Samantha Akkineni: ಸಂಕಷ್ಟದಲ್ಲಿದ್ದ ಮಹಿಳಾ ಆಟೋ ಡ್ರೈವರ್​​ಗೆ ದುಬಾರಿ ಕಾರ್​ ಗಿಫ್ಟ್​ ನೀಡಿದ ನಟಿ ಸಮಂತಾ

ಕವಿತಾ ಹೆಸರಿನ ಮಹಿಳೆ ಆಟೋ ಓಡಿಸಿ ಮನೆ ನಡೆಸುತ್ತಿದ್ದರು. ಅವರ ಆಟೋ ಮೀಟರ್​ ಓಡಿದರೆ ಮಾತ್ರ ಮನೆಯಲ್ಲಿ ಊಟ. ತಂದೆ-ತಾಯಿ ತೀರಿಕೊಂಡ ನಂತರ ತಂಗಿಯನ್ನು ಸಾಕುವ ಜವಾಬ್ದಾರಿ ಕವಿತಾ ಹೆಗಲೇರಿತ್ತು.

Samantha Akkineni: ಸಂಕಷ್ಟದಲ್ಲಿದ್ದ ಮಹಿಳಾ ಆಟೋ ಡ್ರೈವರ್​​ಗೆ ದುಬಾರಿ ಕಾರ್​ ಗಿಫ್ಟ್​ ನೀಡಿದ ನಟಿ ಸಮಂತಾ
ಸಮಂತಾ ಅಕ್ಕಿನೇನಿ
Follow us
ರಾಜೇಶ್ ದುಗ್ಗುಮನೆ
|

Updated on:Apr 21, 2021 | 8:51 PM

ಸಮಂತಾ ಅಕ್ಕಿನೇನಿ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದವರು. ಭಿನ್ನ ಪಾತ್ರಗಳನ್ನು ಮಾಡುತ್ತಾ ಸಾಕಷ್ಟು ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಇದರ ಜತೆಗೆ ಸಾಮಾಜಿಕ ಕೆಲಸಗಳ ಮೂಲಕವೂ ಸಮಂತಾ ಗುರುತಿಸಿಕೊಂಡಿದ್ದಾರೆ. ಈಗ ಬಡ ಮಹಿಳಾ ಆಟೋ ಡ್ರೈವರ್​ಗೆ ಸಹಾಯ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕವಿತಾ ಹೆಸರಿನ ಮಹಿಳೆ ಆಟೋ ಓಡಿಸಿ ಮನೆ ನಡೆಸುತ್ತಿದ್ದರು. ಅವರ ಆಟೋ ಮೀಟರ್​ ಓಡಿದರೆ ಮಾತ್ರ ಮನೆಯಲ್ಲಿ ಊಟ. ತಂದೆ-ತಾಯಿ ತೀರಿಕೊಂಡ ನಂತರ ತಂಗಿಯನ್ನು ಸಾಕುವ ಜವಾಬ್ದಾರಿ ಕವಿತಾ ಹೆಗಲೇರಿತ್ತು. ತೀವ್ರ ಬಡತನ ಇದ್ದಿದ್ದರಿಂದ ತಂಗಿಗೆ ಶಿಕ್ಷಣ ನೀಡುವುದು ಕೂಡ ಕಷ್ಟವಾಗಿತ್ತು. ಅಲ್ಲದೆ, ಕೊರೊನಾ, ಲಾಕ್​​ಡೌನ್​ನಿಂದ ಜೀವನ ನಡೆಸುವುದು ಮತ್ತಷ್ಟು ಕಷ್ಟವಾಗಿತ್ತು.

ಈ ವಿಚಾರ ಸಮಂತಾ ಕಿವಿಗೆ ಬಿದ್ದಿದೆ. ಇದನ್ನು ತಿಳಿದ ತಕ್ಷಣ ಅವರು ಕವಿತಾಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಬರೋಬ್ಬರಿ 12.5 ಲಕ್ಷ ರೂಪಾಯಿ ಕಾರನ್ನು ಸಮಂತಾ ಗಿಫ್ಟ್​ ಆಗಿ ನೀಡಿದ್ದಾರೆ. ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕವಿತಾ ಕಾರನ್ನು ಕೂಡ ಓಡಿಸಲು ಕಲಿತಿದ್ದಾರೆ. ಹೀಗಾಗಿ, ಸಮಂತಾ ನೀಡಿದ ಕಾರಿನಿಂದ ಅವರು ಕ್ಯಾಬ್​ ಕೂಡ ಓಡಿಸಬಹುದು. ಈ ಮೂಲಕ ಕವಿತಾ ಕುಟುಂಬಕ್ಕೆ ಸಮಂತಾ ಆಸರೆ ಆಗಿದ್ದಾರೆ.

ಸಮಂತಾ ಅಸಿಸ್ಟಂಟ್​​ಗಳು ಕವಿತಾಗೆ ಕಾರ್​ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಮಂತಾ ಕೆಲಸಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಕೆಲಸವನ್ನು ಹೀಗೆಯೇ ಮುಂದುವರಿಸಲಿ ಎಂದು ಅನೇಕರು ಆಶಿಸಿದ್ದಾರೆ.

ಸಮಂತಾ ಸದ್ಯ ಸಿನಿಮಾಗಳ ಜತೆಗೆ ವೆಬ್​ ಸೀರಿಸ್​ನಲ್ಲೂ ಬ್ಯುಸಿಯಾಗಿದ್ದಾರೆ. ಈ ಮೊದಲು ಫ್ಯಾಮಿಲಿಮೆನ್​ ವೆಬ್​ ಸೀರಿಸ್​ ಹಿಟ್​ ಆಗಿತ್ತು. ಈಗ ಫ್ಯಾಮಿಲಿ ಮ್ಯಾನ್​​-2ನಲ್ಲೂ ಸಮಂತಾ ನಟಿಸುತ್ತಿದ್ದಾರೆ. ಇದರ ಜತೆಗೆ 2 ಸಿನಿಮಾಗಳಲ್ಲೂ ಸಮಂತಾ ನಟಿಸುತ್ತಿದ್ದಾರೆ.

ಇದನ್ನೂ ಓದಿ: Samantha Yoga : ಸೌತ್ ನಟಿ ಸಮಂತಾ ಅಕ್ಕಿನೇನಿ ಯೋಗಾಸನ ಮಾಡುವ ಫೋಟೋಗಳು ಸಿಕ್ಕಾ ಪಟ್ಟೆ ವೈರಲ್!

Published On - 8:46 pm, Wed, 21 April 21