ತೆಲುಗು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ ಸಲ್ಮಾನ್ ಖಾನ್? ಸ್ಟಾರ್ ನಿರ್ದೇಶಕನ ಆಫರ್ ರಿಜೆಕ್ಟ್​

| Updated By: ರಾಜೇಶ್ ದುಗ್ಗುಮನೆ

Updated on: Nov 18, 2022 | 2:45 PM

ಸಲ್ಮಾನ್ ಖಾನ್ ಅವರು ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದವರು. ಆದರೆ, ಇತ್ತೀಚೆಗೆ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಇದೇ ಸಂದರ್ಭದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ತೆಲುಗು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ ಸಲ್ಮಾನ್ ಖಾನ್? ಸ್ಟಾರ್ ನಿರ್ದೇಶಕನ ಆಫರ್ ರಿಜೆಕ್ಟ್​
ಸಲ್ಮಾನ್,ಪವನ್,ಹರೀಶ್
Follow us on

ನಟ ಸಲ್ಮಾನ್ ಖಾನ್ (Salman Khan) ಅವರು ‘ಗಾಡ್ ಫಾದರ್’ ಚಿತ್ರದ (GodFather Movie) ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಚಿರಂಜೀವಿ ಅವರು ಲೀಡ್ ರೋಲ್ ಮಾಡಿದರೆ ಸಲ್ಮಾನ್ ಖಾನ್ ಅವರು ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ, ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಸಲ್ಮಾನ್ ಖಾನ್ ಅವರು ನಟಿಸಿದ ಹೊರತಾಗಿಯೂ ಈ ಸಿನಿಮಾ ಹಿಂದಿ ಬೆಲ್ಟ್​​ನಲ್ಲಿ ಕಳಪೆ ಕಲೆಕ್ಷನ್ ಮಾಡಿತು. ಈಗ ಸಲ್ಮಾನ್ ಖಾನ್ ಅವರು ತೆಲುಗು ಚಿತ್ರರಂಗದಿಂದ ದೂರ ಉಳಿಯುವ ಪ್ಲ್ಯಾನ್​ನಲ್ಲಿ ಇದ್ದಾರೆ ಎಂದು ವರದಿ ಆಗಿದೆ.

ಸಲ್ಮಾನ್ ಖಾನ್ ಅವರು ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದವರು. ಆದರೆ, ಇತ್ತೀಚೆಗೆ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಇದೇ ಸಂದರ್ಭದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಗೆಳೆಯ ಚಿರಂಜೀವಿಗಾಗಿ ‘ಗಾಡ್​​ಫಾದರ್​’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮಲಯಾಳಂನ ‘ಲೂಸಿಫರ್​’ ಚಿತ್ರದ ರಿಮೇಕ್ ಆಗಿತ್ತು. ಮೊದಲ ಎರಡು ದಿನ ಸಿನಿಮಾ ಸದ್ದು ಮಾಡಿದ್ದು ಬಿಟ್ಟರೆ ದೊಡ್ಡ ಕಲೆಕ್ಷನ್ ಮಾಡಲಿಲ್ಲ.

ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ತೆಲುಗು ನಿರ್ದೇಶಕ ಹರೀಶ್ ಶಂಕರ್​ ಕಥೆ ಹೇಳಿದ್ದರು. ‘ಗಬ್ಬರ್​’, ‘ಡಿಜೆ’ ಮೊದಲಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಹರೀಶ್ ಶಂಕರ್​ಗೆ ಇದೆ. ಅವರು ಪವನ್ ಕಲ್ಯಾಣ್ ನಟಿಸಲಿರುವ ‘ಭವದೀಯುಡು ಭಗತ್ ಸಿಂಗ್’ ಚಿತ್ರದ ಕೆಲಸಗಳಲ್ಲಿ ಭಾಗಿ ಆಗಬೇಕಿತ್ತು. ಆದರೆ, ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಆದ್ದರಿಂದ ಬೇರೆ ನಟರ ಜತೆ ಕೆಲಸ ಮಾಡುವುದು ಹರೀಶ್ ಶಂಕರ್​​ಗೆ ಅನಿವಾರ್ಯವಾಗಿದೆ. ಹೀಗಾಗಿ, ಸಲ್ಲು ಕಾಲ್​ಶೀಟ್ ಕೇಳಿದ್ದರು ಹರೀಶ್.

ಇದನ್ನೂ ಓದಿ
ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ವಶಕ್ಕೆ; ನಟನ ಬಳಿ ಸಿಕ್ತು ಆರು ದುಬಾರಿ ವಾಚ್
‘ಶಾರ್ಜಾ’ದಲ್ಲಿ ಪ್ರಶಸ್ತಿ ಸ್ವೀಕರಿಸಿದ ಕಿಂಗ್​ ಖಾನ್​ ಶಾರುಖ್
ಸಲ್ಮಾನ್​ ಖಾನ್ ಜೊತೆ ಐಕಾನಿಕ್​ ಹಾಡಿಗೆ ಹೆಜ್ಜೆ ಹಾಕಿದ ಬಾಕ್ಸರ್​ ನಿಖತ್​ ಜರೀನ್
‘ಸಲ್ಮಾನ್ ಖಾನ್, ಶಾರುಖ್ ಮಗ ಡ್ರಗ್ಸ್ ತೆಗೆದುಕೊಳ್ತಾರೆ’; ನೇರವಾಗಿ ಆರೋಪ ಮಾಡಿದ ಬಾಬಾ ರಾಮ್​ದೇವ್

ಇದನ್ನೂ ಓದಿ: ‘ಸಲ್ಮಾನ್ ಖಾನ್, ಶಾರುಖ್ ಮಗ ಡ್ರಗ್ಸ್ ತೆಗೆದುಕೊಳ್ತಾರೆ’; ನೇರವಾಗಿ ಆರೋಪ ಮಾಡಿದ ಬಾಬಾ ರಾಮ್​ದೇವ್

ಸಲ್ಮಾನ್ ಖಾನ್ ಕಥೆ ಕೇಳಿದ್ದರು. ಸ್ಕ್ರಿಪ್ಟ್​ನ ಇಂಗ್ಲಿಷ್​ನಲ್ಲಿ ಕಳುಹಿಸುವಂತೆ ಸಲ್ಲು ಕೇಳಿದ್ದರು. ಹರೀಶ್​ ಶಂಕರ್ ಅವರು ಇತ್ತೀಚೆಗೆ ಸ್ಕ್ರಿಪ್ಟ್​ನ ಸಲ್ಲುಗೆ​ ಕಳುಹಿಸಿದ್ದರು. ಆದರೆ, ಇದನ್ನು ರಿಜೆಕ್ಟ್ ಮಾಡಿದ್ದಾರೆ ಸಲ್ಮಾನ್ ಖಾನ್. ಮೂಲಗಳ ಪ್ರಕಾರ ಈ ಚಿತ್ರ ಹಿಂದಿ ಹಾಗೂ ತೆಲುಗಿನಲ್ಲಿ ತರುವ ಪ್ಲ್ಯಾನ್ ಇತ್ತು. ಆದರೆ, ತೆಲುಗಿನಲ್ಲಿ ಸೋಲು ಕಂಡ ಕಾರಣ ಸಲ್ಮಾನ್ ಖಾನ್ ಅವರು ಬಾಲಿವುಡ್​ ನಿರ್ದೇಶಕರ ಜತೆ ಮಾತ್ರ ಕೆಲಸ ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.