AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕಷ್ಟದಿಂದ ಕಾಪಾಡಿದ ಪುನೀತ್ ರಾಜ್​ಕುಮಾರ್ ಪವರ್ ಬಗ್ಗೆ ತಮಿಳು ನಿರ್ದೇಶಕ, ನಟ ಸಮುದ್ರಖನಿ ಮಾತು

Puneeth Rajkumar-Samuthirakani: ಸಂಕಷ್ಟದ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್ ತಮ್ಮನ್ನು ಹೇಗೆ ಕಾಪಾಡಿದ್ದರು ಎಂಬುದನ್ನು ತಮಿಳಿನ ಜನಪ್ರಿಯ ನಿರ್ದೇಶಕ, ನಟ ಸಮುದ್ರಖನಿ ನೆನಪು ಮಾಡಿಕೊಂಡಿದ್ದಾರೆ.

ಸಂಕಷ್ಟದಿಂದ ಕಾಪಾಡಿದ ಪುನೀತ್ ರಾಜ್​ಕುಮಾರ್ ಪವರ್ ಬಗ್ಗೆ ತಮಿಳು ನಿರ್ದೇಶಕ, ನಟ ಸಮುದ್ರಖನಿ ಮಾತು
ಪುನೀತ್-ಸಮುದ್ರಕಣಿ
ಮಂಜುನಾಥ ಸಿ.
| Edited By: |

Updated on:May 19, 2023 | 9:07 AM

Share

ಎಷ್ಟೇ ನೆನೆದರೂ ಮಾಸದ ನೆನಪು ಪುನೀತ್ ರಾಜ್​ಕುಮಾರ್ (Puneeth Rajkumar) ಅವರದ್ದು. ಅಗಲಿ ವರ್ಷಕ್ಕೂ ಹೆಚ್ಚು ಕಾಲವಾಗಿದ್ದರೂ ಪುನೀತ್ ಒಂದಲ್ಲ ಒಂದುಕಡೆ, ಒಂದಲ್ಲ ಒಂದು ಕಾರಣಕ್ಕೆ ಸ್ಮರಿಸುತ್ತಲೇ ಇರುತ್ತಾರೆ ಅಭಿಮಾನಿಗಳು. ಪುನೀತ್ ಮಾಡಿದ ಎಷ್ಟೋ ಕಾರ್ಯಗಳು ಅವರು ಅಗಲಿದ ಬಳಿಕ ಬೆಳಕಿಗೆ ಬರುತ್ತಿವೆ. ತಮಿಳಿನ ಜನಪ್ರಿಯ ನಟ, ನಿರ್ದೇಶಕ ಸಮುದ್ರಖನಿ (Samuthirakani) ಸಂದರ್ಶನವೊಂದರಲ್ಲಿ ಪುನೀತ್ ರಾಜ್​ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಸಂಕಷ್ಟವೊಂದರಿಂದ ಹೇಗೆ ಪುನೀತ್ ತಮ್ಮನ್ನು ಪಾರು ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಸಮುದ್ರಖನಿ, 2019 ರಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪುನೀತ್ ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದು, ‘ನಾನು, ಪುನೀತ್ ರಾಜ್​ಕುಮಾರ್ ಗಾಗಿ ಯಾರೆ ಕೂಗಾಡಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಮೈಸೂರಿನ ಬಳಿ ಶೂಟಿಂಗ್ ನಡೆಯುತ್ತಿತ್ತು. ಅದೇ ಸಮಯದಲ್ಲಿ ಕಾವೇರಿ ಕುರಿತ ವಿವಾದವೊಂದು ಭುಗಿಲೆದ್ದಿತು. ಆಗ ತಮಿಳಿನ ನಿರ್ದೇಶಕನೊಬ್ಬ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದಾನೆ ಎಂದು ಗೊತ್ತಾಗಿ ಸುಮಾರು ನೂರು ಜನ ಬೈಕ್​ಗಳಲ್ಲಿ ಶೂಟಿಂಗ್ ಸೆಟ್​ಗೆ ಬಂದುಬಿಟ್ಟಿದ್ದರು” ಎಂದು ಸಮುದ್ರಖನಿ ನೆನಪು ಮಾಡಿಕೊಂಡಿದ್ದಾರೆ.

”ನಾನು ಹಾಗೂ ನಮ್ಮ ಕ್ಯಾಮೆರಾಮನ್ ಕೆಲವು ಆರ್ಟ್​ ಡೈರೆಕ್ಟರ್​ಗಳು ತಮಿಳುನಾಡಿನವರು. ಇಬ್ಬರೂ ಗಾಬರಿಯಾಗಿಬಿಟ್ಟಿದ್ದೆವು. ಆದರೆ ಪುನೀತ್ ನಮ್ಮ ಬೆಂಬಲಕ್ಕೆ ಬಂದರು, ನನ್ನ ತೋಳ ಮೇಲೆ ಕೈ ಹಾಕಿ, ನನ್ನ ಸಹೋದರ ಇವರು ಎಲ್ಲರೂ ವಾಪಸ್ ಹೊರಡಿ ಎಂದರು ಅಷ್ಟೆ. ಬಂದವರೆಲ್ಲರೂ ಏನೂ ಮಾತನಾಡದೆ ವಾಪಸ್ ಹೋದರು. ಅದು ಪುನೀತ್ ರಾಜ್​ಕುಮಾರ್ ಪವರ್” ಎಂದಿದ್ದಾರೆ ಸಮುದ್ರಖನಿ.

”ಅವರು ಬಹಳ ಸಿಂಪಲ್, ನಾವು ಏನು ಕೊಡುತ್ತೇವೆಯೋ ಅದೇ ನಮಗೆ ವಾಪಸ್ ಬರುತ್ತದೆ. ಅವರು ಸಮಾಜಕ್ಕೆ ಸಾಕಷ್ಟು ಕೊಟ್ಟಿದ್ದಾರೆ, ಅದೇ ಗೌರವವನ್ನು ಸಮಾಜ ಅವರಿಗೆ ಕೊಡುತ್ತಿದೆ. ಯಾವುದೇ ರಾಜ್ಯದಲ್ಲಾದರೂ ಅಷ್ಟೆ ಮೊದಲಿಗೆ ಕಲೆಗೆ ಗಡಿಗಳೇ ಇಲ್ಲ” ಎಂದು ಸಮುದ್ರಖನಿ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ಆರ್ಥಿಕ ಸಹಾಯ ಮಾಡಿದ್ದ ಪುನೀತ್ ರಾಜ್​ಕುಮಾರ್, ಅವರ ನಿಧನ ಚಿಂತೆಯಲ್ಲಿ ಊಟ ಬಿಟ್ಟಿದ್ದ ಯುವತಿ ಸಾವು

ಸಮುದ್ರಖನಿ, ತಮಿಳಿನಲ್ಲಿ ನಿರ್ದೇಶಿಸಿದ್ದ ಪೊರಾಲಿ ಸಿನಿಮಾವನ್ನು ಅವರೇ ಕನ್ನಡದಲ್ಲಿ ಯಾರೆ ಕೂಗಾಡಲಿ ಹೆಸರಿನಲ್ಲಿ ರೀಮೇಕ್ ಮಾಡಿದರು. ಆ ಮೊದಲು ಸಮುದ್ರಖನಿಯವರೇ ನಿರ್ದೇಶಿಸಿದ್ದ ನಾಡೋಡಿಗಳ್ ಸಿನಿಮಾವನ್ನು ಹುಡುಗರು ಹೆಸರಲ್ಲಿ ಪುನೀತ್ ರಾಜ್​ಕುಮಾರ್ ರೀಮೇಕ್ ಮಾಡಿದ್ದರು. ಆ ಸಿನಿಮಾವನ್ನೇ ಸಮುದ್ರಖನಿ ನಿರ್ದೇಶಿಸಬೇಕಿತ್ತು ಆದರೆ ಅದು ಸಾಧ್ಯವಾಗಿರಲಿಲ್ಲ.

ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಪುನೀತ್ ರಾಜ್​ಕುಮಾರ್ ಸಮುದ್ರಖನಿಯನ್ನು ಕೊಂಡಾಡಿದ್ದರು. ಅವರು ನನ್ನ ಸಹೋದರ ಎಂದು ಅಂದೇ ವೇದಿಕೆ ಮೇಲೆ ಹೇಳಿದ್ದ ಪುನೀತ್, ಸಮುದ್ರಖನಿಯೊಟ್ಟಿಗೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದಿದ್ದರು. ಅಂತೆಯೇ ಇಬ್ಬರೂ ಯಾರೆ ಕೂಗಾಡಲಿ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದರು. ಸಿನಿಮಾವು 2012 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಸಿನಿಮಾದಲ್ಲಿ ಪುನೀತ್ ಜೊತೆಗೆ, ಲೂಸ್ ಮಾದ ಯೋಗಿ ನಟಿಸಿದ್ದರು, ಭಾವನಾ ಹಾಗೂ ಸಿಂಧು ಲೋಕನಾಥ್, ನಿವೇದಿತಾ ನಾಯಕಿಯರು. ಗಿರೀಶ್ ಕಾರ್ನಾಡ್, ಪಿ ರವಿಶಂಕರ್, ಸಾಧುಕೋಕಿಲ, ಶೋಭರಾಜ್, ಮಾಳವಿಕ ಅವಿನಾಶ, ಅಚ್ಯುತ್ ಕುಮಾರ್ ಅವರುಗಳಿದ್ದ ಬಹುತಾರಾಗಣದ ಸಿನಿಮಾ ಅದಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Wed, 17 May 23

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ