Prabhas: ಆಂಧ್ರ, ತೆಲಂಗಾಣದಲ್ಲಿ ‘ಸಲಾರ್​’ ಚಿತ್ರಕ್ಕೆ 200 ಕೋಟಿ ರೂ. ಬಿಸ್ನೆಸ್​ ಮಾತುಕತೆ? ಹೆಚ್ಚಿತು ನಿರೀಕ್ಷೆ

|

Updated on: Jul 16, 2023 | 2:12 PM

Salaar Movie: ‘ಸಲಾರ್​’ ಸಿನಿಮಾ ಎಷ್ಟು ಬಿಸ್ನೆಸ್​ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪ್ರಭಾಸ್​ ಅವರ ಅಭಿಮಾನಿಗಳಂತೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Prabhas: ಆಂಧ್ರ, ತೆಲಂಗಾಣದಲ್ಲಿ ‘ಸಲಾರ್​’ ಚಿತ್ರಕ್ಕೆ 200 ಕೋಟಿ ರೂ. ಬಿಸ್ನೆಸ್​ ಮಾತುಕತೆ? ಹೆಚ್ಚಿತು ನಿರೀಕ್ಷೆ
ಪ್ರಭಾಸ್​
Follow us on

ನಟ ಪ್ರಭಾಸ್​ (Prabhas) ಅವರು ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿದ್ದಾರೆ ಎಂಬುದು ನಿಜ. ಹಾಗಂತ ಅವರ ಬಗ್ಗೆ ಅಭಿಮಾನಿಗಳಿಗೆ ಇರುವ ಕ್ರೇಜ್​ ಕಡಿಮೆ ಆಗಿಲ್ಲ. ಅದಕ್ಕೆ ಕಾರಣ ಹಲವು. ‘ಆದಿಪುರುಷ್​’ ಸೋಲಿನ ಬಳಿಕ ಸಿನಿಪ್ರಿಯರು ಸಲಾರ್​’ (Salaar Movie) ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿರುವುದರಿಂದ ಕುತೂಹಲ ಜಾಸ್ತಿ ಇದೆ. ಅಲ್ಲದೇ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ನೋಡಿ ಜನರು ವಾವ್​ ಎಂದಿದ್ದಾರೆ. ಅಚ್ಚರಿ ಏನೆಂದರೆ, ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಸಿನಿಮಾದ ವಿತರಣೆ ಹಕ್ಕುಗಳನ್ನು 200 ಕೋಟಿ ರೂಪಾಯಿಗೆ ಮಾರಲು ನಿರ್ಮಾಣ ಸಂಸ್ಥೆ ಆಲೋಚಿಸಿದೆ ಎಂಬ ಮಾತು ಕೇಳಿಬಂದಿದೆ.

ಪ್ರಭಾಸ್​ ನಟನೆಯ ಸಿನಿಮಾಗಳ ಮೇಲೆ ವಿತರಕರಿಗೆ ಅನುಮಾನ ಶುರುವಾಗಿದೆ. ‘ಸಾಹೋ’, ‘ರಾಧೆ ಶ್ಯಾಮ್​’ ಹಾಗೂ ‘ಆದಿಪುರುಷ್​’ ಸೋತಿದ್ದರಿಂದ ಅವರ ಮುಂಬರುವ ಸಿನಿಮಾಗಳ ವಿತರಣೆ ಹಕ್ಕನ್ನು ಕೊಂಡುಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ. ‘ಸಲಾರ್​’ ಚಿತ್ರಕ್ಕೆ 200 ಕೋಟಿ ರೂಪಾಯಿ ಹೆಚ್ಚಾಯಿತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: Salaar: ‘ಸಲಾರ್​ ಸಿನಿಮಾ 2 ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡಲಿದೆ’: ಭವಿಷ್ಯ ನುಡಿದ ಹಾಸ್ಯ ನಟ

ಒಂದು ವೇಳೆ 200 ಕೋಟಿ ರೂಪಾಯಿಗೆ ಯಾವುದೇ ವಿತರಕರು ‘ಸಲಾರ್​’ ಸಿನಿಮಾದ ವಿತರಣೆ ಹಕ್ಕುಗಳನ್ನು ಖರೀದಿಸಲು ಒಪ್ಪಿಕೊಳ್ಳದಿದ್ದರೆ ‘ಹೊಂಬಾಳೆ ಫಿಲ್ಮ್ಸ್​​’ ಮೂಲಕವೇ ನೇರವಾಗಿ ರಿಲೀಸ್​ ಮಾಡುವ ಸಾಧ್ಯತೆ ಇರುತ್ತದೆ. ಪ್ರೇಕ್ಷಕರ ಕೃಪೆಯಿಂದ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಂಡರೆ ಹೊಂಬಾಳೆಗೆ ಸಿಕ್ಕಾಪಟ್ಟೆ ಕಮಾಯಿ ಆಗಲಿದೆ. ಹಾಗಾಗಿ ಈ ಸಿನಿಮಾ ಎಷ್ಟು ಬಿಸ್ನೆಸ್​ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪ್ರಭಾಸ್​ ಅವರ ಅಭಿಮಾನಿಗಳಂತೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Vivek Agnihotri: ‘ಹಿಂಸೆಯ ವೈಭವೀಕರಣವೂ ಟ್ಯಾಲೆಂಟ್​ ಆಗಿಬಿಟ್ಟಿದೆ’: ‘ಸಲಾರ್​’ ಟೀಸರ್​ ಬಿಡುಗಡೆ ಬೆನ್ನಲ್ಲೇ ವಿವೇಕ್​ ಅಗ್ನಿಹೋತ್ರಿ ಟ್ವೀಟ್​

‘ಸಲಾರ್​’ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಲಯಾಳಂ ಸ್ಟಾರ್​ ನಟ ಪೃಥ್ವಿರಾಜ್​ ಸುಕುಮಾರನ್​ ಅಭಿನಯಿಸಿದ್ದಾರೆ. ಜಗಪತಿ ಬಾಬು, ಸಪ್ತಗಿರಿ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಎರಡು ಪಾರ್ಟ್​ಗಳಲ್ಲಿ ‘ಸಲಾರ್​’ ಸಿನಿಮಾ ಮೂಡಿಬರುತ್ತಿದೆ. ಸೆಪ್ಟೆಂಬರ್​ 28ರಂದು ಮೊದಲ ಪಾರ್ಟ್​ ಬಿಡುಗಡೆ ಆಗಲಿದೆ. ಇದಲ್ಲದೇ, ಪ್ರಭಾಸ್​ ನಟನೆಯ ‘ಪ್ರಾಜೆಕ್ಟ್​ ಕೆ’ ಚಿತ್ರ ಕೂಡ ಹೈಪ್​ ಸೃಷ್ಟಿ ಮಾಡಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.