ನಟಿ ಸಮಂತಾ (Samantha) ಅವರು Myositis ಹೆಸರಿನ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಮಂತಾ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಈ ಸಮಸ್ಯೆ ಎದುರಾದರೆ ಸ್ನಾಯುಗಳಲ್ಲಿ ಸೆಳೆತ ಶುರುವಾಗುತ್ತದೆ. ಪರಿಸ್ಥಿತಿ ಕೈಮೀರಿದರೆ ನಡೆಯಲೂ ಸಾಧ್ಯವಾಗುವುದಿಲ್ಲ. ಸಮಂತಾ ಅವರು ತಿಂಗಳಾನುಗಟ್ಟಲೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ‘ಶಾಕುಂತಲಂ’ ಸಿನಿಮಾದ ಟ್ರೇಲರ್ ಲಾಂಚ್ ವೇಳೆ ಸಮಂತಾ ಪೋಸ್ ನೀಡಿದ್ದಾರೆ. ಅವರಲ್ಲಿ ಮೊದಲಿನ ಚಾರ್ಮ್ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಮಂತಾ ತಿರುಗೇಟು ನೀಡಿದ್ದಾರೆ.
Myositis ಕಾಯಿಲೆ ಬಂದ ವಿಚಾರವನ್ನು ಸಮಂತಾ ಕಳೆದವರ್ಷ ಅಧಿಕೃತ ಮಾಡಿದರು. ಆ ಬಳಿಕ ಅವರು ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಸಮಂತಾ ಅವರು ‘ಶಾಕುಂತಲಂ’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಠಿಯ ಫೋಟೋಗಳನ್ನು ಕೆಲ ಪೇಜ್ಗಳು ಶೇರ್ ಮಾಡಿಕೊಂಡಿವೆ. ‘ಸಮಂತಾ ಮೊದಲಿನ ಚಾರ್ಮ್ ಉಳಿಸಿಕೊಂಡಿಲ್ಲ’ ಎಂದು ಬರೆಯಲಾಗಿತ್ತು. ಈ ಟ್ವೀಟ್ನ ರೀಟ್ವೀಟ್ ಮಾಡಿರುವ ಸಮಂತಾ, ‘ನಾನು ಚಿಕಿತ್ಸೆ ಪಡೆದುಕೊಂಡಷ್ಟು ಮತ್ತು ಔಷಧಗಳನ್ನು ತೆಗೆದುಕೊಂಡಷ್ಟು ನೀವು ತೆಗೆದುಕೊಳ್ಳದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ಮತ್ತಷ್ಟು ಚಾರ್ಮ್ ಪಡೆಯಲು ನನ್ನ ಕಡೆಯಿಂದ ಒಂದಷ್ಟು ಪ್ರೀತಿ’ ಎಂದು ಸಮಂತಾ ಬರೆದುಕೊಂಡಿದ್ದಾರೆ.
I pray you never have to go through months of treatment and medication like I did ..
And here’s some love from me to add to your glow ? https://t.co/DmKpRSUc1a— Samantha (@Samanthaprabhu2) January 9, 2023
ಸಮಂತಾ ಮಾಡಿರುವ ಟ್ವೀಟ್ ಸಖತ್ ವೈರಲ್ ಆಗಿದೆ. ಅನಾರೋಗ್ಯಕ್ಕೆ ತುತ್ತಾದ ನಂತರ ಸಮಂತಾ ಬಗ್ಗೆ ಅನೇಕರು ಈ ರೀತಿ ಹೇಳಿದರೂ ಅವರು ಇಷ್ಟು ಕೂಲ್ ಆಗಿ ಒಳ್ಳೆಯ ಮನಸ್ಸಿನಿಂದ ಟ್ವೀಟ್ ಮಾಡುತ್ತಿದ್ದಾರೆ ಅನ್ನೋದು ಖುಷಿಯ ವಿಚಾರ ಎಂದು ಅನೇಕರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Samantha: ವೇದಿಕೆ ಮೇಲೆ ಎಲ್ಲರ ಎದುರು ಕಣ್ಣೀರು ಹಾಕಿದ ಸಮಂತಾ ರುತ್ ಪ್ರಭು; ವಿಡಿಯೋ ವೈರಲ್
‘ಶಾಕುಂತಲಂ’ ಸಿನಿಮಾದ ಟ್ರೇಲರ್ ಜನವರಿ 9ರಂದು ರಿಲೀಸ್ ಆಗಿದೆ. ಪೌರಾಣಿಕ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಈ ಸಿನಿಮಾ ಫೆಬ್ರವರಿ 17ರಂದು ತೆರೆಗೆ ಬರುತ್ತಿದೆ. ತೆಲುಗು ಮಾತ್ರವಲ್ಲದೆ, ಕನ್ನಡ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ