AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್ 2’ನಲ್ಲಿ ಶಿವಣ್ಣ, ಈ ಬಾರಿ ಕೇವಲ ಅತಿಥಿ ಪಾತ್ರವಲ್ಲ

Shiva Rajkumar-Rajinikanth: 2023ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಅವರಷ್ಟೆ ನಟ ಶಿವಣ್ಣ ಸಹ ಗಮನ ಸೆಳೆದರು. ಯಾವ ಮಟ್ಟಿಗೆಂದರೆ ತಮಿಳುನಾಡಿನಲ್ಲಿ ‘ಜೈಲರ್’ ಸಿನಿಮಾ ಬಳಿಕ ಶಿವಣ್ಣನಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿಯಾಯ್ತು. ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣ ಆಗುತ್ತಿದ್ದು, ಈ ಸಿನಿಮಾನಲ್ಲಿಯೂ ತಾವು ನಟಿಸುತ್ತಿರುವುದಾಗಿ ಸ್ವತಃ ಶಿವಣ್ಣ ಖಾತ್ರಿ ಪಡಿಸಿದ್ದಾರೆ.

‘ಜೈಲರ್ 2’ನಲ್ಲಿ ಶಿವಣ್ಣ, ಈ ಬಾರಿ ಕೇವಲ ಅತಿಥಿ ಪಾತ್ರವಲ್ಲ
Jailer 2
ಮಂಜುನಾಥ ಸಿ.
|

Updated on: Dec 23, 2025 | 11:26 AM

Share

ರಜನೀಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾ 2023ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಪ್ಯಾನ್ ಇಂಡಿಯಾ ಕಮರ್ಶಿಯಲ್ ಸಿನಿಮಾಕ್ಕೆ ಒಳ್ಳೆಯ ಉದಾಹರಣೆಯಂತಿತ್ತು ಈ ಸಿನಿಮಾ. ರಜನೀಕಾಂತ್ ಅಂಥಹಾ ಸೂಪರ್ ಸ್ಟಾರ್ ಜೊತೆಗೆ ಹಲವು ಭಾಷೆಗಳ ಸ್ಟಾರ್ ನಟರುಗಳು ಸಿನಿಮಾನಲ್ಲಿದ್ದರು. ಹೆಸರಿಗಷ್ಟೆ ಅತಿಥಿ ಪಾತ್ರ ನೀಡದೆ, ಅತಿಥಿ ಪಾತ್ರಕ್ಕೂ ಪ್ರಾಧಾನ್ಯತೆ ನೀಡಲಾಗಿತ್ತು. ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಅವರಷ್ಟೆ ನಟ ಶಿವಣ್ಣ ಸಹ ಗಮನ ಸೆಳೆದರು. ಯಾವ ಮಟ್ಟಿಗೆಂದರೆ ತಮಿಳುನಾಡಿನಲ್ಲಿ ‘ಜೈಲರ್’ ಸಿನಿಮಾ ಬಳಿಕ ಶಿವಣ್ಣನಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿಯಾಯ್ತು. ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣ ಆಗುತ್ತಿದ್ದು, ಈ ಸಿನಿಮಾನಲ್ಲಿಯೂ ತಾವು ನಟಿಸುತ್ತಿರುವುದಾಗಿ ಸ್ವತಃ ಶಿವಣ್ಣ ಖಾತ್ರಿ ಪಡಿಸಿದ್ದಾರೆ.

ಶಿವಣ್ಣ ನಟನೆಯ ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು, ‘45’ ಸಿನಿಮಾಕ್ಕಾಗಿ ನೀಡಿದ ಸಂದರ್ಶನವೊಂದರಲ್ಲಿ ‘ಜೈಲರ್ 2’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ಜೈಲರ್’ ಎಲ್ಲಿಗೆ ನಿಂತಿತ್ತೊ, ಅಲ್ಲಿಂದಲೇ ಶುರುವಾಗುತ್ತಿದೆ. ನನ್ನ ಪಾತ್ರವೂ ಸಹ. ಇದು ನನ್ನ ಪಾಲಿಗೆ ಮತ್ತೊಂದು ಅತಿಥಿ ಪಾತ್ರ ಆಗಿಲ್ಲ. ಇದು ಅತಿಥಿ ಪಾತ್ರಕ್ಕಿಂತಲೂ ಮಿಗಿಲಾದದ್ದಾಗಿದೆ. ಅಲ್ಲದೆ, ಈ ಬಾರಿ ‘ಜೈಲರ್ 2’ನಲ್ಲಿಯೂ ಸಹ ನನ್ನದು ಕೇವಲ ಅತಿಥಿ ಪಾತ್ರ ಮಾತ್ರವೇ ಆಗಿರುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?

‘ಸಿನಿಮಾಕ್ಕಾಗಿ ಒಂದು ದಿನ ಈಗಾಗಲೇ ಚಿತ್ರೀಕರಣ ಮಾಡಿದ್ದೀನಿ, ಜನವರಿ ತಿಂಗಳಲ್ಲಿ ಸುಮಾರು ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದೀನಿ. ‘ಜೈಲರ್’ ಸಿನಿಮಾದ್ದು ಒಂದು ರೀತಿ ಯೂನಿವರ್ಸಲ್ ಕಂಟೆಂಟ್, ನಿರ್ದೇಶಕ ನೆಲ್ಸನ್ ರಜನೀಕಾಂತ್ ಅವರನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ರಜನೀಕಾಂತ್ ಅವರ ವಯಸ್ಸನ್ನು ಸಹ ಜಾಣತನದಿಂದ ಉಪಯೋಗಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಆ ಸಿನಿಮಾ ಎಲ್ಲ ರಾಜ್ಯಗಳಲ್ಲಿಯೂ ಮೆಗಾ ಹಿಟ್ ಆಗಿದೆ. ನಾನು ಆ ಸಿನಿಮಾದ ಭಾಗ ಆಗಿರುವುದಕ್ಕೆ ಖುಷಿ ಆಗಿದೆ’ ಎಂದಿದ್ದಾರೆ.

2023 ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾನಲ್ಲಿ ರಜನೀಕಾಂತ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ಅವರ ಗೆಳೆಯ ನರಸಿಂಹ ಪಾತ್ರದಲ್ಲಿ ಶಿವರಾಜ್ ಕುಮಾರ್, ಮೋಹನ್​​ಲಾಲ್, ಜಾಕಿ ಶ್ರಾಫ್ ಅವರುಗಳು ನಟಿಸಿದ್ದರು. ಸಿನಿಮಾನಲ್ಲಿ ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ, ಸುನಿಲ್ ಅವರುಗಳು ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾದ ವಿಲನ್ ಆಗಿ ನಟಿಸಿದ್ದ ವಿನಾಯಗನ್ ನಟನೆಯೂ ಸಖತ್ ಹಿಟ್ ಆಗಿತ್ತು. ಇದೀಗ ಸಿನಿಮಾದ ಎರಡನೇ ಭಾಗ ನಿರ್ಮಾಣ ಆಗುತ್ತಿದ್ದು, ಇದರಲ್ಲಿ ನಂದಮೂರಿ ಬಾಲಕೃಷ್ಣ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ