Salman Khan: ಪ್ಯಾಂಟ್​ ಜೇಬಿನಲ್ಲಿ ಗಾಜಿನ ಲೋಟ ಇಟ್ಕೊಂಡು ಪಾರ್ಟಿಗೆ ಬಂದ ಸಲ್ಲು​; ವಿಡಿಯೋ ವೈರಲ್​

Salman Khan Viral Video: ಸಲ್ಮಾನ್​ ಖಾನ್​ ಅವರು ಈ ರೀತಿ ಗಾಜಿನ ಲೋಟವನ್ನು ಪ್ಯಾಂಟ್​ ಜೇಬಿನಲ್ಲಿ ತುಂಬಿಕೊಂಡಿದ್ದು ಇದೇ ಮೊದಲೇನಲ್ಲ. ಇದು ಅವರ ಹಳೇ ಚಾಳಿ.

Salman Khan: ಪ್ಯಾಂಟ್​ ಜೇಬಿನಲ್ಲಿ ಗಾಜಿನ ಲೋಟ ಇಟ್ಕೊಂಡು ಪಾರ್ಟಿಗೆ ಬಂದ ಸಲ್ಲು​; ವಿಡಿಯೋ ವೈರಲ್​
ಸಲ್ಮಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 06, 2022 | 10:52 AM

ನಟ ಸಲ್ಮಾನ್​ ಖಾನ್​ (Salman Khan) ಏನೇ ಮಾಡಿದರೂ ಸುದ್ದಿ ಆಗುತ್ತದೆ. ಅಷ್ಟರಮಟ್ಟಿಗೆ ಅವರ ಜನಪ್ರಿಯತೆ ಇದೆ. ಬಾಲಿವುಡ್​ನಲ್ಲಿ (Bollywood) ಅವರು ಕಿಂಗ್​ ಆಗಿ ಮೆರೆಯುತ್ತಿದ್ದಾರೆ. ಕೆಲವು ಸಿನಿಮಾಗಳು ಸೋತಿದ್ದರೂ ಕೂಡ ಅವರ ಹವಾ ಕಡಿಮೆ ಆಗಿಲ್ಲ. ಅವರು ಹೋದಲ್ಲಿ ಬಂದಲ್ಲಿ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ಇತ್ತೀಚೆಗೆ ನಿರ್ಮಾಪಕ ಮುರಾದ್​ ಖೇತನಿ ಅವರ ಹುಟ್ಟುಹಬ್ಬದ ಪಾರ್ಟಿಗೆ ಸಲ್ಮಾನ್​ ಖಾನ್​ ಹಾಜರಿ ಹಾಕಿದ್ದರು. ಈ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪಾರ್ಟಿಗೆ ಬರುವಾಗ ಅವರು ಸ್ವಂತ ಗಾಜಿನ ಲೋಟವನ್ನು ಪ್ಯಾಂಟ್​ ಜೀಬಿನಲ್ಲಿ ಇಟ್ಟುಕೊಂಡು ಬಂದಿದ್ದಾರೆ. ಆ ವಿಡಿಯೋ (Salman Khan Video) ವೈರಲ್​ ಆಗಿದ್ದು, ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ಏನಿದೆ?  ತಮ್ಮ ಐಷಾರಾಮಿ ಕಾರಿನಲ್ಲಿ ಸಲ್ಮಾನ್​ ಖಾನ್​ ಅವರು ಆಗಮಿಸುತ್ತಾರೆ. ಕಾರಿನಲ್ಲಿ ಕುಳಿತಿರುವಾಗಲೇ ಅವರು ಒಂದು ಗಾಜಿನ ಲೋಟ ಹಿಡಿದುಕೊಂಡು ನೀರು ಅಥವಾ ನೀರಿನ ರೀತಿ ಕಾಣುವ ಪಾನೀಯ ಕುಡಿಯುತ್ತಿರುತ್ತಾರೆ. ಪಾರ್ಟಿ ಸ್ಥಳ ಬರುತ್ತಿದ್ದಂತೆಯೇ ಅವರು ಕಾರಿನಿಂದ ಇಳಿದು ಹೊರಬರುತ್ತಾರೆ. ಆಗ ಅವರನ್ನು ಪಾಪರಾಜಿಗಳು ಮತ್ತಿಕೊಳ್ಳುತ್ತಾರೆ.

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಕೈಯಲ್ಲಿ ಹಿಡಿದುಕೊಂಡಿದ್ದ ಗಾಜಿನ ಲೋಟವನ್ನು ಸಲ್ಮಾನ್​ ಖಾನ್​ ಅವರು ತಮ್ಮ ಪ್ಯಾಂಟ್​ ಜೇಬಿನಲ್ಲಿ ತುರುಕಿಕೊಳ್ಳುತ್ತಾರೆ. ಬಾಡಿಗಾರ್ಡ್​ಗಳು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಈ ದೃಶ್ಯ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಸದ್ಯಕ್ಕಂತೂ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಷ್ಟಕ್ಕೂ ಸಲ್ಮಾನ್​ ಖಾನ್​ ಅವರು ಪಾರ್ಟಿಗೆ ತಮ್ಮ ಸ್ವಂತ ಗಾಜಿನ ಲೋಟ ಹಿಡಿದುಕೊಂಡು ಬಂದಿದ್ದು ಯಾಕೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಇದು ಹಳೇ ಚಾಳಿ:

ಅಂದಹಾಗೆ, ಸಲ್ಮಾನ್​ ಖಾನ್​ ಅವರು ಈ ರೀತಿ ಗಾಜಿನ ಲೋಟವನ್ನು ಪ್ಯಾಂಟ್​ ಜೇಬಿನಲ್ಲಿ ತುಂಬಿಕೊಂಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ‘ಬಿಗ್​ ಬಾಸ್​’ ಕಾರ್ಯಕ್ರಮದ ವೀಕೆಂಡ್​ ಎಪಿಸೋಡ್​ ನಡೆಸಿಕೊಡುವಾಗಲೂ ಇದೇ ರೀತಿ ಮಾಡಿದ್ದರು. ವೇದಿಕೆಯಲ್ಲಿ ನೀರು ಕುಡಿದ ಬಳಿಕ ಆ ಲೋಟವನ್ನು ಅವರು ತಮ್ಮ ಪ್ಯಾಂಟ್​ ಜೇಬಿನಲ್ಲಿ ತುರುಕಿಕೊಂಡಿದ್ದರು. ಈಗ ಆ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಕಿಸಿ ಕಾ ಭಾಯ್​​, ಕಿಸಿ ಕಾ ಜಾನ್​’, ‘ಟೈಗರ್​ 3’ ಮುಂತಾದ ಸಿನಿಮಾಗಳಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ. ‘ಗಾಡ್​ ಫಾದರ್​’, ‘ಪಠಾಣ್​’ ಮತ್ತಿತ್ತರ ಚಿತ್ರಗಳಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:52 am, Tue, 6 September 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ