AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Allu Arha: ಸಿಂಹ ಏರಿ ಬಂದ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ; ಫ್ಯಾನ್ಸ್ ಫುಲ್ ಖುಷ್

ಜನವರಿ 9ರಂದು ‘ಶಾಕುಂತಲಂ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಹೈದರಾಬಾದ್​ನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಕೊನೆಯಲ್ಲಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾಳೆ.

Allu Arha: ಸಿಂಹ ಏರಿ ಬಂದ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ; ಫ್ಯಾನ್ಸ್ ಫುಲ್ ಖುಷ್
ಶಾಕುಂತಲಂ ಸಿನಿಮಾದಲ್ಲಿ ಅಲ್ಲು ಅರ್ಹಾ
TV9 Web
| Edited By: |

Updated on: Jan 10, 2023 | 7:59 AM

Share

ಸ್ಟಾರ್ ನಟರ ಮಕ್ಕಳು ಸಣ್ಣ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಅವಕಾಶ ಪಡೆದುಕೊಳ್ಳುತ್ತಾರೆ. ಬಾಲ ಕಲಾವಿದರಾಗಿ ಗಮನ ಸೆಳೆದ ನಂತರ ಹೀರೋ/ಹೀರೋಯಿನ್​ ಆಗಿ ಮಿಂಚುತ್ತಾರೆ. ಟಾಲಿವುಡ್​ನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಮಗಳು ಅಲ್ಲು ಅರ್ಹಾ ಕೂಡ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾಳೆ. ಫೆಬ್ರವರಿ 17ರಂದು ರಿಲೀಸ್ ಆಗುತ್ತಿರುವ ಸಮಂತಾ ನಟನೆಯ ‘ಶಾಕುಂತಲಂ’ ಚಿತ್ರದ ಮೂಲಕ ಅಲ್ಲು ಅರ್ಹಾ (Allu Arha) ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾಳೆ.

ಜನವರಿ 9ರಂದು ‘ಶಾಕುಂತಲಂ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಹೈದರಾಬಾದ್​ನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಕೊನೆಯಲ್ಲಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾಳೆ. ಆಕೆ ಸಿಂಹ ಏರಿ ಬಂದಿದ್ದಾಳೆ.

ಇದನ್ನೂ ಓದಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

‘ಶಾಕುಂತಲಂ’ ಸಿನಿಮಾದಲ್ಲಿ ಶಾಕುಂತಲೆ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಶಾಕುಂತಲೆ ಮಗಳ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿದ್ದಾಳೆ ಎನ್ನಲಾಗಿದೆ. ಅಲ್ಲು ಅರ್ಹಾ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಟ್ರೇಲರ್ ನೋಡಿದ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಅಲ್ಲು ಅರ್ಹಾ ಎಂಟ್ರಿ ಬಗ್ಗೆ ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ಆಹಾ, ರಾಜಕುಮಾರಿ ಅರ್ಹಾ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಕೊನೆಯಲ್ಲಿ ಕಾಣಿಸಿಕೊಂಡರೂ ಇಡೀ ಟ್ರೇಲರ್​ನ ಹೈಲೈಟ್ ಅಲ್ಲು ಅರ್ಹಾ’ ಎಂದು ಕೆಲ ಮಂದಿ ಕಮೆಂಟ್ ಮಾಡಿದ್ದಾರೆ. ‘ರುದ್ರಮದೇವಿ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಕುದುರೆ ಏರಿ ಬರುತ್ತಾರೆ. ಈ ದೃಶ್ಯಕ್ಕೆ ಅಲ್ಲು ಅರ್ಹಾಳನ್ನು ಅನೇಕರು ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಹಾ ಎಷ್ಟೊಂದು ಕ್ಯೂಟ್; ವೈರಲ್ ಆದ ವಿಡಿಯೋ ನೋಡಿ ಮನಸೋತ ಫ್ಯಾನ್ಸ್​

ಜುಲೈ 2021ರಲ್ಲಿ ಅಲ್ಲು ಅರ್ಹಾ ಸಿನಿಮಾದಲ್ಲಿ ನಟಿಸುವ ಬಗ್ಗೆ ಅಲ್ಲು ಅರ್ಜುನ್ ಘೋಷಣೆ ಮಾಡಿದರು. ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಕಲಾವಿದೆಯಾಗಿ ಅರ್ಹಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಎಂದು ಅಲ್ಲು ಅರ್ಜುನ್ ಹೆಮ್ಮೆ ವ್ಯಕ್ತಪಡಿಸಿದ್ದರು.  ‘ಶಾಕುಂತಲಂ’ ಸಿನಿಮಾಗೆ ಗುಣಶೇಖರ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ