ವಿಜಯ್ ದೇವರಕೊಂಡಗೆ ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರ 36 ನೇ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ವಿಜ್ಜು ಎಂದು ಕರೆದು ಶುಭಾಶಯತಿಳಿಸಿದ್ದಾರೆ. ಈ ವಿಶ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಸಂಬಂಧ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ಈ ಘಟನೆಯಿಂದ ತಿಳಿಯಬಹುದು.

ವಿಜಯ್ ದೇವರಕೊಂಡಗೆ ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
ರಶ್ಮಿಕಾ-ವಿಜಯ್

Updated on: May 10, 2025 | 7:41 AM

ವಿಜಯ್ ದೇವರಕೊಂಡ (Vijay Devarakonda) ಅವರು ಮೇ 9ರಂದು 36ನೇ ವರ್ಷದ ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಜಯ್​ಗೆ ಬರ್ತ್​ಡೇ ವಿಶ್ ತಿಳಿಸಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅದು ಮತ್ತಷ್ಟು ಸ್ಪಷ್ಟ ಆಗುತ್ತಿದೆ. ಈಗ ವಿಜಯ್​ಗೆ ಪ್ರೀತಿಯಿಂದ ‘ವಿಜ್ಜು’ ಎಂದು ಕರೆದಿದ್ದಾರೆ ರಶ್ಮಿಕಾ. ಅಲ್ಲದೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.

‘ನಾನು ಮತ್ತೆ ತಡವಾಗಿ ವಿಶ್ ಮಾಡಿದ್ದೇನೆ. ಆದರೆ, ಹುಟ್ಟುಹಬ್ಬದ ಶುಭಾಶಯಗಳು ವಿಜ್ಜು. ನಿಮ್ಮ ಮುಂದಿನ ದಿನಗಳಲ್ಲಿ ಪ್ರೀತಿ, ಸಂತೋಷ, ಆರೋಗ್ಯ, ಸಂಪತ್ತು, ಶಾಂತಿಯಿಂದ ಕೂಡಿರಲಿ ಎಂದು ನಾನು ಆಶಿಸುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಅವರ ಬರ್ತ್​ಡೇ ವಿಶ್ ವೈರಲ್ ಆಗಿದೆ. ಇದಕ್ಕೆ ವಿಜಯ್ ಪ್ರತಿಕ್ರಿಯಿಸಿದ್ದು, ‘ನಿಮ್ಮ ಹಾರೈಕೆ ಈಡೇರಲಿ’ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಏಪ್ರಿಲ್​ನಲ್ಲಿ ಬರ್ತ್​ಡೇ ಆಚರಿಸಿಕೊಂಡರು. ಇದಕ್ಕಾಗಿ ಅವರು ಓಮನ್​ಗೆ ತೆರಳಿದ್ದರು. ಅಲ್ಲಿ ಅದ್ದೂರಿ ಬರ್ತ್​ಡೇ ಸೆಲೆಬ್ರೇಷನ್ ಮಾಡಿಕೊಂಡರು. ಈ ವೇಳೆ ಅವರ ಜೊತೆಗೆ ವಿಜಯ್ ದೇವರಕೊಂಡ ಅವರು ಕೂಡ ಇದ್ದರು ಎನ್ನಲಾಗಿದೆ. ಇಬ್ಬರೂ ಹಂಚಿಕೊಂಡಿರೋ ಫೋಟೋಗಳ ಬ್ಯಾಕ್​ಗ್ರೌಂಡ್ ಒಂದೇ ರೀತಿಯಲ್ಲಿ ಇದೆ.  ಸದ್ಯ ವಿಜಯ್ ಬರ್ತ್​ಡೇನ ಇವರು ಮನೆಯಲ್ಲೇ ಆಚರಿಸಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ವಿಜಯ್ ದೇವರಕೊಂಡ ಅವರು ‘ಕಿಂಗ್​ಡಮ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಮೇ 30ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರ ನಟನೆಯ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ. ಅದು ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಇದನ್ನೂ ಓದಿ: ಮತ್ತೆ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ, ಖಾತ್ರಿಯಾಯ್ತು ಸುದ್ದಿ

ರಶ್ಮಿಕಾ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರಿಗೆ ಇತ್ತೀಚೆಗೆ ಸಾಲು ಸಾಲು ಗೆಲುವು ಸಿಕ್ಕಿದೆ. ‘ಅನಿಮಲ್’, ಪುಷ್ಪ 2’ ಹಾಗೂ ‘ಛಾವಾ’ ಚಿತ್ರದಿಂದ ಅವರು ಗೆಲುವು ಕಂಡಿದ್ದಾರೆ. ಅವರ ನಟನೆಯ ‘ಸಿಕಂದರ್’ ಚಿತ್ರ ಮಾತ್ರ ಸೋಲು ಕಂಡಿದೆ. ಈ ಸಿನಿಮಾಗೆ ಸಲ್ಮಾನ್ ಖಾನ್ ಹೀರೋ. ಅವರ ನಟನೆಯ ‘ಕುಬೇರ’ ಇದೇ ಜೂನ್ 20ರಂದು ಬಿಡುಗಡೆ ಹೊಂದಲಿದೆ. ಈ ಚಿತ್ರಕ್ಕೆ ಧನುಷ್ ಹೀರೋ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.