Yashoda: ಬಾಕ್ಸ್​ ಆಫೀಸ್​ನಲ್ಲಿ ಭರವಸೆ ಮೂಡಿಸಿದ ‘ಯಶೋದಾ’; 3 ದಿನದಲ್ಲಿ ಸಮಂತಾ ಸಿನಿಮಾದ ಕಲೆಕ್ಷನ್​ ಎಷ್ಟು?

| Updated By: ಮದನ್​ ಕುಮಾರ್​

Updated on: Nov 14, 2022 | 9:53 AM

Yashoda Movie Collection: ‘ಯಶೋದಾ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಸೋಮವಾರದ (ನ.14) ಪರೀಕ್ಷೆಯಲ್ಲಿ ಈ ಸಿನಿಮಾ ಪಾಸ್​ ಆಗತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

Yashoda: ಬಾಕ್ಸ್​ ಆಫೀಸ್​ನಲ್ಲಿ ಭರವಸೆ ಮೂಡಿಸಿದ ‘ಯಶೋದಾ’; 3 ದಿನದಲ್ಲಿ ಸಮಂತಾ ಸಿನಿಮಾದ ಕಲೆಕ್ಷನ್​ ಎಷ್ಟು?
ಸಮಂತಾ
Follow us on

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾದವರಲ್ಲ. ಹಲವು ಬಗೆಯ ಪ್ರಯೋಗಗಳನ್ನು ಅವರು ಮಾಡುತ್ತಿದ್ದಾರೆ. ಹೀರೋ ಜೊತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಹೀರೋಯಿನ್​ ಆಗುವ ಬದಲು ಮಹಿಳಾ ಪ್ರಧಾನ ಕಥೆಯುಳ್ಳ ಚಿತ್ರಗಳತ್ತ ಸಮಂತಾ ಗಮನ ಹರಿಸುತ್ತಿದ್ದಾರೆ. ಅವರು ನಟಿಸಿರುವ ‘ಯಶೋದಾ’ ಚಿತ್ರ (Yashoda Movie) ಇದಕ್ಕೆ ಲೇಟೆಸ್ಟ್​ ಉದಾಹರಣೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಕೋಟ್ಯಂತರ ರೂಪಾಯಿ ಕಮಾಯಿ ಮಾಡುತ್ತಿದೆ. ಇದರಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್​ ಆಗಿದೆ. ‘ಯಶೋದಾ’ ಬಾಕ್ಸ್​ ಆಫೀಸ್​ ಕಲೆಕ್ಷನ್ (Yashoda Box Office Collection) ಬಗ್ಗೆ ಇಲ್ಲಿದೆ ಮಾಹಿತಿ..

ನವೆಂಬರ್​ 11ರಂದು ‘ಯಶೋದಾ’ ಚಿತ್ರ ರಿಲೀಸ್​ ಆಯಿತು. ಇದು ಪ್ಯಾನ್​ ಇಂಡಿಯಾ ಸಿನಿಮಾಗಳ ಕಾಲ. ಎಲ್ಲ ಸ್ಟಾರ್​ ಹೀರೋಗಳು ಈ ಟ್ರೆಂಡ್​ ಫಾಲೋ ಮಾಡುತ್ತಿದ್ದಾರೆ. ಆದರೆ ನಾಯಕಿ ಪ್ರಧಾನ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿದ್ದು ವಿರಳ. ಸಮಂತಾ ಅವರಿಗೆ ದೇಶಾದ್ಯಂತ ಫ್ಯಾನ್ಸ್​ ಇದ್ದಾರೆ. ಹಾಗಾಗಿ ‘ಯಶೋದಾ’ ಚಿತ್ರವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡಲಾಗಿದೆ. ನವೆಂಬರ್​ 11ರಂದು ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್​ನಲ್ಲಿ ಬಿಡುಗಡೆ ಆಯಿತು.

‘ಯಶೋದಾ’ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಮೂಲಗಳ ಪ್ರಕಾರ ವೀಕೆಂಡ್​ನಲ್ಲಿ ಈ ಚಿತ್ರ ಕೋಟ್ಯಂತರ ರೂಪಾಯಿ ಕಲೆಕ್ಷನ್​ ಮಾಡಿದೆ. ಭಾನುವಾರ (ನ.13) ಭಾರತದ ಮಾರುಕಟ್ಟೆಯಲ್ಲಿ 3.50 ಕೋಟಿ ರೂಪಾಯಿ ಆದಾಯ ಬಂದಿದೆ. ಅಮೆರಿಕದಲ್ಲೂ ಇಷ್ಟೇ ಪ್ರಮಾಣದ ಕಲೆಕ್ಷನ್​ ಆಗಿದೆ. ಒಟ್ಟಾರೆ ಮೂರು ದಿನಕ್ಕೆ 10 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಈ ಚಿತ್ರಕ್ಕಾಗಿ ಸಮಂತಾ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಇದರಲ್ಲಿ ಅವರಿಗೆ ಎರಡು ಶೇಡ್​ ಪಾತ್ರ ಇದೆ. ಬಾಡಿಗೆ ತಾಯಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಭರ್ಜರಿ ಸಾಹಸ ದೃಶ್ಯಗಳಲ್ಲೂ ಅವರು ಅಭಿನಯಿಸಿದ್ದಾರೆ. ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ವಿಮರ್ಶಕರಿಂದ ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

ಯಾವುದೇ ಚಿತ್ರಕ್ಕೆ ಸೋಮವಾರದ ಕಲೆಕ್ಷನ್​ ಮುಖ್ಯವಾಗುತ್ತದೆ. ‘ಯಶೋದಾ’ ಸಿನಿಮಾ ಕೂಡ ಸೋಮವಾರದ (ನ.14) ಪರೀಕ್ಷೆಯಲ್ಲಿ ಪಾಸ್​ ಆಗುತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸಮಂತಾ ಕೈಯಲ್ಲಿ ಹಲವು  ಆಫರ್​ಗಳಿವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ‘ಶಾಕುಂತಲಂ’, ‘ಖುಷಿ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:53 am, Mon, 14 November 22