ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಗೆ ಕೊನೆಗೂ ವಿಶ್ ಮಾಡಿದ ಸಲ್ಮಾನ್ ಖಾನ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 31, 2022 | 12:40 PM

ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಗೆ ಬ್ಯಾಡ್​ಬಾಯ್ ಸಲ್ಮಾನ್ ಖಾನ್ ಶುಭಾಶಯ ಕೋರಿದ್ದಾರೆ.

ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಗೆ ಕೊನೆಗೂ ವಿಶ್ ಮಾಡಿದ ಸಲ್ಮಾನ್ ಖಾನ್
ಕತ್ರಿನಾ ಕೈಫ್, ಶೆಹನಾಜ್ ಗಿಲ್, ಸಲ್ಮಾನ್ ಖಾನ್
Follow us on

ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಕಟ್ಟುನಿಟ್ಟಾದ ಭದ್ರತೆಯಲ್ಲಿ ಕೆವಲ ಆತ್ಮೀಯ ಸಂಬಂಧಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆ ಈಗ ಬ್ಯಾಡ್​ಬಾಯ್ ಸಲ್ಮಾನ್ ಖಾನ್ ಶುಭಾಶಯ ಕೋರಿದ್ದಾರೆ.  ಹೌದು ಭಾನುವಾರ ನಡೆದ ಬಿಗ್ ಬಾಸ್ 15 ರ ಗ್ರಾಂಡ್ ಫಿನಾಲೆಯಲ್ಲಿ ಕ್ಯಾಮರಾವನ್ನು ನೋಡುತ್ತಾ, ಸಲ್ಮಾನ್ ಖಾನ್ ಕತ್ರಿನಾಗೆ (“ಕತ್ರೀನಾ, ಶಾದಿ ಮುಬಾರಕ್ ಹೋ) ಮದುವೆ ಶುಭಾಶಯ ತಿಳಿಸಿದ್ದಾರೆ. ಬಿಗ್ ಬಾಸ್ 15 ರ ಮಾಜಿ ಸ್ಪರ್ಧಿ ರಾಖಿ ಸಾವಂತ್ ಮತ್ತು ಬಿಗ್ ಬಾಸ್ 14 ರ ವಿನ್ನರ್ ರುಬಿನಾ ದಿಲಾಯಿಕ್ ಅವರು ಚಿಕ್ನಿ ಚಮೇಲಿ ಹಾಡಿಗೆ ನೃತ್ಯ ಮಾಡಿದರು. 2012ರಲ್ಲಿ ತೆರೆಕಂಡ ಅಗ್ನಿಪಥ್‌ ಚಿತ್ರದ ಹಾಡುಯಿದ್ದಾಗಿದ್ದು,  ಕತ್ರಿನಾ ಅವರ ನೃತ್ಯದಿಂದ್ದಾಗಿ ಇದು ಭಾರೀ ಜನಪ್ರಿಯತೆಯನ್ನು ಗಳಿಸಿತು.

ಬಿಗ್ ಬಾಸ್ 15 ರ ಫಿನಾಲೆಯಲ್ಲಿ, ಶೆಹನಾಜ್ ಗಿಲ್ ಕತ್ರಿನಾ ಮದುವೆಯ ಬಗ್ಗೆ ಸಲ್ಮಾನ್ ಅವರನ್ನು ಕೀಟಲೆ ಮಾಡಿದರು. ಕತ್ರಿನಾ ಮತ್ತು ವಿಕ್ಕಿಯ ಇತ್ತೀಚಿನ ಮದುವೆಯ ಬಗ್ಗೆ ಮಾತನಾಡುವಾಗ ಶೆಹನಾಜ್, ಸಲ್ಮಾನ್‌ರಿಗೆ ಹೀಗೆ ಹೇಳುತ್ತಾರೆ. ನೀವು ಸಂತೋಷವಾಗಿರಿ ಬಾಸ್ ಅದಕ್ಕಿಂತ ಜಾಸ್ತಿ ಏನು ಹೇಳಲ್ಲ ಕ್ಷಮಿಸಿ ಎಂದರು. (“ಸರ್ ಆಪ್ ಖುಷ್ ರಹೋ ಬಾಸ್. ಕ್ಷಮಿಸಿ, ಮೈನ್ ಜ್ಯಾದಾ ತೋ ನಹೀ ಬೋಲ್ ರಾಹಿ) ನೀವು ಒಬ್ಬಂಟಿಯಾಗಿರುವುದು ಉತ್ತಮ ಎಂದು ಕೂಡಾ ಅವರು ಹೇಳಿದ್ದಾರೆ. ಆಗ ಸಲ್ಮಾನ್ ಖಾನ್ ನಾನು ಒಬ್ಬಂಟಿಯಾಗಿರುವಾಗ ಇನ್ನೂ ಉತ್ತಮವಾಗುತ್ತೇನೆ ಎಂದಿದ್ದಾರೆ. ಆಶ್ಚರ್ಯಚಕಿತನಾದ ಶೆಹನಾಜ್ ಸಲ್ಮಾನ್‌ಗೆ ನೀವು ಕಮಿಟ್​ ಆಗಿದ್ದಾರೆ ಎಂದು ಕೇಳಿದ್ದಾರೆ.

ಇನ್ನೂ ಕತ್ರಿನಾ ಮತ್ತು ವಿಕ್ಕಿಯ ವಿವಾಹದಲ್ಲಿ ಸುಮಾರು 120 ಅತಿಥಿಗಳು ಭಾಗವಹಿಸಿದ್ದರು. ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಅವಕಾಶವಿತ್ತು. ಕತ್ರಿನಾ ಅವರೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿರುವ ಸಲ್ಮಾನ್ ಅತಿಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ ಎನ್ನಲಾಗುತ್ತಿತ್ತು. ಹಿಂದಿ ಬಿಗ್​ ಬಾಸ್​ 15’ ಫಿನಾಲೆಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ರಶ್ಮಿ ದೇಸಾಯಿ, ಪ್ರತೀಕ್​ ಸೆಹಜ್ಪಾಲ್​, ತೇಜಸ್ವಿ ಪ್ರಕಾಶ್​, ಶಮಿತಾ ಶೆಟ್ಟಿ, ಕರಣ್​ ಕುಂದ್ರಾ ಮತ್ತು ನಿಶಾಂತ್​ ಭಟ್​ ಅವರು ಫಿನಾಲೆ ತಲುಪಿದ್ದರು. ಎಲ್ಲರೂ ಕೂಡ ಪ್ರಬಲ ಸ್ಪರ್ಧಿಗಳೇ ಆಗಿದ್ದರು. ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​ ಪ್ರವೇಶಿಸಿ, ಫೈನಲ್​ ಹಂತ ತಲುಪಿದ್ದ ರಶ್ಮಿ ದೇಸಾಯಿ ಅವರು ಮೊದಲು ಎಲಿಮಿನೇಟ್​ ಆದರು. ಕೊನೆಗೆ ಜಸ್ವಿ ಪ್ರಕಾಶ್​ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ;  

Bigg Boss 15 Winner: ನಟಿ ತೇಜಸ್ವಿ ಪ್ರಕಾಶ್​ಗೆ ‘ಬಿಗ್​ ಬಾಸ್​ 15’ ವಿನ್ನರ್​ ಪಟ್ಟ; ಬಹುಮಾನದ ಮೊತ್ತ ಎಷ್ಟು?