ದಕ್ಷಿಣ ಭಾರತದ ಬಹುಬೇಡಿಕೆಯ ಹೀರೋಯಿನ್ಗಳ ಪಟ್ಟಿಯಲ್ಲಿ ನಯನತಾರಾ (Nayanthara Vignesh Wedding) ಹೆಸರು ಕೂಡ ಪ್ರಮುಖವಾಗಿದೆ. 2003ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರಿಗೆ ದೊಡ್ಡ ಮಟ್ಟದ ಡಿಮ್ಯಾಂಡ್ ಇದೆ. ಅನೇಕ ಸ್ಟಾರ್ ಕಲಾವಿದರ ಜೊತೆ ನಟಿಸಿ ನಯನತಾರಾ ಗೆಲುವು ಕಂಡಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಇರುವ ಅನುಭವ ಅಪಾರ. ಈಗ ಅವರು ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು (ಜೂನ್ 9) ಮಹಾಬಲಿಪುರಂನಲ್ಲಿ ಅವರ ವಿವಾಹ ಸಮಾರಂಭ ನಡೆಯುತ್ತಿದೆ. ಅನೇಕ ಗಣ್ಯರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿ ಆಗಿದ್ದಾರೆ. ಶಾರುಖ್ ಖಾನ್, ರಜನಿಕಾಂತ್, ಕಾರ್ತಿ, ಬೋನಿ ಕಪೂರ್ ಸೇರಿದಂತೆ ಹಲವರು ಬಂದು ನವಜೋಡಿಗೆ ಶುಭ ಕೋರಿದ್ದಾರೆ. ಭಾರತದ ಶ್ರೀಮಂತ ನಟಿಯರಲ್ಲಿ ನಯನತಾರಾ ಕೂಡ ಪ್ರಮುಖರು. ಅವರ ಒಟ್ಟು ಆಸ್ತಿ ಮೌಲ್ಯ (Nayanthara Net Worth) 77 ಕೋಟಿ ರೂಪಾಯಿ ಎನ್ನಲಾಗಿದೆ. ಹಾಗಾದರೆ ಅವರ ಪತಿ ವಿಘ್ನೇಶ್ ಶಿವನ್ ಬಳಿ ಎಷ್ಟು ಆಸ್ತಿ ಇದೆ? ಈ ಕುರಿತು ಇಲ್ಲಿದೆ ಮಾಹಿತಿ..
ಪ್ರತಿ ಸಿನಿಮಾಗೆ ನಯನತಾರಾ ಅವರು 4ರಿಂದ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಈ ಸಂಖ್ಯೆಗಳ ಬಗ್ಗೆ ಅವರು ಎಲ್ಲಿಯೂ ಬಾಯಿ ಬಿಟ್ಟಿಲ್ಲವಾದರೂ ಕೆಲವು ಕಡೆಗಳಲ್ಲಿ ಈ ಕುರಿತು ವರದಿ ಪ್ರಕಟ ಆಗಿದೆ. ಹಲವು ಪ್ರತಿಷ್ಠಿತ ಕಂಪನಿಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಪ್ರತಿ ಬ್ರ್ಯಾಂಡ್ನಿಂದ ಅವರು 50ರಿಂದ 60 ಲಕ್ಷ ರೂಪಾಯಿ ಗಳಿಸುತ್ತಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೇರಳದಲ್ಲಿ ನಯನತಾರಾ ಅವರು ಪ್ರಾಪರ್ಟಿ ಹೊಂದಿದ್ದಾರೆ. ಹಲವು ಬಗೆಯ ಐಷಾರಾಮಿ ಕಾರುಗಳು ಅವರ ಬಳಿ ಇವೆ.
ಇದನ್ನೂ ಓದಿ: ನಯನತಾರಾ-ವಿಘ್ನೇಶ್ ಮದುವೆ ಒಟಿಟಿಯಲ್ಲಿ ಪ್ರಸಾರ? ಇದನ್ನು ಖರೀದಿಸಿದ್ದು ಯಾರು?
ಇನ್ನು, ವಿಘ್ನೇಶ್ ಶಿವನ್ ಅವರು ನಿರ್ದೇಶಕನಾಗಿ ಮಾತ್ರವಲ್ಲದೇ ಗೀತರಚನಾಕಾರನಾಗಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಪ್ರತಿ ಹಾಡಿಗೆ ಅವರು ಮೂರು ಲಕ್ಷ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಸಿನಿಮಾ ನಿರ್ದೇಶನಕ್ಕೆ 2ರಿಂದ 3 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ವಿಘ್ನೇಶ್ ಶಿವನ್ ಬಳಿ ಅಂದಾಜು 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ಇಬ್ಬರ ಆಸ್ತಿಯೂ ಸೇರಿಸಿದರೆ ಸುಮಾರು 130 ಕೋಟಿ ರೂಪಾಯಿ ನೆಟ್ ವರ್ಥ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.