Samantha: ಸಮಂತಾ ಮುಖದಲ್ಲಿ ಮತ್ತೆ ಅರಳಿತು ನಗು; 4 ವಿಶೇಷ ಕಾರಣಕ್ಕೆ ಸಂಭ್ರಮಿಸಿದ ‘ಖುಷಿ’ ಚಿತ್ರತಂಡ

|

Updated on: Mar 09, 2023 | 2:59 PM

Samantha Ruth Prabhu | Vijay Deverakonda: ಸಮಂತಾ ಅವರ ಅನಾರೋಗ್ಯದಿಂದ ಶೂಟಿಂಗ್​ ನಿಂತಿದ್ದಕ್ಕಾಗಿ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಆಗಿತ್ತು. ಈಗ ಸಮಂತಾ ಮರಳಿ ಬಂದಿರುವುದರಿಂದ ಮತ್ತೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ.

Samantha: ಸಮಂತಾ ಮುಖದಲ್ಲಿ ಮತ್ತೆ ಅರಳಿತು ನಗು; 4 ವಿಶೇಷ ಕಾರಣಕ್ಕೆ ಸಂಭ್ರಮಿಸಿದ ‘ಖುಷಿ’ ಚಿತ್ರತಂಡ
‘ಖುಷಿ’ ಚಿತ್ರತಂಡದ ಜೊತೆ ಸಮಂತಾ
Follow us on

ಜನಪ್ರಿಯ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರ ಜೀವನದಲ್ಲಿ ಹೊಸ ಬೆಳಕು ಮೂಡುತ್ತಿದೆ. Myositis ಕಾಯಿಲೆಯಿಂದ ಬಳಲುತ್ತಿದ್ದ ಅವರು ಈಗ ಚೇತರಿಸಿಕೊಂಡಿದ್ದಾರೆ. ಮೊದಲಿನಂತೆ ಸ್ಟ್ರಾಂಗ್​ ಆಗಿ ಸಿನಿಮಾದ ಕೆಲಸಗಳಿಗೆ ಮರಳಿದ್ದಾರೆ. ಚಿಕಿತ್ಸೆ ಮತ್ತು ವಿಶ್ರಾಂತಿ ಸಲುವಾಗಿ ಬ್ರೇಕ್​ ತೆಗೆದುಕೊಂಡಿದ್ದ ಅವರು ಈಗ ‘ಖುಷಿ’ ಚಿತ್ರದ (Kushi Movie) ಶೂಟಿಂಗ್​ಗೆ ಮರಳಿದ್ದಾರೆ. ಅವರು ಸೆಟ್​ಗೆ ಕಾಲಿಡುತ್ತಿದ್ದಂತೆಯೇ ಇಡೀ ಸಿನಿಮಾ ತಂಡದವರು ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ. ಸಮಂತಾ (Samantha) ಅವರು ಶೂಟಿಂಗ್​ಗೆ ಮರಳಿರುವುದು ಮಾತ್ರವೇ ಈ ಖುಷಿಗೆ ಕಾರಣವಲ್ಲ. ಇನ್ನೂ ಮೂರು ಸ್ಪೆಷಲ್​ ಕಾರಣಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಸಮಂತಾ ಅವರು ‘ಸಿಟಾಡೆಲ್​’ ವೆಬ್​ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅದರ ಶೂಟಿಂಗ್ ಭರದಿಂದ ಸಾಗುತ್ತಿದೆ.​ ಅನಾರೋಗ್ಯದ ಸಮಸ್ಯೆ ಏನೇ ಇದ್ದರೂ ಕೂಡ ಸಾಕಷ್ಟು ಕಷ್ಟಪಟ್ಟು ಅವರು ಮೊದಲ ಶೆಡ್ಯೂಲ್​ ಶೂಟಿಂಗ್​ ಮುಗಿಸಿದ್ದಾರೆ. ಸಮಂತಾ ಅಭಿಮಾನಿಗಳ ಖುಷಿಗೆ ಇದು ಸಹ ಒಂದು ಕಾರಣ. ಇನ್ನು, ಸಮಂತಾ ಅವರು ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ​ದ್ದಾರೆ. ಆ ಕಾರಣದಿಂದಲೂ ‘ಖುಷಿ’ ತಂಡದವರು ಕೇಕ್​ ಕಟ್​ ಮಾಡಿದ್ದಾರೆ. ‘ಮಹಿಳಾ ದಿನಾಚರಣೆ’ ಸಂದರ್ಭದಲ್ಲೇ ಅವರು ‘ಖುಷಿ’ ಸಿನಿಮಾದ ಶೂಟಿಂಗ್​ಗೆ ಬಂದಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಚಿತ್ರತಂಡದವರು ಸಮಂತಾ ಜೊತೆ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಇದನ್ನೂ ಓದಿ: Samantha: ನಾಗ ಚೈತನ್ಯಗೆ ಮತ್ತೆ ಕಾಡಿತು ಮಾಜಿ ಪತ್ನಿ ಸಮಂತಾ ನೆನಪು; ಹಳೇ ಫೋಟೋ ಹಂಚಿಕೊಂಡ ನಟ

ಸಮಂತಾ ರುತ್​ ಪ್ರಭು ಅವರು ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾರೆ. ‘ಪುಷ್ಪ’ ಸಿನಿಮಾದ ‘ಹೂ ಅಂತಿಯಾ ಮಾವ..’ ಹಾಡಿನಲ್ಲಿ ಡ್ಯಾನ್ಸ್​ ಮಾಡಿದ್ದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ‘ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ನಟಿಸಿದ ಬಳಿಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್​ ಹೆಚ್ಚಾಗಿತ್ತು. ಆದರೆ ಅದೇ ಸಮಯಕ್ಕೆ ಅವರಿಗೆ Myositis ಕಾಯಿಲೆ ಬಂದಿದ್ದರಿಂದ ಹೊಸ ಅವಕಾಶಗಳನ್ನು ಒಪ್ಪಿಕೊಳ್ಳುವುದು ಕಷ್ಟ ಆಯಿತು. ಈಗಾಗಲೇ ಒಪ್ಪಿಕೊಂಡಿದ್ದ ಪ್ರಾಜೆಕ್ಟ್​ಗಳನ್ನು ಮುಗಿಸುದು ಕೂಡ ಕಷ್ಟವಾಯಿತು. ಹಾಗಾಗಿ ಅವರು ‘ಖುಷಿ’ ಚಿತ್ರದ ಶೂಟಿಂಗ್​ಗೆ ಬ್ರೇಕ್​ ನೀಡಬೇಕಾಯಿತು.

‘ಖುಷಿ’ ಸಿನಿಮಾಗೆ ವಿಜಯ್​ ದೇವರಕೊಂಡ ಹೀರೋ. ಸಮಂತಾ ಅವರ ಡೇಟ್ಸ್​ ಇಲ್ಲದ ಕಾರಣ ವಿಜಯ್​ ಕೂಡ ಶೂಟಿಂಗ್​ ಮಾಡದೇ ಸುಮ್ಮನೆ ಕೂರುವುದು ಅನಿವಾರ್ಯ ಆಯಿತು. ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಬಂಡವಾಳ ಹೂಡುತ್ತಿದೆ. ಶೂಟಿಂಗ್​ ನಿಂತಿದ್ದರಿಂದ ಸಾಕಷ್ಟು ನಷ್ಟ ಕೂಡ ಆಗಿದೆ. ಆದರೆ ಈಗ ಸಮಂತಾ ಅವರು ಮರಳಿ ಬಂದಿರುವುದರಿಂದ ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಚಿತ್ರತಂಡ ಶ್ರಮಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:59 pm, Thu, 9 March 23