AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ; ಶಾಕ್ ಆದ ತಾಯಿ

‘ಓಂ: ಚಾಪ್ಟರ್ 1’ ಸಿನಿಮಾದಲ್ಲಿ ಸಿಬಿಐ ಅಧಿಕಾರಿಯ ಪಾತ್ರಕ್ಕಾಗಿ ನಟಿ ಸಾಯಿ ಪಲ್ಲವಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಹೊಸ ಲುಕ್ ನೋಡಿದ ತಾಯಿ ಶಾಕ್ ಆದರೆ, ತಂದೆ ವಿಗ್ ಹಾಕಿದ್ದೀಯಾ ಎಂದು ಪ್ರಶ್ನಿಸಿದ್ದರು. ನವೆಂಬರ್ 20ರಂದು ಈ ಸಿನಿಮಾ ತೆರೆಗೆ ಬರಲಿದೆ.

ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ;  ಶಾಕ್ ಆದ ತಾಯಿ
ಸಾಯಿ ಪಲ್ಲವಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 16, 2026 | 8:09 AM

Share

ಮುಖ್ಯಾಂಶಗಳು

  • ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ
  • ವಿಡಿಯೋ ಕಾಲ್ ನೋಡಿ ಶಾಕ್ ಆದ ತಾಯಿ
  • ಮಗಳ ಹೊಸ ಲುಕ್ ನೋಡಿ ವಿಗ್ ಹಾಕಿದ್ದೀಯಾ ಎಂದ ತಂದೆ

ನಟಿ ಸಾಯಿ ಪಲ್ಲವಿ ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರು ‘ಓಂ: ಚಾಪ್ಟರ್ 1 – ಉಧಿರಮ್: ದಿ ಬ್ಲಡ್ ವುಡ್’ ಸಿನಿಮಾದಲ್ಲಿ ಖಡಕ್ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಪಾತ್ರಕ್ಕಾಗಿ ಸಾಯಿ ಪಲ್ಲವಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದು, ಇದನ್ನು ನೋಡಿದ ಅವರ ಪೋಷಕರು ಅಕ್ಷರಶಃ ಬೆಚ್ಚಿಬಿದ್ದಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿ ಪಲ್ಲವಿ ಈ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕಥೆ ಕೇಳಿದ ತಕ್ಷಣ ಪಾತ್ರಕ್ಕೆ ತಕ್ಕಂತೆ ಬದಲಾಗಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ಕೂದಲು ಕತ್ತರಿಸಿದ ನಂತರ ಮೊದಲಿಗೆ ತಾಯಿಗೆ ವಿಡಿಯೋ ಕರೆ ಮಾಡಿದಾಗ ಅವರು ಶಾಕ್ ಆಗಿ ಕರೆ ಕಟ್ ಮಾಡಿದ್ದರು. ಬಳಿಕ ತಂದೆ ಫೋನ್ ಮಾಡಿ ವಿಗ್ ಹಾಕಿದ್ದೀಯಾ ಎಂದು ಪ್ರಶ್ನಿಸಿದ್ದರು. ಪಾತ್ರಕ್ಕಾಗಿ ಈ ತ್ಯಾಗ ಮಾಡಿರುವುದಾಗಿ ವಿವರಿಸಿದ ಮೇಲೆ ಪೋಷಕರು ಸಮಾಧಾನಗೊಂಡರು ಎಂದು ಸಾಯಿ ಪಲ್ಲವಿ ತಿಳಿಸಿದ್ದಾರೆ.

ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಕೂಡ ಸಾಯಿ ಪಲ್ಲವಿ ಅವರ ಸಮರ್ಪಣಾ ಮನೋಭಾವವನ್ನು ಕೊಂಡಾಡಿದ್ದಾರೆ. ಸಾಮಾನ್ಯವಾಗಿ ಹೀರೋಗಳ ಪಾತ್ರಕ್ಕಾಗಿ ಇಂತಹ ಬದಲಾವಣೆಗಳನ್ನು ಮಾಡಲಾಗುತ್ತದೆ. ಆದರೆ ಕಥೆಯ ಮೇಲಿನ ಪ್ರೀತಿಯಿಂದ ಸಾಯಿ ಪಲ್ಲವಿ ಸ್ವಯಂಪ್ರೇರಿತರಾಗಿ ಕೂದಲು ಕತ್ತರಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ನಿತ್ಯಾ ರೆಡ್ಡಿ ಎಂಬ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಎಎಸ್‌ಪಿಯಾಗಿದ್ದ ಅವರು ನಂತರ ಸಿಬಿಐ ಸೇರುತ್ತಾರೆ. ಕಳ್ಳಸಾಗಣೆ ಜಾಲವನ್ನು ಭೇದಿಸಲು ಇಂಟರ್‌ಪೋಲ್ ಜೊತೆ ಸೇರಿ ‘ಆಪರೇಷನ್ ಮೋಲ್’ ಕಾರ್ಯಾಚರಣೆಯನ್ನು ಅವರು ಮುನ್ನಡೆಸುತ್ತಾರೆ. ಟ್ರೇಲರ್‌ನಲ್ಲಿ ಅವರ ಖಡಕ್ ತನಿಖೆಯ ಝಲಕ್ ಈಗಾಗಲೇ ಗಮನ ಸೆಳೆದಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ

ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ ನಡೆಯುವ ನೈಜ ರಕ್ತಚಂದನ ಕಳ್ಳಸಾಗಣೆ ಘಟನೆಗಳಿಂದ ಈ ಸಿನಿಮಾ ಸ್ಫೂರ್ತಿ ಪಡೆದಿದೆ. ಅರಣ್ಯ ಕಾರ್ಮಿಕರ ಶೋಷಣೆಯ ಕಥೆಯನ್ನೂ ಇದು ಒಳಗೊಂಡಿದ್ದು, ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾವನ್ನು ನೆನಪಿಸುವಂತಿದೆ. ಬಹುನಿರೀಕ್ಷಿತ ‘ಓಂ – ಚಾಪ್ಟರ್ 1’ ಸಿನಿಮಾ ಇದೇ ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More