‘ಆರ್ಆರ್ಆರ್’ ಪೋಸ್ಟರ್
‘ಆರ್ಆರ್ಆರ್’ ಸಿನಿಮಾ (RRR Movie) ತೆರೆಗೆ ಬರೋಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಮಾರ್ಚ್ 24) ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಾಣಲಿದೆ. ರಾಮ್ ಚರಣ್ (Ram Charan), ಜ್ಯೂ.ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ದೊಡ್ಡ ಮಟ್ಟದ ಬಜೆಟ್ನಲ್ಲಿ ಸಿದ್ಧಗೊಂಡಿದೆ. ‘ಬಾಹುಬಲಿ 2’ ಬಳಿಕ ರಾಜಮೌಳಿ (SS Rajamouli)ನಿರ್ದೇಶನದಲ್ಲಿ ತೆರೆಗೆ ಬರುತ್ತಿರುವ ಸಿನಿಮಾ ಇದಾಗಿದೆ. ಈ ಎಲ್ಲಾ ಕಾರಣಕ್ಕೆ ‘ಆರ್ಆರ್ಆರ್’ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಬಗ್ಗೆ ಒಂದಷ್ಟು ಅಚ್ಚರಿಯ ವಿಚಾರ ಇಲ್ಲಿದೆ.
- ‘ಆರ್ಆರ್ಆರ್’ ಸಿನಿಮಾಗೆ ಬರೋಬ್ಬರಿ 300 ದಿನ ಶೂಟ್ ಮಾಡಲಾಗಿದೆ. ಹೈದರಾಬಾದ್, ಪುಣೆ ಮತ್ತು ಉಕ್ರೇನ್ ಸೇರಿ ಹಲವು ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ಈ ಸಿನಿಮಾ ಕೆಲಸಗಳು ಕೊವಿಡ್ ಕಾರಣದಿಂದ ವಿಳಂಬವಾಗಿತ್ತು. ಈ ಕಾರಣಕ್ಕೆ ಚಿತ್ರದ ಬಜೆಟ್ 500 ಕೋಟಿ ರೂಪಾಯಿ ಮೀರಿದೆ.
- ‘ಆರ್ಆರ್ಆರ್’ ರಿಲೀಸ್ಗೂ ಮೊದಲೇ ಒಳ್ಳೆಯ ಬಿಸ್ನೆಸ್ ಮಾಡಿದೆ. ಈ ಚಿತ್ರ ಪ್ರೀ-ರಿಲೀಸ್ ಬಿಸ್ನೆಸ್ನಲ್ಲಿ 800 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನುತ್ತಿವೆ ಮೂಲಗಳು. ತೆಲುಗು ಒಂದರಲ್ಲೇ 200 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ.
- ‘ಆರ್ಆರ್ಆರ್’ 60 ರಾಷ್ಟ್ರಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.
- 8,000 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಮೊದಲ ದಿನ ‘ಬಾಹುಬಲಿ 2’ ಸಿನಿಮಾ ಕಲೆಕ್ಷನ್ ದಾಖಲೆಯನ್ನು ಈ ಚಿತ್ರ ಮುರಿಯುವ ಸಾಧ್ಯತೆ ಇದೆ.
- ಸಿನಿಮಾ ಪ್ರಮೋಷನ್ಗೆ 40 ಕೋಟಿ ರೂಪಾಯಿಗೂ ಅಧಿಕ ಖರ್ಚಾಗಿದೆ. ನಾನಾ ರಾಜ್ಯಗಳಲ್ಲಿ ತೆರಳಿ ಈ ಸಿನಿಮಾದ ಪ್ರಮೋಷನ್ ಮಾಡಲಾಗಿದೆ.
- ಮುಂದಿನ ದಿನಗಳಲ್ಲಿ ಎರಡು ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ‘ಆರ್ಆರ್ಆರ್’ ಸಿನಿಮಾ ರಿಲೀಸ್ ಆಗಲಿದೆ. ‘ಆರ್ಆರ್ಆರ್’ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ವರ್ಷನ್ ಜೀ5 ಹಾಗೂ ಹಿಂದಿ ವರ್ಷನ್ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಗಲಿದೆ.
ಇದನ್ನೂ ಓದಿ: ‘ಆರ್ಆರ್ಆರ್’ ಟೀಂ ಕಡೆಯಿಂದ ಒಂದು ಗುಡ್ ನ್ಯೂಸ್, ಒಂದು ಬ್ಯಾಡ್ ನ್ಯೂಸ್
ಪ್ರಿಯಕರನ ಜತೆ ಇದ್ದಾಗಲೂ ‘ಆರ್ಆರ್ಆರ್’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್; ವಿಡಿಯೋ ವೈರಲ್