
ಟಾಲಿವುಡ್ನ ತಾರಾ ಜೋಡಿ ಸಮಂತಾ- ನಾಗಚೈತನ್ಯ ತಮ್ಮ 4 ವರ್ಷದ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಪ್ರೇಮಿಗಳಾಗಿದ್ದ ಇವರಿಬ್ಬರು 2017ರಲ್ಲಿ ಮದುವೆಯಾಗಿದ್ದರು. ಆದರೆ, 2 ದಿನಗಳ ಹಿಂದೆ ಪರಸ್ಪರ ಒಪ್ಪಿಗೆ ಮೇರೆ ಡೈವೋರ್ಸ್ ಪಡೆಯುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದರು. ಸಮಂತಾ- ನಾಗಚೈತನ್ಯ ವಿಚ್ಛೇದನ ಪಡೆಯುತ್ತಿರುವ ವಿಷಯ ಕೇಳಿ ಅವರ ಅಭಿಮಾನಿಗಳಿಗೆ ಬಹಳ ಶಾಕ್ ಆಗಿದೆ. ಈ ನಿರ್ಧಾರದಿಂದ ತಮಗೂ ಬೇಸರವಾಗಿರುವುದಾಗಿ ನಾಗಚೈತನ್ಯನ ತಂದೆ ಅಕ್ಕಿನೇನಿ ನಾಗಾರ್ಜುನ ಹೇಳಿಕೊಂಡಿದ್ದರು. ಆದರೆ, ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ, ‘ಮದುವೆಗಿಂತಲೂ ವಿಚ್ಛೇದನ ಪಡೆಯುವಾಗ ಹೆಚ್ಚು ಸಂಭ್ರಮಿಸಬೇಕು. ವಿಚ್ಛೇದನ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ’ ಎಂದಿದ್ದಾರೆ.
ಸಮಂತಾ- ನಾಗಚೈತನ್ಯ ದಂಪತಿಯ ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮ್ ಗೋಪಾಲ್ ವರ್ಮ, ‘ಮದುವೆಗಿಂತಲೂ ವಿಚ್ಛೇದನದ ಬಗ್ಗೆ ನಮಗೆ ಹೆಚ್ಚು ಖುಷಿ ಇರಬೇಕು. ಏಕೆಂದರೆ, ಮದುವೆಯಲ್ಲಿ ಮುಂದಿನ ಜೀವನ ಹೇಗಿರುತ್ತದೆ ಎಂಬ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಆದರೆ, ಡೈವೋರ್ಸ್ ಪಡೆದ ಮೇಲೆ ನೀವು ಸಂಪೂರ್ಣವಾಗಿ ಸ್ವತಂತ್ರರಾಗುತ್ತೀರಿ, ಮದುವೆಯಾದಾಗ ನೀವೇನು ಅನುಭವಿಸಿರುತ್ತೀರೋ ಅದರಿಂದ ಹೊರಬರುತ್ತೀರಿ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದೆಲ್ಲ ಸುಳ್ಳು. ಮದುವೆ ನರಕದಲ್ಲಿ ನಿಶ್ಚಯವಾಗಿರುತ್ತದೆ, ವಿಚ್ಛೇದನ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಮದುವೆಯೆಂಬ ರೋಗಕ್ಕೆ ವಿಚ್ಛೇದನವೇ ಔಷಧಿ’ ಎಂದು ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.
DIVORCE should be more celebrated than MARRIAGE because in marriage , u don’t know what u are getting into, whereas in divorce u are getting out of what u have gotten into? https://t.co/87HKdcAQ6L via @YouTube
— Ram Gopal Varma (@RGVzoomin) October 2, 2021
‘ಎಷ್ಟೋ ಮದುವೆಗಳು ಆ ಮದುವೆಗಾಗಿ ಅವರು ನಡೆಸಿದ ತಯಾರಿ, ಮಾಡುವ ಸಾಂಪ್ರದಾಯಿಕ ಕಾರ್ಯಕ್ರಮಗಳಷ್ಟು ದಿನವೂ ಉಳಿಯುವುದಿಲ್ಲ. ನಾಲ್ಕೈದು ದಿನ ಸಂಭ್ರಮದಿಂದ ಏನೇನೋ ಶಾಸ್ತ್ರಗಳನ್ನು ಇಟ್ಟುಕೊಂಡು ಮದುವೆಯಾಗುವ ನಾವು ಡೈವೋರ್ಸ್ ಪಡೆಯುವಾಗ ಕೂಡ ಸಂಗೀತ್ ಕಾರ್ಯಕ್ರಮ ಇಡಬೇಕು. ಮದುವೆಯೆಂಬ ಬಂಧನದಿಂದ ಮುಕ್ತರಾಗುವ ಗಂಡು- ಹೆಣ್ಣು ಡ್ಯಾನ್ಸ್ ಮಾಡಿ, ಎಂಜಾಯ್ ಮಾಡಿ ಸ್ವತಂತ್ರರಾಗಬೇಕು’ ಎಂದು ಕೂಡ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.
Most marriages don’t last more than even the no. of days they celebrate the event ,and so real Sangeeth should happen at a DIVORCE event where all divorced men and women can sing and dance
— Ram Gopal Varma (@RGVzoomin) October 2, 2021
ಅಂದಹಾಗೆ, ನಾಗಚೈತನ್ಯ ಮತ್ತು ಸಮಂತಾ ಮದುವೆಯಾದ ನಾಲ್ಕು ವರ್ಷಗಳ ನಂತರ ಡೈವೋರ್ಸ್ ಪಡೆದು ದೂರವಾಗುತ್ತಿದ್ದಾರೆ. ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಡ್ನಲ್ಲಿ ತಮ್ಮ ಹೆಸರಿನ ಮುಂದಿದ್ದ ಅಕ್ಕಿನೇನಿ ಹೆಸರನ್ನು ತೆಗೆದುಹಾಕಿದ್ದ ಸಮಂತಾ ಇದೀಗ ಅಧಿಕೃತವಾಗಿ ತಮ್ಮ ವಿಚ್ಛೇದನದ ಬಗ್ಗೆ ಘೋಷಿಸಿಕೊಂಡಿದ್ದಾರೆ.
2 ದಿನಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ತಾವು ದೂರವಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದ ಸಮಂತಾ ಹಾಗೂ ನಾಗಚೈತನ್ಯ, ನಾವಿಬ್ಬರೂ ಬಹಳ ಯೋಚನೆ ಮಾಡಿ ದೂರವಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ನಾವಿಬ್ಬರೂ ಸ್ನೇಹಿತರಾಗಿದ್ದುದು ನಮ್ಮ ಅದೃಷ್ಟ. ಆ ಸಂಬಂಧ ಮುಂದೆಯೂ ಗಟ್ಟಿಯಾಗಿ ಮುಂದುವರಿಯಲಿದೆ ಎಂದು ಭಾವಿಸುತ್ತೇವೆ. ನಮ್ಮ ಕಷ್ಟದ ಸಮಯದಲ್ಲಿ ಸಹಕಾರ ನೀಡಿದ ಮತ್ತು ನಮ್ಮ ಖಾಸಗಿತನವನ್ನು ಗೌರವಿಸಿದ ಸ್ನೇಹಿತರು, ಅಭಿಮಾನಿಗಳು, ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಬರೆದು ಇಬ್ಬರೂ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು’; ವಿಚ್ಛೇದನದ ನಂತರ ಸಮಂತಾ ಮೊದಲ ಮಾತು
Published On - 4:15 pm, Mon, 4 October 21