ನಟಿ ಸಂಚಿತಾ ಸಾವು: ‘ಅವಳ ಆತ್ಮ ದೆವ್ವಗಳಂತೆ ಅಲೆದಾಡುತ್ತವೆ’ ಎಂದ ಖ್ಯಾತ ನಟ
ನಟಿ ಸಂಚಿತಾ ಉಗ್ಲೆ ಅವರ ಹಠಾತ್ ಆತ್ಮಹತ್ಯೆ ಇಡೀ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಜೂನ್ 14 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಸಿಕ ಕಿರುಕುಳವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಹನಟನಿಂದ ಕಿರುಕುಳದ ವಾಟ್ಸಾಪ್ ಚಾಟ್‌ಗಳು ಸಹ ಸೋರಿಕೆಯಾಗಿವೆ. ಈ ಘಟನೆ ಕುರಿತು ಸಂಸದ ರವಿ ಕಿಶನ್, ‘ಆತ್ಮಹತ್ಯೆ ಮಹಾಪಾಪ, ಅದು ಪರಿಹಾರವಲ್ಲ. ಧ್ಯಾನ ಮತ್ತು ಆಧ್ಯಾತ್ಮಿಕತೆ ಕಷ್ಟ ಎದುರಿಸಲು ಸಹಾಯ ಮಾಡುತ್ತದೆ‘ ಎಂದು ಹೇಳಿದ್ದಾರೆ.

ಮುಂಬೈ (ಜೂನ್ 18): ‘ಕುಂಕುಮ ಭಾಗ್ಯ’ ಧಾರಾವಾಹಿ ಹಾಗೂ ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾ ಖ್ಯಾತಿಯ ಯುವ ನಟಿ ಸಂಚಿತಾ ಉಗ್ಲೆ ಅವರ ಹಠಾತ್ ಆತ್ಮಹತ್ಯೆ ಪ್ರಕರಣವು ಇಡೀ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜೂನ್ 14 ರಂದು ಅವರು ನಲಸೋಪಾರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ ಚಿತ್ರರಂಗ ಹಾಗೂ ರಾಜಕೀಯ ವಲಯದಿಂದ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಈ ಮಧ್ಯೆ, ಪ್ರಸಿದ್ಧ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರು ಈ ಘಟನೆಗೆ ನೀಡಿರುವ ಪ್ರತಿಕ್ರಿಯೆಯು ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆತ್ಮಹತ್ಯೆ ಪರಿಹಾರವಲ್ಲ, ಅದು ಮಹಾಪಾಪ: ರವಿ ಕಿಶನ್
ಸಂಚಿತಾ ಆತ್ಮಹತ್ಯೆ ಕುರಿತು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರವಿ ಕಿಶನ್, ‘ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೇವಲ 22 ವರ್ಷದ ಯುವ ಟಿವಿ ನಟಿಯೊಬ್ಬರು ಹೀಗೆ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಅದಕ್ಕಾಗಿಯೇ ಜೀವನದಲ್ಲಿ ಧ್ಯಾನ, ಆಧ್ಯಾತ್ಮಿಕತೆ ಮತ್ತು ಪ್ರಾರ್ಥನೆ ಬಹಳ ಮುಖ್ಯ. ಇವು ನಮಗೆ ಎಂತಹ ಕಷ್ಟದ ಸಂದರ್ಭದಲ್ಲೂ ಬದುಕುವ ಶಕ್ತಿಯನ್ನು ನೀಡುತ್ತವೆ’ ಎಂದಿದ್ದಾರೆ.
VIDEO | Gorakhpur: On TV Actress Sanchita Ugale’s demise, BJP MP Ravi Kishan (@ravikishann) says, “Just yesterday, one of our artists, a young television actress who was only 22 years old, died by suicide. It is very tragic. That is why meditation is important. Spirituality is… pic.twitter.com/PXi9ncF1tD
— Press Trust of India (@PTI_News) June 16, 2026
‘ಈ ಜಗತ್ತಿನಲ್ಲಿ ಕಷ್ಟ, ದುಃಖ ಇಲ್ಲದ ಮನುಷ್ಯನೇ ಇಲ್ಲ. ಆದರೆ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ, ಅದೊಂದು ದೊಡ್ಡ ಪಾಪ. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಆತ್ಮಕ್ಕೆ ಎಂದಿಗೂ ಮೋಕ್ಷ ಸಿಗುವುದಿಲ್ಲ. ಅವರ ಸಾವು ನಿಗದಿತ ಸಮಯದಲ್ಲಿ ಸಂಭವಿಸದೇ ಇರುವುದರಿಂದ, ಅಂತಹ ತೀವ್ರ ಹೆಜ್ಜೆ ಇಟ್ಟವರ ಆತ್ಮಗಳು ಇಲ್ಲೇ ಭೂಮಿಯ ಮೇಲೆ ದೆವ್ವಗಳಂತೆ ಅಲೆದಾಡುತ್ತವೆ. ಜೀವನದಲ್ಲಿ ಸುಖ-ದುಃಖಗಳು ಬಂದು ಹೋಗುವುದು ಸಹಜ, ಆ ಸಂದರ್ಭಗಳನ್ನು ಎದುರಿಸಿ ನಾವು ಬದುಕಬೇಕು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ’ಕಿರುತೆರೆ ನಟಿ ಸಂಚಿತಾ ಉಗಾಳೆ ಆತ್ಮಹತ್ಯೆಗೆ ಕಿರುಕುಳವೇ ಕಾರಣ’; ತಂದೆಯ ಆರೋಪ
ಸಹನಟನಿಂದ ಕಿರುಕುಳ? ವಾಟ್ಸಾಪ್ ಚಾಟ್ಸ್ ಸೋರಿಕೆ!
ಮತ್ತೊಂದೆಡೆ, ಸಂಚಿತಾ ಅವರ ನಿಗೂಢ ಸಾವಿನ ಹಿಂದೆ ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದೆ. ಸಂಚಿತಾ ಅವರ ಕುಟುಂಬಸ್ಥರು ಈ ವಿಷಯವನ್ನು ದೃಢಪಡಿಸಿದ್ದು, ತಮ್ಮ ಮಗಳು ಕಳೆದ ಕೆಲವು ಸಮಯದಿಂದ ನಿರಂತರವಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು ಎಂದು ದೂರಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಸಂಚಿತಾ ಅವರ ವಾಟ್ಸಾಪ್ ಚಾಟ್‌ಗಳು ಸಹ ಸೋರಿಕೆಯಾಗಿದ್ದು, ಸಹನಟ ಉಜ್ವಲ್ ಶರ್ಮಾ ಎಂಬುವವರು ಆಕೆಗೆ ತೀವ್ರ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:10 am, Thu, 18 June 26




