ಜಪಾನ್​ನಲ್ಲಿ ಸಂಪೂರ್ಣ ಸ್ಕ್ಯಾನ್​ಗೆ ಒಳಗಾದ ನಿರ್ದೇಶಕ ರಾಜಮೌಳಿ; ಏನಿದು ಹೊಸ ಪ್ರಯೋಗ?

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ಈ ವರ್ಷ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಯಿತು. ಈಗ ಸಿನಿಮಾ ಜಪಾನ್​ ಅವತರಣಿಕೆಯಲ್ಲಿ ಬಿಡುಗಡೆ ಆಗಿದೆ. ಈ ಕಾರಣದಿಂದ ರಾಜಮೌಳಿ ಅವರು ಜಪಾನ್​ಗೆ ತೆರಳಿದ್ದಾರೆ.

ಜಪಾನ್​ನಲ್ಲಿ ಸಂಪೂರ್ಣ ಸ್ಕ್ಯಾನ್​ಗೆ ಒಳಗಾದ ನಿರ್ದೇಶಕ ರಾಜಮೌಳಿ; ಏನಿದು ಹೊಸ ಪ್ರಯೋಗ?
Edited By:

Updated on: Oct 21, 2022 | 10:21 AM

ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ವಿದೇಶಕ್ಕೆ ತೆರಳಿದಾಗ ಅಲ್ಲಿನ ಖ್ಯಾತ ನಾಮರನ್ನು ಭೇಟಿ ಮಾಡುತ್ತಾರೆ. ಹಲವು ವಿಚಾರಗಳ ಕುರಿತು ಚರ್ಚೆ ಮಾಡುತ್ತಾರೆ. ಈಗ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamoli) ಅವರು ಜಪಾನ್​ಗೆ ತೆರಳಿದ್ದಾರೆ. ಈ ವೇಳೆ ಜಪಾನ್​ನ ವಿಡಿಯೋ ಗೇಮ್ ಡಿಸೈನರ್ ಹಿಡಿಯೋ ಕೊಜಿಮಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜಮೌಳಿ ಅವರನ್ನು ಕ್ಯಾಮೆರಾಗಳು ಸುತ್ತುವರಿದಿರುವ ಫೋಟೋ ಸದ್ಯ ಸದ್ದು ಮಾಡುತ್ತಿದೆ.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ಈ ವರ್ಷ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಯಿತು. ಈಗ ಸಿನಿಮಾ ಜಪಾನ್​ ಅವತರಣಿಕೆಯಲ್ಲಿ ಬಿಡುಗಡೆ ಆಗಿದೆ. ಈ ಕಾರಣದಿಂದ ರಾಜಮೌಳಿ ಅವರು ಜಪಾನ್​ಗೆ ತೆರಳಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಅವರು ಹಲವರನ್ನು ಭೇಟಿ ಮಾಡಿದ್ದಾರೆ. ಆ ಪೈಕಿ ಮೆಟಲ್ ಗಿಯರ್ ಹೆಸರಿನ ಗೇಮ್ ಡಿಸೈನ್ ಮಾಡಿದ ಹಿಡಿಯೋ ಕೂಡ ಒಬ್ಬರು.

ಇದನ್ನೂ ಓದಿ
‘ಆರ್​ಆರ್​ಆರ್​’ ಸಿನಿಮಾ ಹೊಸ ದಾಖಲೆ; ಹಾಲಿವುಡ್ ಅವಾರ್ಡ್​ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದ ರಾಜಮೌಳಿ ಚಿತ್ರ
ಪವನ್​​ ಕಲ್ಯಾಣ್​ ಜತೆ ಸಿನಿಮಾ ಮಾಡಲಿದ್ದಾರೆ ರಾಜಮೌಳಿ; ಸೆಟ್ಟೇರೋದು ಯಾವಾಗ?
ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್
‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

ರಾಜಮೌಳಿ ಅವರು ಹಿಡಿಯೋ ಅವರ ಸ್ಟುಡಿಯೋಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಚ್ಚರಿ ಎಂದರೆ, ರಾಜಮೌಳಿ ಅವರನ್ನು ಹಿಡಿಯೋ ಸಂಪೂರ್ಣವಾಗಿ ಸ್ಕ್ಯಾನ್ ಮಾಡಿದ್ದಾರೆ. ರಾಜಮೌಳಿ ಅವರನ್ನು ಕ್ಯಾಮೆರಾಗಳು ಸುತ್ತುವರಿದಿವೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗುತ್ತಿದೆ. ಇದರಿಂದ ಸಾಕಷ್ಟು ಕುತೂಹಲ ಸೃಷ್ಟಿ ಆಗಿದೆ.

ಹಿಡಿಯೋ ಅವರು ಹೊಸಹೊಸ ಗೇಮ್​ನ ಡಿಸೈನ್ ಮಾಡುತ್ತಿರುತ್ತಾರೆ. ಈಗ ತಮ್ಮ ಮುಂದಿನ ಗೇಮ್​ಗೆ ರಾಜಮೌಳಿ ಅವರ ಪಾತ್ರ ಕೂಡ ಇರಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯಕ್ಕಂತೂ  ಈ ಪೋಟೋ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮಹೇಶ್ ಬಾಬುಗೆ ಜತೆಯಾದ ದೀಪಿಕಾ ಪಡುಕೋಣೆ? ರಾಜಮೌಳಿ ನಿರ್ದೇಶನದಲ್ಲಿ ಕನ್ನಡದ ಬ್ಯೂಟಿ

‘ಆರ್​ಆರ್​ಆರ್’ ಹಾಗೂ ‘ಕೆಜಿಎಫ್ 2’ ಕಲೆಕ್ಷನ್​ ಹೋಲಿಕೆ ಮಾಡಿದರೆ ಎರಡೂ ಸಿನಿಮಾಗಳ ಮಧ್ಯೆ ಕೆಲವೇ ಕೋಟಿಗಳ ಅಂತರವಿದೆ. ಈಗ ‘ಆರ್​ಆರ್​ಆರ್’ ಜಪಾನ್​ನಲ್ಲಿ ರಿಲೀಸ್ ಆಗಿರುವುದರಿಂದ ಬಾಕ್ಸ್ ಆಫೀಸ್​ ಗಳಿಕೆ ಹೆಚ್ಚಬಹುದು. ರಾಜಮೌಳಿ ಚಿತ್ರ ಯಶ್ ಚಿತ್ರವನ್ನು ಹಿಂದಿಕ್ಕಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಕೆಲವೇ ವಾರಗಳಲ್ಲಿ ಈ ಬಗ್ಗೆ ಸ್ಪಷ್ಟ ಲೆಕ್ಕಾಚಾರ ಸಿಗಲಿದೆ.

 

Published On - 8:01 am, Fri, 21 October 22