ಪ್ರೆಗ್ನೆಂಟ್ ಆಗಿರುವುದು ನಿಜ; ಎಲ್ಲರ ಎದುರು ಗುಡ್ ನ್ಯೂಸ್ ನೀಡಿದ ಸಮಂತಾ

ಸದ್ಯಕ್ಕೆ ಸಿನಿಮಾಗಳಿಂದ ಬ್ರೇಕ್ ಪಡೆಯಲಿರುವ ನಟಿ ಸಮಂತಾ ರುತ್ ಪ್ರಭು ಅವರು ಮಗುವಿನ ಜನನದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುವುದಾಗಿ ಹೇಳಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾದ ಸಕ್ಸಸ್ ಮೀಟ್​ನಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ.

ಪ್ರೆಗ್ನೆಂಟ್ ಆಗಿರುವುದು ನಿಜ; ಎಲ್ಲರ ಎದುರು ಗುಡ್ ನ್ಯೂಸ್ ನೀಡಿದ ಸಮಂತಾ
Samantha Ruth Prabhu

Updated on: Jun 24, 2026 | 10:03 PM

ಮುಖ್ಯಾಂಶಗಳು

  • ತಾವು ಗರ್ಭಿಣಿ ಆಗಿರುವುದನ್ನು ಖಚಿತಪಡಿಸಿದ ಸಮಂತಾ ರುತ್ ಪ್ರಭು.
  • ‘ಮಾ ಇಂಟಿ ಬಂಗಾರಂ’ ಸಕ್ಸಸ್ ಮೀಟ್​ನಲ್ಲಿ ಅಧಿಕೃತವಾಗಿ ತಿಳಿಸಿದ ನಟಿ.
  • ಮೆಟರ್ನಿಟಿ ಲೀವ್ ಬಳಿಕ ಮರಳಿ ಬರುವುದಾಗಿ ಘೋಷಿಸಿದ ಸಮಂತಾ.

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಅಭಿಮಾನಿಗಳಿಗೆ ಇಲ್ಲೊಂದು ದೊಡ್ಡ ಸಿಹಿ ಸುದ್ದಿ ಇದೆ. ನಟಿ ಸಮಂತಾ ಪ್ರಸ್ತುತ ಗರ್ಭಿಣಿ (Pregnant) ಆಗಿದ್ದು, ಶೀಘ್ರದಲ್ಲೇ ತಾಯಿಯಾಗುತ್ತಿರುವುದನ್ನು ಬುಧವಾರ (ಜೂನ್ 24) ಅಧಿಕೃತವಾಗಿ ಖಚಿತಪಡಿಸಿದ್ದಾರೆ. ತಮ್ಮ ಹೊಸ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಅವರು, ವೈಯಕ್ತಿಕ ಜೀವನದ ಈ ಸುಂದರ ಬದಲಾವಣೆಗಾಗಿ ಸಿನಿಮಾಗಳಿಂದ ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್ 19ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಂತಾ, ‘ನನ್ನ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾ ಇಂಟಿ ಬಂಗಾರಂ ಚಿತ್ರದ ಬಳಿಕ ನಾನು ಸಣ್ಣ ವಿರಾಮ ತೆಗೆದುಕೊಳ್ಳಬೇಕಾಗಿದೆ. ನಾನು ಮೆಟರ್ನಿಟಿ ಲೀವ್ ಪಡೆಯುತ್ತಿದ್ದೇನೆ. ಆ ನಂತರ ಮತ್ತೆ ಹೊಸ ಸಿನಿಮಾದೊಂದಿಗೆ ನನ್ನ ಅಭಿಮಾನಿಗಳ ಮುಂದೆ ಬರುತ್ತೇನೆ’ ಎಂದು ಹೇಳಿದ್ದಾರೆ.

ವಿಡಿಯೋ ನೋಡಿ ಲೆಕ್ಕಾಚಾರ ಹಾಕಿದ್ದ ಅಭಿಮಾನಿಗಳು:

ಕಳೆದ ಕೆಲವು ದಿನಗಳಿಂದ ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರದ ವೇಳೆ ಸಮಂತಾ ಅವರ ಬೇಬಿ ಬಂಪ್ ಕಂಡುಬಂದಿತ್ತು. ಇದನ್ನು ಗಮನಿಸಿದ್ದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಗರ್ಭಿಣಿಯಾಗಿದ್ದಾರೆ ಎಂದು ಭಾರಿ ಚರ್ಚೆ ನಡೆಸುತ್ತಿದ್ದರು. ಈಗ ಸಮಂತಾ ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೂಡ ಈ ಬಗ್ಗೆ ಮಾತನಾಡಿ, ‘ನಮ್ಮ ಸಿನಿಮಾ ಸೂಪರ್ ಹಿಟ್ ಆಗಿರುವ ಈ ಸುಂದರ ಸಂದರ್ಭದಲ್ಲೇ ಸಮಂತಾ ಅವರ ಜೀವನದಲ್ಲಿ ಇಂತಹದೊಂದು ಖುಷಿಯ ವಿಷಯ ನಡೆದಿರುವುದು ಸಂತಸ ತಂದಿದೆ’ ಎಂದಿದ್ದಾರೆ.

ప్రెగ్నెన్సీని కన్ఫర్మ్‌ చేసిన సమంత..! - TV9

ಮಗುವಿನ ಆಗಮನದ ನಿರೀಕ್ಷೆಯಲ್ಲಿ ರಾಜ್, ಸಮಂತಾ:

ಸಮಂತಾ ಅವರು ಡಿಸೆಂಬರ್ 2025ರಲ್ಲಿ ಹೆಸರಾಂತ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇವರಿಬ್ಬರ ನಡುವೆ ಸ್ನೇಹ ಬೆಳೆದು ಅದು ಮದುವೆಯ ಹಂತಕ್ಕೆ ಬಂತು. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ‘ನಾನು ಬಾಲ್ಯದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೆ, ನನ್ನ ಮಗುವಿಗೆ ಹಾಗೆ ಆಗಬಾರದು’; ಸಮಂತಾ

ಬಾಕ್ಸ್ ಆಫೀಸ್‌ನಲ್ಲೂ ಸಮಂತಾ ಭರ್ಜರಿ ಕಮ್‌ಬ್ಯಾಕ್:

ಮಯೋಸೈಟಿಸ್ ಎಂಬ ಸ್ನಾಯು ಸಂಬಂಧಿ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಜಾಗತಿಕವಾಗಿ ಕೇವಲ ಕೆಲವೇ ದಿನಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದು ಸಮಂತಾ ಅವರ ಸ್ವಂತ ಬ್ಯಾನರ್ ‘ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್’ ಅಡಿಯಲ್ಲಿ ಮೂಡಿಬಂದ ಮೊದಲ ಚಿತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us