲ್ಮಾನ್ ಖಾನ್ ಕೂಡ ರಶ್ಮಿಕಾನ ಹೊಗಳಿದ್ದರು. ‘ಕುಬೇರ’ ಇವೆಂಟ್​ನಲ್ಲಿ ಮಾತನಾಡಿದ್ದ ನಾಗಾರ್ಜುನ, ‘ನಿಜಕ್ಕೂ ರಶ್ಮಿಕಾ ಪ್ರತಿಭಾವಂತೆ. ಕಳೆದ ಮೂರು ವರ್ಷಗಳಿಂದ ನಟಿ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರು 2-3 ಸಾವಿರ ಕೋಟಿ ರೂಪಾಯಿ ಕಲಾವಿದರು’ ಎಂದು ರಶ್ಮಿಕಾನ ಹೊಗಳಿದ್ದರು. ರಶ್ಮಿಕಾ ಅವರ ನಟನೆಯ ಹಲವು ಸಿನಿಮಾಗಳು 500 ಕೋಟಿ ರೂಪಾಯಿ ಕಲೆಕ್ಷನ್​ನ ಮೀರಿದೆ. ಹೀಗಾಗಿ, ಈ ಹೇಳಿಕೆಯನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ: ಮತ್ತೊಂದು ಹಿಟ್ ನೀಡುವ ಹಾದಿಯಲ್ಲಿ ರಶ್ಮಿಕಾ ಮಂದಣ್ಣ

ಇನ್ನು ಸಲ್ಮಾನ್ ಖಾನ್ ಕೂಡ ರಶ್ಮಿಕಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ‘ಸಿಕಂದರ್’ ಸಿನಿಮಾ ಮಾಡುವ ಸಂದರ್ಭದಲ್ಲೇ ‘ಪುಷ್ಪ 2’ ಚಿತ್ರದ ಶೂಟ್ ಕೂಡ ನಡೆಯುತ್ತಿತ್ತು. ಎರಡನ್ನೂ ಅವರು ಬ್ಯಾಲೆನ್ಸ್ ಮಾಡುತ್ತಿದ್ದರು. ಬೆಳಿಗ್ಗೆ ‘ಸಿಕಂದರ್’ ಶೂಟ್ ಮಾಡಿದರೆ, ರಾತ್ರಿ ‘ಪುಷ್ಪ 2’ ಶೂಟ್​ನಲ್ಲಿ ಭಾಗಿ ಆಗುತ್ತಿದ್ದರು. ಇದು ಅವರ ಹೆಚ್ಚುಗಾರಿಕೆ ಆಗಿತ್ತು. ಈ ಅಂಶ ಸಲ್ಮಾನ್ ಖಾನ್​ಗೆ ಇಷ್ಟ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ