RRR Release Date: ಬಹುನಿರೀಕ್ಷಿತ ‘ಆರ್ಆರ್ಆರ್’ ಚಿತ್ರದ ಬಿಡುಗಡೆಯನ್ನು ಮುಂದೂಡಿದ ಚಿತ್ರತಂಡ; ಕಾರಣವೇನು?
ಜ್ಯೂ.ಎನ್ಟಿಆರ್ ಹಾಗೂ ರಾಮ್ಚರಣ್ ನಟಿಸುತ್ತಿರುವ ಆರ್ಆರ್ಆರ್ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲ್ಪಟ್ಟಿದೆ. ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್ಆರ್ಆರ್’(RRR) ಚಿತ್ರದ ಬಿಡುಗಡೆಯ ದಿನಾಂಕ ಮತ್ತೆ ಮುಂದೆ ಹೋಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಟ್ವಿಟರ್ ಮುಖಾಂತರ ಘೋಷಿಸಿದೆ. ಈ ಹಿಂದೆ ನಿರ್ಧಾರವಾಗಿದ್ದರ ಪ್ರಕಾರ, ಆರ್ಆರ್ಆರ್ ಚಿತ್ರವು ಇದೇ ವರ್ಷದ ಅಕ್ಟೋಬರ್ 13ರಂದು ಬಿಡುಗಡೆಯಾಗಬೇಕಿತ್ತು. ಆದರೆ ಇದನ್ನು ಚಿತ್ರತಂಡ ಮುಂದೂಡಿದ್ದು, ಮುಂದೆ ಯಾವಾಗ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿಯನ್ನು ತಿಳಿಸಿಲ್ಲ. ಈ ಕುರಿತು ಮಾಹಿತಿ ನೀಡಿರುವ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಸದ್ಯಕ್ಕೆ ಘೋಷಿಸಸುವುದಿಲ್ಲ. ಚಿತ್ರಮಂದಿರಗಳ ಲಭ್ಯತೆ ನೋಡಿಕೊಂಡು ತಿಳಿಸುತ್ತೇವೆ ಎಂದು ಮಾಹಿತಿ ನೀಡಿದೆ.
ಆರ್ಆರ್ಆರ್ ಚಿತ್ರತಂಡದ ಅಧಿಕೃತ ಟ್ವಿಟರ್ ಖಾತೆಯ ಮುಖಾಂತರ ಚಿತ್ರ ಮುಂದೂಡಲ್ಪಟ್ಟಿರುವ ಮಾಹಿತಿಯನ್ನು ನೀಡಲಾಗಿದೆ. ‘ಬಹುತೇಕರಿಗೆ ತಿಳಿದಿರುವಂತೆ ಆರ್ಆರ್ಆರ್ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರಮಂದಿರಗಳ ಲಭ್ಯತೆ ಇದಕ್ಕೆ ಮುಖ್ಯ ಕಾರಣ. ಜಾಗತಿಕವಾಗಿ ಯಾವಾಗ ಚಿತ್ರಗಳಿಗೆ ಮುಕ್ತವಾಗಿ ಬಿಡುಗಡೆಯ ಅವಕಾಶ ಲಭ್ಯವಾಗುತ್ತದೋ ಆಗ ಚಿತ್ರವನ್ನು ಬಿಡುಗಡೆ ಮಾಡಲಾಗುವುದು. ಆದಷ್ಟು ಶೀಘ್ರವಾಗಿ ಚಿತ್ರವನ್ನು ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು. ಪ್ರಸ್ತುತ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿವೆ’ ಎಂದು ಚಿತ್ರತಂಡ ಘೋಷಿಸಿದೆ.
ಚಿತ್ರತಂಡ ಹಂಚಿಕೊಂಡಿರುವ ಮಾಹಿತಿ:
Post production nearly done to have #RRRMovie ready by October’21. But as known to many, we are postponing the release but cannot announce a new date with theatres indefinitely closed. We will release at the earliest possible date when the world cinema markets are up and running.
— RRR Movie (@RRRMovie) September 11, 2021
ಆರ್ಆರ್ಆರ್ ಚಿತ್ರದಲ್ಲಿ ಜೂ.ಎನ್ಟಿಆರ್ ಹಾಗೂ ರಾಮ್ಚರಣ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ಕೂಡ ಇದರಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಬಾಹುಬಲಿ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಾಜಮೌಳಿ ಕೈಗೆತ್ತಿಕೊಂಡ ಬಿಗ್ ಬಜೆಟ್ ಚಿತ್ರವಿದು.
ಇದನ್ನೂ ಓದಿ:
ಬಿಗ್ ಬಾಸ್ ಸ್ಪರ್ಧಿ ಸಪ್ನಾ ಸಾವಿನ ವದಂತಿ ಬಳಿಕ ವಿಡಿಯೋ ವೈರಲ್; RIP ಎಂದವರೆಲ್ಲ ಈಗ ಗಪ್ಚುಪ್
Samantha: ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡ ಸಮಂತಾ; ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್
(RRR release date is postponed and new date is yet to be announced)