ನಯನತಾರಾ- ವಿಘ್ನೇಶ್ ಮದುವೆಗೆ ಹಾಜರಿ ಹಾಕುವ ಸೆಲೆಬ್ರಿಟಿಗಳು ಯಾರ್ಯಾರು? ಇಲ್ಲಿದೆ ಲಿಸ್ಟ್

ಬೆಳಗ್ಗೆ ಮದುವೆ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಭರವಸೆಯನ್ನು ವಿಘ್ನೇಶ್ ನೀಡಿದ್ದಾರೆ.

ನಯನತಾರಾ- ವಿಘ್ನೇಶ್ ಮದುವೆಗೆ ಹಾಜರಿ ಹಾಕುವ ಸೆಲೆಬ್ರಿಟಿಗಳು ಯಾರ್ಯಾರು? ಇಲ್ಲಿದೆ ಲಿಸ್ಟ್
ನಯನತಾರಾ-ವೀಘ್ನೇಶ್
Edited By:

Updated on: Jun 08, 2022 | 9:34 PM

ನಟಿ ನಯನತಾರಾ (Nayanathara) ಹಾಗೂ ನಿರ್ದೇಶಕ ವಿಘ್ನೇಶ್​ ಶಿವನ್ (Vignesh Shivan) ಮದುವೆ ಜೂನ್​ 9ರಂದು ನಡೆಯುತ್ತಿದೆ. ಅನೇಕ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಈಗ ಹೊಸ ಜೀವನ ಆರಂಭಿಸುತ್ತಿದ್ದಾರೆ. ಪ್ರೀತಿ ವಿಚಾರದಲ್ಲಿ ಇವರು ಮುಚ್ಚುಮರೆ ಮಾಡಿರಲಿಲ್ಲ. ಸಾಕಷ್ಟು ಕಡೆಗಳಲ್ಲಿ ಸುತ್ತಾಟ ನಡೆಸುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದರು. ಈಗ ಇಬ್ಬರ ಬಾಳಿಗೆ ಹೊಸ ಅರ್ಥ ಬರುತ್ತಿದೆ. ಜೂನ್ 9ರಂದು ಮಹಾಬಲಿಪುರಂನಲ್ಲಿ ವಿಘ್ನೇಶ್ ಹಾಗೂ ನಯನತಾರಾ ವಿವಾಹ ಕಾರ್ಯ ನಡೆಯುತ್ತಿದೆ.

ನಯನತಾರಾ ಹಾಗೂ ವಿಘ್ನೇಶ್ ಮದುವೆಗೆ ಆಪ್ತರು ಹಾಗೂ ಗೆಳೆಯರು ಮಾತ್ರ ಬರುತ್ತಿದ್ದಾರೆ. ಆರಂಭದಲ್ಲಿ ತಿರುಪತಿಯಲ್ಲಿ ಇವರು ಮದುವೆ ಆಗುವ ಆಲೋಚನೆ ಇಟ್ಟುಕೊಂಡಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದರು. ಆದರೆ, ಕಾರಣಾಂತರಗಳಿಂದ ಅಲ್ಲಿ ಮದುವೆ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಹಾಬಲಿಪುರಂನಲ್ಲಿ ಇವರ ವಿವಾಹಕಾರ್ಯ ನಡೆಯುತ್ತಿದೆ.

ಬೆಳಗ್ಗೆ ಮದುವೆ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಭರವಸೆಯನ್ನು ವಿಘ್ನೇಶ್ ನೀಡಿದ್ದಾರೆ. ಜೂನ್ 11ರಂದು ಮಾಧ್ಯಮದವರಿಗೋಸ್ಕರ ಆರತಕ್ಷತೆ ಆಯೋಜನೆ ಮಾಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ
ನಯನತಾರಾ-ವಿಘ್ನೇಶ್ ಮದುವೆ ವಿಚಾರದಲ್ಲಿ ಭುಗಿಲೆದ್ದ ಅಸಮಾಧಾನ
ಬಾಯ್​ಫ್ರೆಂಡ್​ ಜತೆ ಇರಾ ಖಾನ್​ ಬರ್ತ್​​ಡೇ ಆಚರಣೆ​; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು  
ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?
ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ ನಯನತಾರಾ? ಏನು ಇದರ ಅಸಲಿ ಸಮಾಚಾರ?

ಈ ಮದುವೆಗೆ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ರಾಜಕೀಯದ ದಿಗ್ಗಜರು ಬರುವ ನಿರೀಕ್ಷೆ ಇದೆ. ಇತ್ತೀಚೆಗೆ, ತಮಿಳು ನಾಡು ಸಿಎಂ ಎಂಕೆ ಸ್ಟಾಲಿನ್​ಗೆ ದಂಪತಿ ಆಮಂತ್ರಣ ನೀಡಿದೆ. ಹೀಗಾಗಿ, ಈ ಜೋಡಿಗೆ ಅವರು ಶುಭಾಶಯ ತಿಳಿಸಲು ಮದುವೆಗೆ ಆಗಮಿಸಲಿದ್ದಾರೆ. ಸೆಲೆಬ್ರಿಟಿಗಳಾದ ಕಮಲ್ ಹಾಸನ್, ರಜನಿಕಾಂತ್, ಸಮಂತಾ ಮೊದಲಾದವರು ಹಾಜರಿ ಹಾಕುವ ನಿರೀಕ್ಷೆ ಇದೆ.

ಸ್ಟಾರ್ ನಟರ ಮದುವೆ ಎಂದರೆ ಅದನ್ನು ನೋಡೋಕೆ ಫ್ಯಾನ್ಸ್ ಕಾದು ಕೂತಿರುತ್ತಾರೆ. ನೆಟ್​ಫ್ಲಿಕ್ಸ್ ಇದರ ಲಾಭವನ್ನು ಪಡೆಯಲು ಮುಂದಾಗಿದೆ ಎಂದು ವರದಿ ಆಗಿದೆ. ಮದುವೆಯ ವಿಡಿಯೋವನ್ನು ನೆಟ್​ಫ್ಲಿಕ್ಸ್ ಪ್ರಸಾರ ಮಾಡಲಿದೆ. ಮದುವೆ ಹೇಗೆ ಮೂಡಿಬರಬೇಕು ಎಂಬುದನ್ನು ನಿರ್ದೇಶಕ ಗೌತಮ್​ ಮೆನನ್​ ಹೊತ್ತುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದೆ. ಈ ಮದುವೆಯ ಸಂಭ್ರಮವನ್ನು ಪ್ರಸಾರ ಮಾಡುವ ಹಕ್ಕನ್ನು ಅಮೇಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ ಎನ್ನಲಾಗಿತ್ತು. ದೊಡ್ಡ ಮೊತ್ತಕ್ಕೆ ಈ ಹಕ್ಕು ಮಾರಾಟ ಆಗಿದೆ ಎಂದು ವರದಿ ಆಗಿತ್ತು. ಆದರೆ, 7 ತಿಂಗಳು ಕಳೆದರೂ ಆ ರೀತಿ ಯಾವುದೇ ಅಪ್​ಡೇಟ್​ ಇಲ್ಲ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.