DVV Danayya: ‘ಆಸ್ಕರ್​ಗಾಗಿ​ ನಾನು ದುಡ್ಡು ಕೊಟ್ಟಿಲ್ಲ, ಅಲ್ಲಿ ಏನಾಯ್ತೋ ಗೊತ್ತಿಲ್ಲ’: ‘ಆರ್​ಆರ್​ಆರ್​’ ನಿರ್ಮಾಪಕ ದಾನಯ್ಯ

|

Updated on: Mar 22, 2023 | 7:30 AM

Oscar Awards | RRR Movie: ಡಿವಿವಿ ದಾನಯ್ಯ ಅವರು ‘ಆರ್​ಆರ್​ಆರ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಆದರೆ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಅವರು ಕಾಣಸಿಕೊಳ್ಳಲೇ ಇಲ್ಲ.

DVV Danayya: ‘ಆಸ್ಕರ್​ಗಾಗಿ​ ನಾನು ದುಡ್ಡು ಕೊಟ್ಟಿಲ್ಲ, ಅಲ್ಲಿ ಏನಾಯ್ತೋ ಗೊತ್ತಿಲ್ಲ’: ‘ಆರ್​ಆರ್​ಆರ್​’ ನಿರ್ಮಾಪಕ ದಾನಯ್ಯ
ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​, ಡಿವಿವಿ ದಾನಯ್ಯ
Follow us on

ಎಸ್​ಎಸ್​ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie) ಸಿನಿಮಾದಿಂದ ಇಡೀ ಭಾರತಕ್ಕೆ ಹೆಮ್ಮೆ ಆಗಿದೆ ಎಂಬುದು ನಿಜ. ಯಾಕೆಂದರೆ, ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್​ ಪ್ರಶಸ್ತಿ ಗೆದ್ದು ಬೀಗಿದೆ. ಭಾರತದ ಹಾಡಿಗೆ ಆಸ್ಕರ್​ ಸಿಕ್ಕಿದ್ದು ಇದೇ ಮೊದಲು. ಹಾಗಾಗಿ ಎಲ್ಲರೂ ಈ ಖುಷಿಯನ್ನು ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಆದರೆ ಅದರ ನಡುವೆ ಕೆಲವು ಗಾಸಿಪ್​ಗಳು ಕೂಡ ಹಬ್ಬಿವೆ. ಅಕಾಡೆಮಿ ಅವಾರ್ಡ್​ ಪಡೆಯಲು ರಾಜಮೌಳಿ (SS Rajamouli) ಅವರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಆ ಬಗ್ಗೆ ‘ಆರ್​ಆರ್​ಆರ್​’ ಸಿನಿಮಾ ನಿರ್ಮಾಪಕ ಡಿವಿವಿ ದಾನಯ್ಯ (DVV Danayya) ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅವರ ಹೇಳಿಕೆಯಿಂದ ಗಾಸಿಪ್​ ಮಂದಿಗೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಆದರೂ ಕೂಡ ರಾಜಮೌಳಿ ಕಡೆಯಿಂದ ಪ್ರತಿಕ್ರಿಯೆ ಬರಲಿ ಎಂದು ನಿರೀಕ್ಷಿಸಲಾಗುತ್ತಿದೆ.

ಡಿವಿವಿ ದಾನಯ್ಯ ಅವರು ‘ಆರ್​ಆರ್​ಆರ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಆದರೆ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಅವರು ಕಾಣಸಿಕೊಳ್ಳಲೇ ಇಲ್ಲ. ಅಷ್ಟೇ ಅಲ್ಲದೇ, ವಿದೇಶದಲ್ಲಿ ನಡೆದ ಅನೇಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೂ ಅವರು ಭಾಗಿ ಆಗಲಿಲ್ಲ. ಹಾಗಾಗಿ ‘ಆರ್​ಆರ್​ಆರ್’ ತಂಡದಲ್ಲಿ ವೈಮನಸ್ಸು ಇದೆ ಎಂದು ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದರು. ಆದರೆ ಈಗ ಡಿವಿವಿ ದಾನಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘RRR’ ಚಿತ್ರತಂಡದಲ್ಲಿ ಒಳಜಗಳ; ಆಸ್ಕರ್​ ಗೆದ್ದ ಬಳಿಕ ಬಯಲಾಯ್ತು ಅಸಮಾಧಾನ

ಇದನ್ನೂ ಓದಿ
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Ram Charan: ‘ಭಾರತೀಯರಿಗೆ ಆಸ್ಕರ್​ ಪ್ರಶಸ್ತಿ ಅಂದ್ರೆ ಒಲಂಪಿಕ್ಸ್​ ಗೋಲ್ಡ್​ ಮೆಡಲ್​ ಇದ್ದಂಗೆ’: ರಾಮ್​ ಚರಣ್​

ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಿವಿವಿ ದಾನಯ್ಯ ಅವರು ಆಸ್ಕರ್​ ಪ್ರಶಸ್ತಿ ಕುರಿತು ಮಾತನಾಡಿದ್ದಾರೆ. ‘ಆಸ್ಕರ್​ ಕ್ಯಾಂಪೇನ್​ಗಾಗಿ ದುಡ್ಡು ಖರ್ಚು ಮಾಡಲಾಯಿತು ಎಂಬ ಸುದ್ದಿಯನ್ನು ನಾನು ಕೇಳಿದ್ದೇನೆ. ಆದರೆ ನಾನು ಯಾವುದೇ ಹಣ ನೀಡಿಲ್ಲ. ಅಲ್ಲಿ ನಿಜಕ್ಕೂ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಒಂದು ಪ್ರಶಸ್ತಿಗಾಗಿ ಯಾರೂ ಕೂಡ 80 ಕೋಟಿ ರೂಪಾಯಿ ಖರ್ಚು ಮಾಡುವುದಿಲ್ಲ. ಅದರಿಂದ ಯಾವುದೇ ಲಾಭ ಇಲ್ಲ’ ಎಂದು ಡಿವಿವಿ ದಾನಯ್ಯ ಹೇಳಿದ್ದಾರೆ.

ಇದನ್ನೂ ಓದಿ: ‘RRR’ ಕಿರಿಕ್​ ಬಗ್ಗೆ ಹೆಚ್ಚಿತು ಅನುಮಾನ; ಕ್ಷಮೆ ಕೇಳಿದ ‘ನಾಟು ನಾಟು..’ ಗಾಯಕ ಕಾಲ ಭೈರವ

ರಾಜಮೌಳಿ ಜೊತೆ ದಾನಯ್ಯ ಮನಸ್ತಾಪ ಮಾಡಿಕೊಂಡಿದ್ದಾರೆ ಎಂಬ ವದಂತಿ ಕೂಡ ಇದೆ. ಹಾಗಿದ್ದರೂ ಕೂಡ ರಾಜಮೌಳಿ ಬಗ್ಗೆ ದಾನಯ್ಯ ಅವರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾವನ್ನು ನಿರ್ಮಾಣ ಮಾಡಲು ಅವಕಾಶ ನೀಡಿದ ರಾಜಮೌಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಚಿತ್ರವನ್ನು ನಿರ್ಮಿಸಿದ್ದು ತಾವೇ ಎಂದು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಅಂತ ಅವರು ಹೆಮ್ಮೆಯಿಂದ ಹೇಳಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ದಾನಯ್ಯ ಅವರು ಪವನ್​ ಕಲ್ಯಾಣ್​ ನಟನೆಯ ಹೊಸ ಚಿತ್ರಕ್ಕೆ ಈಗ ಬಂಡವಾಳ ಹೂಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.