3 ವರ್ಷದ ಹಿಂದಿನ ಘಟನೆ ನೆನೆದು ಖುಷಿಪಟ್ಟ ಸಮಂತಾ; ಇದು ಮಾಜಿ ಪತಿ ನಾಗ ಚೈತನ್ಯ ಕುರಿತ ವಿಷಯ

Samantha | Naga Chaitanya: ನಾಗ ಚೈತನ್ಯ ಅವರ ಸಹವಾಸವೇ ಬೇಡ ಅಂತ ಸಮಂತಾ ನಿರ್ಧರಿಸಿದ್ದರು. ಆದರೆ ಈಗ ಮೂರು ವರ್ಷದ ಹಿಂದಿನ ಘಟನೆಯನ್ನು ನೆನಪಿಸಿಕೊಂಡು ಅವರು ಖುಷಿಪಟ್ಟಿದ್ದಾರೆ.

3 ವರ್ಷದ ಹಿಂದಿನ ಘಟನೆ ನೆನೆದು ಖುಷಿಪಟ್ಟ ಸಮಂತಾ; ಇದು ಮಾಜಿ ಪತಿ ನಾಗ ಚೈತನ್ಯ ಕುರಿತ ವಿಷಯ
ಸಮಂತಾ, ನಾಗ ಚೈತನ್ಯ
Edited By:

Updated on: Apr 06, 2022 | 8:15 AM

ನಟಿ ಸಮಂತಾ (Samantha) ಅವರ ಖಾಸಗಿ ಜೀವನದ ಬಗ್ಗೆ ನೂರಾರು ವಿಚಾರಗಳು ಸುದ್ದಿ ಆದವು. ನಾಗ ಚೈತನ್ಯ (Naga Chaitanya) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವ ನಿರ್ಧಾರ ತೆಗೆದುಕೊಂಡಾಗಿನಿಂದಲೂ ಅವರಿಬ್ಬರ ಬಗ್ಗೆ ಅನೇಕ ಗಾಸಿಪ್​ಗಳು ಹರಿದಾಡಿದವು. ಅಂತಿಮವಾಗಿ ವಿಚ್ಛೇದನ ಪಡೆಯುವ ಮೂಲಕ ಸಮಂತಾ ಮತ್ತು ನಾಗ ಚೈತನ್ಯ ಬೇರೆಯಾಗಿದ್ದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಸಮಂತಾ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮಾಜಿ ಪತಿಗೆ ಸಂಬಂಧಿಸಿದ ಹಳೆಯ ಎಲ್ಲ ಪೋಸ್ಟ್​ಗಳನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಿಂದ ಅವರು ಡಿಲೀಟ್​ ಮಾಡಿದರು. ಒಟ್ಟಿನಲ್ಲಿ ನಾಗ ಚೈತನ್ಯರ ಸಹವಾಸವೇ ಬೇಡ ಅಂತ ಅವರು ನಿರ್ಧರಿಸಿದ್ದರು. ಆದರೆ ಈಗ ಮತ್ತೆ ಅವರು ಮಾಜಿ ಗಂಡನ ಕುರಿತು ಇನ್​ಸ್ಟಾಗ್ರಾಮ್​ ಸ್ಟೋರಿ ಪೋಸ್ಟ್​ ಮಾಡಿದ್ದಾರೆ. ಹಾಗಂತ ಇದು ಅವರಿಬ್ಬರ ಖಾಸಗಿ ವಿಚಾರ ಅಲ್ಲ. ನಾಗಚೈತನ್ಯ ಮತ್ತು ಸಮಂತಾ ಜೋಡಿಯಾಗಿ ನಟಿಸಿದ್ದ ‘ಮಜಿಲಿ’ (Majili Movie) ಚಿತ್ರದ ಪೋಸ್ಟರ್​ ಅನ್ನು ಅವರು ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಆ ಸಿನಿಮಾದ ನೆನಪು ಈಗ ಸಮಂತಾ ಮನದಲ್ಲಿ ಮೂಡಿದೆ.

ಬಹಳ ದಿನಗಳ ಹಿಂದೆಯೇ ಇನ್​ಸ್ಟಾಗ್ರಾಮ್​ನಲ್ಲಿ ನಾಗ ಚೈತನ್ಯ ಅವರನ್ನು ಸಮಂತಾ ಅನ್​ಫಾಲೋ ಮಾಡಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಆದರೆ ಸಿನಿಮಾ ವಿಚಾರದಲ್ಲಿ ಅವರು ಬೇರೆಯದೇ ನಿಲುವು ಹೊಂದಿದ್ದಾರೆ. 2019ರ ಏ.5ರಂದು ‘ಮಜಿಲಿ’ ಸಿನಿಮಾ ತೆರೆಕಂಡಿತ್ತು. ನಾಗ ಚೈತನ್ಯ ಮತ್ತು ಸಮಂತಾ ಅವರು ಜೋಡಿಯಾಗಿ ನಟಿಸಿದ್ದ 4ನೇ ಚಿತ್ರ ಅದಾಗಿತ್ತು. ಒಳ್ಳೆಯ ವಿಮರ್ಶೆ ಪಡೆಯುವುದರ ಜೊತೆಗೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿತ್ತು.

‘ಮಜಿಲಿ’ ಚಿತ್ರಕ್ಕೆ ಮೂರು ವರ್ಷ ಪೂರ್ಣಗೊಂಡಿರುವ ಖುಷಿಯಲ್ಲಿ ಆ ಸಿನಿಮಾದ ಪೋಸ್ಟರ್​ ಅನ್ನು ಸಮಂತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಆ ಪೋಸ್ಟರ್​ನಲ್ಲಿ ನಾಗ ಚೈನತ್ಯ ಅವರ ಫೋಟೋ ಹೈಲೈಟ್​ ಆಗಿದೆ. ‘ಯೇ ಮಾಯ ಚೇಸಾವೆ’, ‘ಮನಂ’, ‘ಆಟೋನಗರ್​ ಸೂರ್ಯ’ ಮತ್ತು ‘ಮಜಿಲಿ’ ಸಿನಿಮಾಗಳಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಜೊತೆಯಾಗಿ ನಟಿಸಿದ್ದಾರೆ. ಮತ್ತೊಂದು ಹೊಸ ಚಿತ್ರದಲ್ಲಿ ಅವರಿಬ್ಬರು ಜೊತೆಯಾಗಿ ಅಭಿನಯಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದ್ದರೂ ಕೂಡ ಅದು ನಿಜವಲ್ಲ ಎಂಬ ಮಾಹಿತಿ ಸಿಕ್ಕಿದೆ.

ಸದ್ಯಕ್ಕಂತೂ ಸಮಂತಾ ವೃತ್ತಿ ಬದುಕು ಹೊಸ ವೇಗ ಪಡೆದುಕೊಂಡಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ನಟಿಸಿದ ಬಳಿಕ ಅವರ ಚಾರ್ಮ್​ ಬದಲಾಯಿತು. ಆ ವೆಬ್​ ಸಿರೀಸ್​ನಲ್ಲಿ ಅವರು ಮಾಡಿದ್ದ ರಾಜಿ ಎಂಬ ಪಾತ್ರ ಸಖತ್​ ಬೋಲ್ಡ್​ ಆಗಿತ್ತು. ಬಳಿಕ ಅವರು ‘ಪುಷ್ಪ’ ಸಿನಿಮಾದ ‘ಹು ಅಂತೀಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡಿನಲ್ಲಿ ಹಾಟ್​ ಆಗಿ ಹೆಜ್ಜೆ ಹಾಕುವ ಮೂಲಕ ಇನ್ನಷ್ಟು ಖ್ಯಾತಿ ಹೆಚ್ಚಿಸಿಕೊಂಡರು. ಒಟ್ಟಿನಲ್ಲಿ ವಿಚ್ಛೇದನ ಪಡೆದ ಬಳಿಕ ಸಮಂತಾ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ.

ಸಮಂತಾ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. ವಿಘ್ನೇಶ್​ ಶಿವನ್​ ನಿರ್ದೇಶನ ಮಾಡುತ್ತಿರುವ ‘ಕಾದು ವಾಕುಲ ರೆಂಡು ಕಾದಲ್​’ ಚಿತ್ರದಲ್ಲಿ ಸಮಂತಾ ನಟಿಸಿದ್ದು, ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಲಾಗಿದೆ. ಇದಲ್ಲದೆ ‘ಶಾಕುಂತಲಂ’, ‘ಯಶೋಧ’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಇಂಗ್ಲಿಷ್​ ನಿರ್ದೇಶಕ ಫಿಲಿಪ್​​ ಜಾನ್​ ಜೊತೆ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಸಮಂತಾಗೆ ಡ್ಯಾನ್ಸ್​ ಸ್ಟೆಪ್​ ಹೇಳಿಕೊಟ್ಟಿದ್ದ ಖ್ಯಾತ ಕೊರಿಯೋಗ್ರಾಫರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಪಡ್ಡೆಗಳ ಕಣ್ಣು ಕುಕ್ಕಿದ ಸಮಂತಾ ಹೊಸ ಅವತಾರ; ಇಲ್ಲಿದೆ ಫೋಟೋ ಗ್ಯಾಲರಿ