AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ಪರ ಕಾಲೆಳೆದುಕೊಂಡ ಸಮಂತಾ-ರಾಣಾ, ನಕ್ಕು ಸುಸ್ತಾದ ಸೆಲೆಬ್ರಿಟಿಗಳು

ಸಮಂತಾ ಹಾಗೂ ರಾಣಾ ದಗ್ಗುಬಾಟಿ ಮುಂಚೆ ಸಂಬಂಧಿಗಳಾಗಿದ್ದರು ಆದರೆ ಈಗ ಇಲ್ಲ. ಆದರೆ ಇಬ್ಬರೂ ಬಹಳ ಒಳ್ಳೆಯ ಗೆಳೆಯರು. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಸಮಂತಾ ಹಾಗೂ ರಾಣಾ ಪರಸ್ಪರ ಕಾಲೆಳೆದುಕೊಂಡು ಜನರನ್ನು ಸಖತ್ ಆಗಿ ರಂಜಿಸಿದ್ದಾರೆ.

ಪರಸ್ಪರ ಕಾಲೆಳೆದುಕೊಂಡ ಸಮಂತಾ-ರಾಣಾ, ನಕ್ಕು ಸುಸ್ತಾದ ಸೆಲೆಬ್ರಿಟಿಗಳು
ಮಂಜುನಾಥ ಸಿ.
|

Updated on: Nov 07, 2024 | 10:41 AM

Share

ಸಮಂತಾ ಹಾಗೂ ರಾಣಾ ದಗ್ಗುಬಾಟಿ ಬಹಳ ಒಳ್ಳೆಯ ಗೆಳೆಯರು. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿಲ್ಲವಾದರೂ ಬಹಳ ವರ್ಷಗಳಿಂದಲೂ ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ಅಂದಹಾಗೆ ರಾಣಾ ದಗ್ಗುಬಾಟಿ, ಸಮಂತಾ ಸಂಬಂಧಿಗಳೂ ಆಗಿದ್ದರು, ಆದರೆ ಈಗ ಅಲ್ಲ. ಕೆಲ ದಿನಗಳ ಹಿಂದೆ ಐಫಾ ಅವಾರ್ಡ್ಸ್​ನಲ್ಲಿ ಸಮಂತಾಗೆ ಪ್ರಶಸ್ತಿ ಬಂತು, ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದು ರಾಣಾ ದಗ್ಗುಬಾಟಿ ಮತ್ತು ಹೊಸ ಹೀರೋ ತೇಜ್ ಸಜ್ಜಾ. ಈ ವೇಳೆ ಸಮಂತಾ ಹಾಗೂ ರಾಣಾ ನಡುವೆ ನಡೆದ ಸಂಭಾಷಣೆ ಸಖತ್ ಫನ್ನಿಯಾಗಿತ್ತು. ಅದರ ವಿಡಿಯೋ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

ಪ್ರಶಸ್ತಿ ಸ್ವೀಕರಿಸಿದ ಸಮಂತಾ, ಗಂಭೀರವಾದ, ಸ್ಪೂರ್ತಿದಾಯಕ ಭಾಷಣವನ್ನು ಮಾಡಿದರು. ಅದಾದ ಬಳಿಕ ಸಮಂತಾ ಇನ್ನೇನು ವೇದಿಕೆ ಇಳಿದು ಹೊರಡುವ ಸಮಯದಲ್ಲಿ ತಡೆದ ರಾಣಾ, ‘ಅಷ್ಟು ಬೇಗ ಹೊರಡಲು ಬಿಡುವುದಿಲ್ಲ’ ಎಂದರು, ಅದಕ್ಕೆ ಸಮಂತಾ, ‘ಈಗಷ್ಟೆ ಎಮೋಷನಲ್ ಸ್ಪೀಚ್ ಕೊಟ್ಟಿದ್ದೀನಿ, ಈಗ ಕಾಮಿಡಿ ಬೇಡ’ ಎಂದರೂ ಸಹ ಬಿಡದ ರಾಣಾ, ಕೆಲವು ತರ್ಲೆ ಪ್ರಶ್ನೆಗಳನ್ನು ಕೇಳಿ ಸಮಂತಾರ ಕಾಲೆಳೆದರು. ಅದಕ್ಕೆ ಸಮಂತಾ ಸಹ ಸಖತ್ ಪ್ರತ್ಯುತ್ತರ ನೀಡಿದರು.

ಸಮಂತಾರನ್ನು ಮಾತನಾಡಿಸಿದ ರಾಣಾ, ‘ಮೊದಲು ಸಿಸ್ಟರ್ ಇನ್ ಲಾ ಆಗಿದ್ದೆ ಈಗ ಸಿಸ್ಟರ್ ಆಗಿಬಿಟ್ಟಿದ್ದೀಯ’ ಎಂದರು. ನಾಗ ಚೈತನ್ಯ ಜೊತೆ ಸಮಂತಾ ವಿಚ್ಛೇದನದ ಬಗ್ಗೆ ರಾಣಾ ಸಮಂತಾ ಕಾಲೆಳೆದರು, ಅದಕ್ಕೆ ಬೇಸರ ಮಾಡಿಕೊಳ್ಳದ ಸಮಂತಾ, ಜೋರಾಗಿ ನಕ್ಕರು. ಅದಾದ ಬಳಿಕ ರಾಣಾ, ನೀವೇಕೆ ಇತ್ತೀಚೆಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದರು. ಅದಕ್ಕೆ ರಾಣಾ ಯಾಕೋ ಇತ್ತೀಚೆಗೆ ಯಾರೂ ನನ್ನನ್ನು ಹಾಕಿಕೊಳ್ಳುತ್ತಿಲ್ಲ ಎಂದರು. ಅದಕ್ಕೆ ಸಮಂತಾ, ‘ನಂದೂ ಅದೇ ಕತೆ. ಅಲ್ಲದೆ, ನಾನು ಮಾಡಿದರೆ ನರಸಿಂಹ ನಾಯ್ಡು ರೀತಿಯ ಸಿನಿಮಾ ಮಾಡುವೆ, ರಾಣಾ ನಾಯ್ಡು ರೀತಿಯ ಥರಹದ್ದು ಮಾಡುವುದಿಲ್ಲ’ ಎಂದರು. ರಾಣಾ ದಗ್ಗುಬಾಟಿ, ‘ರಾಣಾ ನಾಯ್ಡು’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದರು. ಆ ವೆಬ್ ಸರಣಿ ತುಸು ‘ಡರ್ಟಿ’ಯಾಗಿತ್ತು.

ಇದನ್ನೂ ಓದಿ:ವರುಣ್ ಧವನ್-ಸಮಂತಾ ಸೆಕ್ಸಿ ಫೋಟೊಶೂಟ್, ಇಲ್ಲಿವೆ ಚಿತ್ರಗಳು

ನಂತರ ತೇಜ್ ಸಜ್ಜಾ, ಸಮಂತಾ ಋತ್ ಪ್ರಭು ಎಂಬುದು ನಿಮ್ಮ ಹೆಸರು, ಆದರೆ ಬಾಲಿವುಡ್​ನಲ್ಲಿ ನಿಮ್ಮನ್ನು ಸಮಂತಾ ರೂಡ್ ಪ್ರಭು ಎನ್ನುತ್ತಿದ್ದಾರಂತಲ್ಲಾ? ಎಂದು ಕೇಳಿದರು. ಅದಕ್ಕೆ ಸಮಂತಾ, ಹೌದಾ ಎಂದು ಆಶ್ಚರ್ಯಪಟ್ಟರು, ಅಷ್ಟರಲ್ಲಿ ರಾಣಾ, ‘ಇಲ್ಲಿಯೂ ಸಹ ಸಮಂತಾ ರನ್ನು ಸಮಂತಾ ರೂತ್​ಲೆಸ್ ಪ್ರಭು’ ಎಂದೇ ಕರೆಯುತ್ತಾರೆ ಎಂದು ಚಟಾಕಿ ಹಾರಿಸಿದರು. ಬಳಿಕ, ಈಗೆಲ್ಲ ಆಂಗ್ರಿ ಸಮಂತಾ ಹೆಚ್ಚು ಕಾಣಿಸುತ್ತಾರೆ, ಕಾಮಿಡಿ ಸಮಂತಾ ಏನಾದರು ಎಂದು ಕೇಳಿದರು. ಅದಕ್ಕೆ ಸಮಂತಾ, ‘ಕಾಮಿಡಿ ಸಮಂತಾ’ ಹೋಗಿ ಆಯ್ತು ಇನ್ನೇನಿದ್ದರು ನಾನು ಮಾತ್ರ ಎಂದು ಹೇಳಿ, ಇಬ್ಬರಿಗೂ ಬೈ ಹೇಳಿ ವೇದಿಕೆ ಇಳಿದು ತೆರಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ