AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯಿ ಪಲ್ಲವಿಗೆ ಅಡ್ವಾನ್ಸ್ ಹಣ ಕೊಟ್ಟಿದ್ದನ್ನೇ ಮರೆತ ನಿರ್ಮಾಪಕ ನಾಗವಂಶಿ

ಹೈದರಾಬಾದ್‌ನಲ್ಲಿ ನಡೆದ ಧನುಷ್ ನಟನೆಯ 'ಓಂ' ಸಿನಿಮಾದ ಪ್ರೀ-ರಿಲೀಸ್ ವೇದಿಕೆಯಲ್ಲಿ ನಟಿ ಸಾಯಿ ಪಲ್ಲವಿ ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಕೋವಿಡ್‌ಗೂ ಮುನ್ನ ನಿರ್ಮಾಪಕ ನಾಗವಂಶಿ ತಮಗೆ ನೀಡಿದ್ದ ಅಡ್ವಾನ್ಸ್ ಹಣವನ್ನು ಮರೆತಿದ್ದಾರೆ ಎಂದು ತಮಾಷೆಯಾಗಿ ಕಾಲೆಳೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಯಿ ಪಲ್ಲವಿಗೆ ಅಡ್ವಾನ್ಸ್ ಹಣ ಕೊಟ್ಟಿದ್ದನ್ನೇ ಮರೆತ ನಿರ್ಮಾಪಕ ನಾಗವಂಶಿ
ನಾಗವಂಶಿ-ಸಾಯಿ ಪಲ್ಲವಿ
ರಾಜೇಶ್ ದುಗ್ಗುಮನೆ
|

Updated on:Nov 17, 2026 | 8:56 AM

Share

ಮುಖ್ಯಾಂಶಗಳು

  • ವೇದಿಕೆ ಮೇಲೆ ನಿರ್ಮಾಪಕನ ಕಾಲೆಳೆದ ನಟಿ ಸಾಯಿ ಪಲ್ಲವಿ
  • ನಟಿಯನ್ನು 'ಲೇಡಿ ಪವರ್ ಸ್ಟಾರ್' ಎಂದು ಕರೆದ ನಾಗವಂಶಿ
  • ನವೆಂಬರ್ 20ಕ್ಕೆ ತೆರೆಗೆ ಬರಲಿದೆ ಬಹುನಿರೀಕ್ಷಿತ 'ಓಂ' ಸಿನಿಮಾ

ಖ್ಯಾತ ನಟಿ ಸಾಯಿ ಪಲ್ಲವಿ ತಮ್ಮ ಸರಳತೆ ಮತ್ತು ನೇರ ಮಾತುಗಳಿಂದಲೇ ಅಭಿಮಾನಿಗಳ ಮನಗೆದ್ದವರು. ಇದೀಗ ಹೈದರಾಬಾದ್‌ನಲ್ಲಿ ನಡೆದ ಧನುಷ್ ನಟನೆಯ ‘ಓಂ’ ಸಿನಿಮಾದ ತೆಲುಗು ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಆಸಕ್ತಿದಾಯಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಖ್ಯಾತ ನಿರ್ಮಾಪಕ ನಾಗವಂಶಿ ಅವರು ಕೋವಿಡ್-19ಗೂ ಮುನ್ನ ತಮಗೆ ನೀಡಿದ್ದ ಅಡ್ವಾನ್ಸ್ ಹಣದ ಬಗ್ಗೆ ಸಾಯಿ ಪಲ್ಲವಿ ವೇದಿಕೆ ಮೇಲೆ ತಮಾಷೆಯಾಗಿ ಮಾತನಾಡಿದ್ದಾರೆ. ಅವರ ಈ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಯಿ ಪಲ್ಲವಿ, ನಾಗವಂಶಿ ಅವರೊಂದಿಗಿನ ಹಳೆಯ ಮಾತುಕತೆಯನ್ನು ನೆನಪಿಸಿಕೊಂಡರು. ‘ವಂಶಿ ಅವರೇ, ಕೋವಿಡ್‌ಗೂ ಮೊದಲೇ ನಾವು ಎರಡು ಮೂರು ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚಿಸಿದ್ದೆವು. ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ಸಿನಿಮಾಗಾಗಿ ನೀವು ನನಗೆ ಅಡ್ವಾನ್ಸ್ ಹಣ ಕೊಟ್ಟಿದ್ದೀರಿ. ಆ ವಿಷಯವನ್ನು ನೀವು ಮರೆತೇ ಬಿಟ್ಟಿದ್ದೀರಿ’ ಎಂದು ನಗುತ್ತಲೇ ಕಾಲೆಳೆದರು.

‘ಆ ಹಣವನ್ನು ವಾಪಸ್ ತೆಗೆದುಕೊಳ್ಳಿ. ನಾವು ಒಟ್ಟಿಗೆ ಸಿನಿಮಾ ಮಾಡುವಾಗ ಮತ್ತೆ ಮಾತನಾಡೋಣ ಎಂದು ನಾನು ನಿಮಗೆ ಹೇಳಿದ್ದೆ. ಆದರೆ ನೀವು ಆ ಹಣವನ್ನು ವಾಪಸ್ ಪಡೆಯಲೇ ಇಲ್ಲ. ಈಗಲೂ ಆ ಅಡ್ವಾನ್ಸ್ ಹಣ ನನ್ನ ಬಳಿಯೇ ಇದೆ. ನಿಮಗೆ ನೆನಪಿದೆಯಾ?’ ಎಂದು ಪ್ರಶ್ನಿಸಿದರು. ಜೊತೆಗೆ ನಾಗವಂಶಿ ಅವರ ಉದಾರ ಗುಣವನ್ನು ಸಾಯಿ ಪಲ್ಲವಿ ಮನಸಾರೆ ಹೊಗಳಿದರು. ತಮ್ಮ ಸಿನಿಮಾದಲ್ಲಿ ನಾನು ನಟಿಸಬೇಕೆಂಬ ಒಂದೇ ಕಾರಣಕ್ಕೆ ಅವರು ಅಷ್ಟು ಪ್ರೀತಿ ತೋರಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಯಿ ಪಲ್ಲವಿ ಮಾತಿಗೆ ನಿರ್ಮಾಪಕ ನಾಗವಂಶಿ ಕೂಡ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯಿಸಿದರು. ವೇದಿಕೆ ಮೇಲೆ ಸಾಯಿ ಪಲ್ಲವಿ ಅವರನ್ನು ‘ಲೇಡಿ ಪವರ್ ಸ್ಟಾರ್’ ಎಂದು ಬಣ್ಣಿಸಿದರು. ಅಡ್ವಾನ್ಸ್ ಹಣದ ಬಗ್ಗೆ ಮಾತನಾಡುತ್ತಾ, ‘ಆ ಹಣ ನಿಮ್ಮ ಬಳಿಯೇ ಇರಲಿ. ನೀವು ನನಗಾಗಿ ಖಂಡಿತವಾಗಿಯೂ ಒಂದು ತೆಲುಗು ಸಿನಿಮಾ ಮಾಡಲೇಬೇಕು’ ಎಂದು ನಗುತ್ತಲೇ ಬೇಡಿಕೆ ಇಟ್ಟರು.

ಇದನ್ನೂ ಓದಿ: ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ; ಶಾಕ್ ಆದ ತಾಯಿ

ಇಲ್ಲಿಯವರೆಗೆ ನಾಗವಂಶಿ ನಿರ್ಮಾಣದ ಯಾವುದೇ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸಿಲ್ಲ. ಆದರೆ ಈ ಸಂಭಾಷಣೆಯ ನಂತರ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಸದ್ಯ ಸಾಯಿ ಪಲ್ಲವಿ ‘ಓಂ: ಚಾಪ್ಟರ್ 1’ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಧನುಷ್, ಮಮ್ಮುಟ್ಟಿ ಮತ್ತು ಶ್ರೀಲೀಲಾ ನಟಿಸಿರುವ, ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾ ನವೆಂಬರ್ 20, 2026ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:56 am, Tue, 17 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಸ್ಟಿಂಗ್ ಆಪರೇಷನ್ ಕೇಸ್​: ಸಿಸಿಬಿ ಮುಂದೆ ಕೃಪಾ ಆಳ್ವಾ ಹಾಜರ್
ಸ್ಟಿಂಗ್ ಆಪರೇಷನ್ ಕೇಸ್​: ಸಿಸಿಬಿ ಮುಂದೆ ಕೃಪಾ ಆಳ್ವಾ ಹಾಜರ್
ಸೋನಿಯಾ ಗಾಂಧಿಯ ಆತ್ಮಕತೆ ಇಂದು ಅಧಿಕೃತ ಬಿಡುಗಡೆ
ಸೋನಿಯಾ ಗಾಂಧಿಯ ಆತ್ಮಕತೆ ಇಂದು ಅಧಿಕೃತ ಬಿಡುಗಡೆ
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮದ್ಯ ಮಾರಾಟ ನಿಷೇಧ
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮದ್ಯ ಮಾರಾಟ ನಿಷೇಧ