ಭಾರತದ ಚಿತ್ರರಂಗದ ಪಾಲಿಗೆ ಪ್ರತಿಷ್ಠಿತ ಆಸ್ಕರ್ ಅವಾರ್ಡ್ (Academy Awards) ಎಂಬುದು ಇನ್ನೂ ಕನಸಾಗಿಯೇ ಉಳಿದಿದೆ. ಭಾರತದ ಯಾವ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ಪಡೆದಿಲ್ಲ. 21 ವರ್ಷಗಳ ಹಿಂದೆ ಆಮಿರ್ ಖಾನ್ (Aamir Khan) ನಟನೆಯ ‘ಲಗಾನ್’ ಸಿನಿಮಾ ಆಸ್ಕರ್ಗೆ ನಾಮ ನಿರ್ದೇಶನಗೊಂಡಿತ್ತು. ಇದಾದ ಬಳಿಕ ಭಾರತದ ಯಾವ ಸಿನಿಮಾಗಳೂ ಆಸ್ಕರ್ಗೆ ನಾಮಿನೇಟ್ ಆಗಿಲ್ಲ. ಈ ಬಾರಿ ‘ಆರ್ಆರ್ಆರ್’ ಸಿನಿಮಾ (RRR Movie) ಆಸ್ಕರ್ನ ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ರಾಜಮೌಳಿ ಸಿನಿಮಾ ಆಸ್ಕರ್ ಗೆದ್ದರೆ ಭಾರತ ಚಿತ್ರರಂಗದ ಪಾಲಿಗೆ ದಾಖಲೆ ನಿರ್ಮಾಣ ಆಗಲಿದೆ.
‘ಆರ್ಆರ್ಆರ್’ ಸಿನಿಮಾ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯಿತು. ವಿಶ್ವ ಬಾಕ್ಸ್ ಆಫೀಸ್ನಲ್ಲೂ ಚಿತ್ರ ಅಬ್ಬರಿಸಿತು. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆದ ಬಳಿಕೆ ವಿಶ್ವದ ನಾನಾ ಚಿತ್ರರಂಗದ ತಂತ್ರಜ್ಞರು, ನಟರು ಈ ಚಿತ್ರವನ್ನು ವೀಕ್ಷಿಸಿ ರಾಜಮೌಳಿ ಅವರನ್ನು ಹೊಗಳಿದ್ದರು. ಈಗ ರಾಜಮೌಳಿ ಸಿನಿಮಾ ಎರಡು ವಿಭಾಗಗಳಲ್ಲಿ ಆಸ್ಕರ್ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
‘ಆರ್ಆರ್ಆರ್’ ಸಿನಿಮಾದ ‘ದೋಸ್ತಿ..’ ಹಾಡು ಸಾಕಷ್ಟು ಗಮನ ಸೆಳೆದಿತ್ತು. ಎಂಎಂ ಕೀರವಾಣಿ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು ವಿದೇಶಿಗರ ಗಮನ ಸೆಳೆದಿದೆ. ಈ ಕಾರಣಕ್ಕೆ ಆಸ್ಕರ್ ರೇಸ್ನಲ್ಲಿ ಈ ಹಾಡು ಕೂಡ ಇರಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಈ ಹಾಡು ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ. ಇನ್ನು, ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ ವಿಭಾಗದಲ್ಲೂ ‘ಆರ್ಆರ್ಆರ್’ ಚಿತ್ರ ನಾಮಿನೇಟ್ ಆಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಟಿವಿಯಲ್ಲಿ ಬರೋಕೆ ರೆಡಿ ಆಯ್ತು ‘ಆರ್ಆರ್ಆರ್’; ಸ್ಪೆಷಲ್ ದಿನಕ್ಕೆ ವೀಕ್ಷಕರಿಗೆ ವಿಶೇಷ ಗಿಫ್ಟ್
ಹಾಲಿವುಡ್ ಮಂದಿಗೆ ಈಗಾಗಲೇ ‘ಆರ್ಆರ್ಆರ್’ ಸಿನಿಮಾ ಇಷ್ಟ ಆಗಿದೆ. ದೊಡ್ಡದೊಡ್ಡ ಡೈರೆಕ್ಟರ್ಗಳು ಈ ಚಿತ್ರವನ್ನು ಬಾಯ್ತುಂಬ ಹೊಗಳಿದ್ದರು. ಭಾರತದ ಸಿನಿಪ್ರಿಯರು ರಾಜಮೌಳಿ ಅವರ ಕಲ್ಪನಾ ಲೋಕವನ್ನು ಸಾಕಷ್ಟು ಇಷ್ಟಪಟ್ಟಿದ್ದರು. ಈ ಎಲ್ಲಾ ಕಾರಣದಿಂದ ‘ಆರ್ಆರ್ಆರ್’ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆಯಿತು.
Published On - 1:41 pm, Fri, 16 September 22