ಮತ್ತೆ ಪ್ರೀತಿಯಲ್ಲಿ ಬಿದ್ದ ಸಮಂತಾ; ಪ್ರೇಮಿಗಳ ದಿನವೇ ಫೋಟೋ ಬಹಿರಂಗ
ನಟಿ ಸಮಂತಾ ರುತ್ ಪ್ರಭು ಅವರು ವಿಚ್ಛೇದನ ಪಡೆದ ಬಳಿಕ ಸಿಂಗಲ್ ಆಗಿದ್ದರು. ಆದರೆ ಈಗ ಅವರಿಗೆ ಮತ್ತೆ ಪ್ರೀತಿ ಉಂಟಾಗಿದೆ. ಪ್ರೇಮಿಗಳ ದಿನವೇ (ಫೆ.14) ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿದರೆ ಸಮಂತಾ ಅವರು ಲವ್ನಲ್ಲಿ ಮುಳುಗಿದ್ದಾರೆ ಎಂಬುದು ಖಚಿತ ಆಗುತ್ತಿದೆ.

ಪ್ರೇಮಿಗಳ ದಿನಕ್ಕೆ ಸಮಂತಾ ರುತ್ ಪ್ರಭು ಅವರು ಗುಡ್ ನ್ಯೂಸ್ ನೀಡುತ್ತಾರೆ ಎಂಬ ಅನುಮಾನ ಮೊದಲೇ ಇತ್ತು. ಯಾಕೆಂದರೆ ಒಂದು ದಿನ ಮೊದಲು ಅವರು ಬಹಳ ಖುಷಿಯಲ್ಲಿ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಅದೇ ರೀತಿ ಆಗಿದೆ. ನೆಟ್ಟಿಗರು ಊಹಿಸಿದಂತೆಯೇ ಸಮಂತಾ ಅವರು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಸಿಹಿ ಸುದ್ದಿ ನೀಡಿದ್ದಾರೆ. ಪ್ರೀತಿಯ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ಪ್ರೀತಿಪಾತ್ರರ ಜೊತೆ ಕುಳಿತಿರುವ ಫೋಟೋ ಇದಾಗಿದೆ. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ಹೃದಯದ ಸಿಂಬಲ್ ಇರುವ ಫೋಟೋವನ್ನು ಕೂಡ ಸಮಂತಾ ಅವರು ಪೋಸ್ಟ್ ಮಾಡಿದ್ದಾರೆ. ಪ್ರೀತಿಯ ಬಗೆಗಿನ ಕ್ಯಾಪ್ಷನ್ಗಳನ್ನೂ ಹಾಕಿದ್ದಾರೆ. ಇದನ್ನೆಲ್ಲ ಗಮನಿಸುತ್ತಿದ್ದರೆ ಖಂಡಿತವಾಗಿಯೂ ಸಮಂತಾ ಅವರಿಗೆ ಪ್ರೀತಿ ಸಿಗುರಿದೆ ಎಂಬುದು ಬಹುತೇಕರ ಅಭಿಪ್ರಾಯ. ಈ ಬಗ್ಗೆ ಸ್ವತಃ ಸಮಂತಾ ಕಡೆಯಿಂದ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಸದ್ಯಕ್ಕಂತೂ ಈ ಫೋಟೋಗಳು ವೈರಲ್ ಆಗುತ್ತಿದೆ.
View this post on Instagram
ನಾಗ ಚೈತನ್ಯ ಅವರಿಗೆ 2021ರಲ್ಲಿ ಸಮಂತಾ ವಿಚ್ಛೇದನ ನೀಡಿದರು. ಆ ಬಳಿಕ ಅವರು ಸಿಂಗಲ್ ಆಗಿಯೇ ಇದ್ದರು. ಇತ್ತೀಚೆಗೆ ಅವರು ನಿರ್ದೇಶಕ ರಾಜ್ ನಿಧಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವುದು ಎಲ್ಲರ ಕಣ್ಣು ಕುಕ್ಕಿದೆ. ಈಗ ಹೊಸ ಫೋಟೋದಲ್ಲಿ ಸಮಂತಾ ಜೊತೆ ಪಾನೀಯ ಕುಡಿಯುತ್ತಿರುವ ವ್ಯಕ್ತಿ ಕೂಡ ರಾಜ್ ನಿಧಿಮೋರು ಇರಬಹುದು ಎಂದು ಜನರು ಊಹಿಸುತ್ತಿದ್ದಾರೆ.
ಇದನ್ನೂ ಓದಿ: ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಫೋಟೋ ಹಂಚಿಕೊಂಡ ನಟಿ
‘ದಿ ಫ್ಯಾಮಿಲಿ ಮ್ಯಾನ್ 2’ ಹಾಗೂ ‘ಸಿಟಾಡೆಲ್ ಹನಿ ಬನಿ’ ವೆಬ್ ಸರಣಿಯಲ್ಲಿ ರಾಜ್ ನಿಧಿಮೋರು ಹಾಗು ಸಮಂತಾ ರುತ್ ಪ್ರಭು ಅವರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಅವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ ಎನ್ನಲಾಗಿದೆ. ಈಗ ಆ ಬಾಂಧವ್ಯ ಪ್ರೀತಿಯಾಗಿ ಬೆಳೆದಿರಬಹುದು ಎಂದು ಗಾಸಿಪ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಸಣ್ಣ ಸುಳಿವು ನೀಡಿರುವ ಸಮಂತಾ ಅವರು ಶೀಘ್ರದಲ್ಲೇ ತಮ್ಮ ಪ್ರೀತಿಯ ವಿಷಯವನ್ನು ಜಗಜ್ಜಾಹೀರು ಮಾಡಿದರೂ ಅಚ್ಚರಿ ಏನಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:56 pm, Fri, 14 February 25