Samantha: ಮಿತಿ ಮೀರಿದ ಯೂಟ್ಯೂಬರ್; ಸಮಂತಾ ಹೆಲ್ತ್​ ಬಗ್ಗೆ ತಪ್ಪು ಮಾಹಿತಿ ಹರಡಿದವರಿಗೆ ಕಾದಿದೆ ಗ್ರಹಚಾರ

| Updated By: ಮದನ್​ ಕುಮಾರ್​

Updated on: Sep 06, 2022 | 12:46 PM

Samantha Ruth Prabhu: ಈ ಹಿಂದಿನ ಘಟನೆಯಿಂದ ಕೆಲವು ಯೂಟ್ಯೂಬರ್​ಗಳು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಅಂಥವರಿಗೆ ಈ ಬಾರಿ ಸಮಂತಾ ತಕ್ಕ ಪಾಠ ಕಲಿಸುವ ಸಾಧ್ಯತೆ ದಟ್ಟವಾಗಿದೆ.

Samantha: ಮಿತಿ ಮೀರಿದ ಯೂಟ್ಯೂಬರ್; ಸಮಂತಾ ಹೆಲ್ತ್​ ಬಗ್ಗೆ ತಪ್ಪು ಮಾಹಿತಿ ಹರಡಿದವರಿಗೆ ಕಾದಿದೆ ಗ್ರಹಚಾರ
ಸಮಂತಾ
Follow us on

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರಿಗೆ ಭರ್ಜರಿ ಡಿಮ್ಯಾಂಡ್​ ಇದೆ. ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಗಾಸಿಪ್​ಗಳಿಗೂ ಕೊರತೆ ಇಲ್ಲ. ಸಮಂತಾ ಅವರ ವೃತ್ತಿ ಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಸೆಲೆಬ್ರಿಟಿ ಎಂದಮೇಲೆ ಅದೆಲ್ಲ ಸಹಜ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಕೆಲವರು ಸಮಂತಾ ಆರೋಗ್ಯದ (Samantha Health) ಬಗ್ಗೆಯೂ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಅವರ ವೃತ್ತಿಜೀವನಕ್ಕೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಬಾರಿ ಸಮಂತಾ ಅವರು ಕಾನೂನು ಸಮರ ಸಾರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬರ್​ಗಳಿಗೆ (Youtubers) ಗ್ರಹಚಾರ ಬಿಡಿಸಲು ಸಮಂತಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಅಷ್ಟಕ್ಕೂ ಸಮಂತಾ ಅವರು ಆರೋಗ್ಯದ ಬಗ್ಗೆ ಗಾಸಿಪ್​ ಹಬ್ಬಿದ್ದು ಯಾಕೆ? ಉತ್ತರ ಸಿಂಪಲ್. ಸಮಂತಾ ಯಾವಾಗಲೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಅವರು ಅಷ್ಟಾಗಿ ಸೋಶಿಯಲ್​ ಮೀಡಿಯಾ ಬಳಸುತ್ತಿಲ್ಲ. ಅವರಿಗೆ ಅನಾರೋಗ್ಯ ಕಾಡುತ್ತಿರುವುದರಿಂದ ಈ ರೀತಿ ಸೈಲೆಂಟ್​ ಆಗಿದ್ದಾರೆ ಎಂಬುದು ಕೆಲವು ಯೂಟ್ಯೂಬರ್​ಗಳ ವಾದ. ಕೆಲವರಂತೂ ​ಅತಿ ಕೆಟ್ಟದಾಗಿ ಥಂಬ್​ನೇಲ್​ಗಳನ್ನು ಮಾಡಿ ಹರಿಬಿಟ್ಟಿದ್ದಾರೆ. ಇದರಿಂದ ಸಮಂತಾ ಅಭಿಮಾನಿಗಳಿಗೆ ಬೇಸರ ಆಗಿದೆ.

ಈ ಹಿಂದೆ ಕೂಡ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ನೀಡಿದ ಸಂದರ್ಭದಲ್ಲೂ ಇದೇ ರೀತಿ ಆಗಿತ್ತು. ಸಮಂತಾ ಅವರ ಪರ್ಸನಲ್​ ಲೈಫ್​ ಬಗ್ಗೆ ಇಲ್ಲಸಲ್ಲದ ಗಾಸಿಪ್​ ಹಬ್ಬಿಸಲಾಗಿತ್ತು. ಆಗಲೂ ಅವರು ಕಾನೂನು ಸಮರ ಸಾರಿದ್ದರು. ಅಷ್ಟಾದರೂ ಕೆಲವು ಯೂಟ್ಯೂಬರ್​ಗಳು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಅಂಥವರಿಗೆ ಈ ಬಾರಿ ಸಮಂತಾ ತಕ್ಕ ಪಾಠ ಕಲಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಸಿನಿಮಾ ವಿಚಾರಕ್ಕೆ ಬರುವುದಾದರೆ, ವಿಚ್ಛೇದನದ ಬಳಿಕ ಸಮಂತಾ ಅವರು ಚಾರ್ಮ್​ ಹೆಚ್ಚಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಅವರು ಅಭಿನಯಿಸುತ್ತಿರುವ ‘ಖುಷಿ’ ಸಿನಿಮಾ ಸಖತ್​ ನಿರೀಕ್ಷೆ ಮೂಡಿಸಿದೆ. ಹಾಗೆಯೇ ‘ಯಶೋಧ’ ಸಿನಿಮಾದಲ್ಲಿ ಸಮಂತಾ ಅವರು ಆ್ಯಕ್ಷನ್​ ಅವತಾರ ತಾಳುತ್ತಿದ್ದಾರೆ. ‘ಶಾಕುಂತಲಂ’ ಚಿತ್ರದಲ್ಲಿ ಶಕುಂತಲೆಯ ಪಾತ್ರ ಮಾಡುತ್ತಿದ್ದಾರೆ. ಹೀಗೆ ಒಂದಕ್ಕಿಂತ ಒಂದು ಡಿಫರೆಂಟ್​ ಸಿನಿಮಾಗಳು ಅವರ ಕೈಯಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 12:46 pm, Tue, 6 September 22