Sai Pallavi Birthday: ವೈದ್ಯ ವೃತ್ತಿ, ಬಡಗ ಭಾಷೆ, ನೋ ಮೇಕಪ್; ಸಾಯಿ ಪಲ್ಲವಿ ಬಗೆಗಿನ ವಿಶೇಷ ವಿಚಾರ
ಸಿಂಪಲ್ ಲುಕ್ನಿಂದ ಎಲ್ಲರಿಗೂ ಸಾಯಿ ಪಲ್ಲವಿ ಇಷ್ಟ ಆಗುತ್ತಾರೆ. ಅವರು ಬೇಡಿಕೆಯ ನಟಿ ಆಗಿ ಹೊರಹೊಮ್ಮಿದ್ದಾರೆ. ಅವರ ಬಗ್ಗೆ ಹಲವು ಅಪರೂಪದ ಮಾಹಿತಿಗಳು ಇವೆ.
ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ಇಂದು (ಮೇ 9) ಜನ್ಮದಿನದ ಸಂಭ್ರಮ. ನಟಿಗೆ ಅಭಿಮಾನಿಗಳಿಂದ, ಸೆಲೆಬ್ರಿಟಿಗಳ ಕಡೆಗಳಿಂದ ಶುಭಾಶಯ ಬರುತ್ತಿದೆ. ಸಾಯಿ ಪಲ್ಲವಿ ವೈದ್ಯೆ ಆಗಬೇಕಿತ್ತು. ಆದರೆ, ಅದಕ್ಕೂ ಮೊದಲೇ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟು ಯಶಸ್ಸು ಪಡೆದರು. ಸಿಂಪಲ್ ಲುಕ್ನಿಂದ ಎಲ್ಲರಿಗೂ ಸಾಯಿ ಪಲ್ಲವಿ ಇಷ್ಟ ಆಗುತ್ತಾರೆ. ಅವರು ಬೇಡಿಕೆಯ ನಟಿ ಆಗಿ ಹೊರಹೊಮ್ಮಿದ್ದಾರೆ. ಅವರ ಬಗ್ಗೆ ಹಲವು ಅಪರೂಪದ ಮಾಹಿತಿಗಳು ಇವೆ. ಆ ಬಗ್ಗೆ ಇಲ್ಲಿದೆ ವಿವರ.
ಸಾಯಿ ಪಲ್ಲವಿ ಮಾತೃಭಾಷೆ ಬಡಗ
ಸಾಯಿ ಪಲ್ಲವಿ ಹುಟ್ಟಿದ್ದು ತಮಿಳುನಾಡಿನ ಕೊಯಿಮತ್ತೂರಿನಲ್ಲಿ. ಮೇ 9, 1990ರಂದು ಅವರು ಜನಿಸಿದರು. ಸಾಯಿ ಪಲ್ಲವಿ ಅವರು ಬಡಗ ಸಮುದಾಯದವರು. ಅವರ ಮಾತ್ರಭಾಷೆ ಬಡಗ. ಈ ಭಾಷೆಯಲ್ಲಿ ತಮಿಳು ಹಾಗೂ ಕನ್ನಡದ ಮಿಶ್ರಣ ಇರುತ್ತದೆ.
ವೈದ್ಯೆ ಆಗುವುದಕ್ಕೂ ಮೊದಲೇ ಸಿನಿಮಾ ರಂಗಕ್ಕೆ ಎಂಟ್ರಿ
ಸಾಯಿ ಪಲ್ಲವಿ ಅವರಿಗೆ 2005ರಿಂದಲೇ ಚಿತ್ರರಂಗದ ನಂಟಿತ್ತು. ಚಿಕ್ಕಪುಟ್ಟ ಪಾತ್ರಗಳನ್ನು ಅವರು ಮಾಡಿದ್ದರು. 2015ರಲ್ಲಿ ಬಂದ ‘ಪ್ರೇಮಂ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮಲರ್ ಹೆಸರಿನ ಪಾತ್ರದ ಮೂಲಕ ಗಮನ ಸೆಳೆದರು. ಈ ಚಿತ್ರಕ್ಕೆ ಅವರು ಕೊರಿಯೋಗ್ರಾಫರ್ ಕೂಡ ಹೌದು. ಈ ಚಿತ್ರದ ಮೂಲಕ ಅವರಿಗೆ ಜನಪ್ರಿಯತೆ ಸಿಕ್ಕಿತು. ಈ ಸಿನಿಮಾ ತೆರೆಗೆ ಬಂದು ಒಂದು ವರ್ಷದ ಬಳಿಕ ಅಂದರೆ 2016ರಲ್ಲಿ ಸಾಯಿ ಪಲ್ಲವಿ ಎಂಬಿಬಿಎಸ್ ಪೂರ್ಣಗೊಳಿಸಿದರು. ಆದರೆ, ಈವರೆಗೆ ಅವರು ವೈದ್ಯ ವೃತ್ತಿ ಆರಂಭಿಸಲು ನೋಂದಣಿ ಮಾಡಿಸಿಕೊಂಡಿಲ್ಲ.
ತೆಲುಗು-ತಮಿಳಿನಲ್ಲಿ ಬ್ಯುಸಿ
ಸಾಯಿ ಪಲ್ಲವಿ ವೃತ್ತಿಜೀವನ ಆರಂಭಿಸಿದ್ದು ಮಲಯಾಳಂ ಚಿತ್ರರಂಗದಿಂದ. ಆದರೆ, ಸದ್ಯ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ‘ಫಿದಾ’ ರೀತಿಯ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. 2022ರಲ್ಲಿ ತೆರೆಗೆ ಬಂದ ‘ಗಾರ್ಗಿ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅವರ ಮುಂದಿನ ಚಿತ್ರಕ್ಕೆ ಕಮಲ್ ಹಾಸನ್ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದಲ್ಲಿ ಸಾಯಿ ಪಲ್ಲವಿಗೆ ನೆಗೆಟಿವ್ ಪಾತ್ರ? ಟಾಲಿವುಡ್ ಅಂಗಳದಲ್ಲಿ ಗುಸುಗುಸು
ಡ್ಯಾನ್ಸ್ ಮೇಲೆ ವಿಶೇಷ ಪ್ರೀತಿ
ಸಾಯಿ ಪಲ್ಲವಿಗೆ ಡ್ಯಾನ್ಸ್ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ಹೆಜ್ಜೆ ಹಾಕೋದು ಅನೇಕರಿಗೆ ಇಷ್ಟ ಆಗುತ್ತದೆ. 2009ರಲ್ಲಿ ಪ್ರಸಾರ ಕಂಡ ‘ಢೀ 4’ನಲ್ಲಿ ಅವರು ಸ್ಪರ್ಧಿ ಆಗಿದ್ದರು. ಇದರಲ್ಲಿ ಅವರು 3ನೇ ರನ್ನರ್ ಅಪ್ ಆಗಿದ್ದರು.
ಮೇಕಪ್ನಿಂದ ದೂರ
ಯಾವುದೇ ಸಿನಿಮಾದಲ್ಲಿ ನಟಿಸಿದರೂ ಸಾಯಿ ಪಲ್ಲವಿ ಮೇಕಪ್ನಿಂದ ದೂರ ಇರುತ್ತಾರೆ. ಅವರು ಮೇಕಪ್ ಹಚ್ಚಿ ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟ ಆಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ