Sai Pallavi: ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆದ ಸಾಯಿ ಪಲ್ಲವಿ; ಎಷ್ಟಿದೆ ನಟಿಯ ಆಸ್ತಿ?

ಸಾಯಿ ಪಲ್ಲವಿ ಅವರು ಡ್ಯಾನ್ಸರ್. ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಇದರಿಂದ ಅವರಿಗೆ ಬಣ್ಣದ ಲೋಕದ ಜೊತೆ ನಂಟು ಬೆಳೆಯಿತು.

Sai Pallavi: ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆದ ಸಾಯಿ ಪಲ್ಲವಿ; ಎಷ್ಟಿದೆ ನಟಿಯ ಆಸ್ತಿ?
ಸಾಯಿ ಪಲ್ಲವಿ
Follow us
ರಾಜೇಶ್ ದುಗ್ಗುಮನೆ
|

Updated on: May 10, 2023 | 9:33 AM

ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ನಟನೆಯ ಸಿನಿಮಾಗಳು ಒಳ್ಳೆಯ ಬಿಸ್ನೆಸ್ ಮಾಡುತ್ತವೆ. ಅವರು ಆಯ್ದುಕೊಳ್ಳುವ ಪ್ರತಿ ಪಾತ್ರಗಳು ವಿಶೇಷವಾಗಿರುತ್ತವೆ. ಸಾಯಿ ಪಲ್ಲವಿ ಅವರು ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಅವರ ಆಸ್ತಿ ಗಳಿಕೆಯಲ್ಲಿ ಏರಿಕೆ ಆಗುತ್ತಿದೆ. ಕೆಲವೇ ವರ್ಷಗಳಲ್ಲಿ ಈ ನಟಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಸಾಯಿ ಪಲ್ಲವಿ ಅವರ ಒಟ್ಟೂ ಆಸ್ತಿ ಎಷ್ಟು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಸಾಯಿ ಪಲ್ಲವಿ ಅವರು ಡ್ಯಾನ್ಸರ್. ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಇದರಿಂದ ಅವರಿಗೆ ಬಣ್ಣದ ಲೋಕದ ಜೊತೆ ನಂಟು ಬೆಳೆಯಿತು. ನಟಿಯಾಗಿ ಮಿಂಚುವುದಕ್ಕೂ ಮೊದಲು ಕೆಲವು ಸಣ್ಣಪುಟ್ಟ ಪಾತ್ರಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದರು. 2015ರಲ್ಲಿ ರಿಲೀಸ್ ಆದ ನಿವೀನ್ ಪೌಳಿ ನಟನೆಯ ‘ಪ್ರೇಮಂ’ ಸಿನಿಮಾ ಅವರ ವೃತ್ತಿ ಬದುಕನ್ನೇ ಬದಲಿಸಿತು. ಸಾಯಿ ಪಲ್ಲವಿ ಅಲ್ಲಿಂದ ಹಿಂದಿರುಗಿ ನೋಡಲೇ ಇಲ್ಲ.

ಸಾಯಿ ಪಲ್ಲವಿ ವೃತ್ತಿ ಬದುಕು ಆರಂಭಿಸಿದ್ದು ಮಲಯಾಳಂನಿಂದ ಆದರೂ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿ ಇದ್ದಾರೆ. ‘ಫಿದಾ’, ‘ಶ್ಯಾಮ್ ಸಿಂಘ ರಾಯ್​’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  ವೈದ್ಯ ವೃತ್ತಿ, ಬಡಗ ಭಾಷೆ, ನೋ ಮೇಕಪ್; ಸಾಯಿ ಪಲ್ಲವಿ ಬಗೆಗಿನ ವಿಶೇಷ ವಿಚಾರ

ಸಾಯಿ ಪಲ್ಲವಿ ಮಹತ್ವ ಇರುವ ಪಾತ್ರಗಳನ್ನೇ ಒಪ್ಪಿ ನಟಿಸುತ್ತಾರೆ ಅನ್ನೋದು ವಿಶೇಷ. ಹೀಗಾಗಿ ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಸಾಯಿ ಪಲ್ಲವಿ ಪ್ರತಿ ಚಿತ್ರಕ್ಕೆ 1-2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ಒಟ್ಟೂ ಆಸ್ತಿ ಅಂದಾಜು 30 ಕೋಟಿ ರೂಪಾಯಿ ಇದೆ. ಕೊಯಿಮತ್ತೂರಿನಲ್ಲಿ ಸಾಯಿ ಪಲ್ಲವಿ ಸ್ವಂತ ಮನೆ ಹೊಂದಿದ್ದಾರೆ. ಬಿಡುವು ಸಿಕ್ಕಾಗ ಅವರು ಇಲ್ಲಿಗೆ ತೆರಳುತ್ತಾರೆ.

ಹಲವು ಸೆಲೆಬ್ರಿಟಿಗಳಿಗೆ ಕಾರಿನ ಕ್ರೇಜ್ ಇರುತ್ತದೆ. ಆದರೆ, ಸಾಯಿ ಪಲ್ಲವಿ ಅವರಿಗೆ ಆ ರೀತಿಯ ಕ್ರೇಜ್ ಇಲ್ಲ. ಅವರ ಓಡಾಟಕ್ಕೆ ಎರಡು-ಮೂರು ಕಾರುಗಳು ಇವೆ ಅಷ್ಟೇ. ಮೇಕಪ್ ಮಾಡದೇ ಇರುವುದರಿಂದ ಅದಕ್ಕಾಗಿ ಸಾಯಿ ಪಲ್ಲವಿ ದೊಡ್ಡ ಮೊತ್ತ ಖರ್ಚು ಮಾಡುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ