26 Years Of Sudeepism: ‘ಸುದೀಪ್ ಚಿತ್ರರಂಗದ ಪಯಣಕ್ಕೆ 26 ವರ್ಷ’; ಪತ್ನಿ ಪ್ರಿಯಾಗೆ ಧನ್ಯವಾದ ಹೇಳಿದ ಕಿಚ್ಚ

| Updated By: ರಾಜೇಶ್ ದುಗ್ಗುಮನೆ

Updated on: Jan 31, 2022 | 4:01 PM

26 Years Of Sudeepism: ‘2008’ರಲ್ಲಿ ತೆರೆಗೆ ಬಂದ ಹಿಂದಿಯ ‘ಫೂಂಕ್​’ ಸಿನಿಮಾ ಮೂಲಕ ಸುದೀಪ್ ಬಾಲಿವುಡ್​ಗೆ ಕಾಲಿಟ್ಟರು​. ನಂತರ ತೆಲುಗು ಚಿತ್ರದಲ್ಲೂ ಸುದೀಪ್​ ನಟಿಸಿದರು. ಅವರ ನಟನೆಯ ‘ಈಗ’ ಚಿತ್ರ ಸೂಪರ್​-ಡೂಪರ್​ ಹಿಟ್​ ಆಗಿತ್ತು.

26 Years Of Sudeepism: ‘ಸುದೀಪ್ ಚಿತ್ರರಂಗದ ಪಯಣಕ್ಕೆ 26 ವರ್ಷ’; ಪತ್ನಿ ಪ್ರಿಯಾಗೆ ಧನ್ಯವಾದ ಹೇಳಿದ ಕಿಚ್ಚ
ಸುದೀಪ್​-ಪ್ರಿಯಾ
Follow us on

ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಕಿಚ್ಚ ಸುದೀಪ್ (Kichcha Sudeep) ಛಾಪು ಮೂಡಿಸಿದ್ದಾರೆ. ಬಾಲಿವುಡ್​ನಲ್ಲಿ, ಟಾಲಿವುಡ್​ನಲ್ಲಿ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅವರ ಆ್ಯಕ್ಷನ್​ ದೃಶ್ಯಗಳನ್ನು ನೋಡೋದೆ ಒಂದು ಸಂಭ್ರಮ. ಸುದೀಪ್​ಗೆ ಅಭಿಮಾನಿಗಳು ಪ್ರೀತಿಯಿಂದ ನಾನಾ ಬಿರುದುಗಳನ್ನು ನೀಡಿದ್ದಾರೆ. ಹಲವು ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಕಿಚ್ಚ ಅವರಿಗಿದೆ. ಅಷ್ಟೇ ಅಲ್ಲ, ಪರಭಾಷೆಗೂ ತೆರಳಿ ಹಿಟ್​ ಚಿತ್ರ ನೀಡಿದ್ದು ಸುದೀಪ್​ ಹೆಚ್ಚುಗಾರಿಕೆ. ಅವರ ಸಿನಿ ಬದುಕಿಗೆ ಈಗ 26 ವರ್ಷ ತುಂಬಿದೆ. ಇದನ್ನು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಟ್ವಿಟರ್​ನ ಕರ್ನಾಟಕ ಟ್ರೆಂಡ್​ನಲ್ಲಿ #26YearsOfSudeepism ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ.

1997ರಲ್ಲಿ ತೆರೆಕಂಡ ‘ತಾಯವ್ವ’ ಸಿನಿಮಾ ಮೂಲಕ ಸುದೀಪ್​​ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ಇದು ಅವರ ಮೊದಲ ಸಿನಿಮಾ. 1999ರಲ್ಲಿ ‘ಪ್ರತ್ಯರ್ಥ’ ಹೆಸರಿನ ಸಿನಿಮಾದಲ್ಲಿ ನಟಿಸಿದರು. 2000ರಲ್ಲಿ ‘ಸ್ಪರ್ಶ’ ಸಿನಿಮಾ ತೆರೆಗೆ ಬಂತು. ಆ ಬಳಿಕ, ‘ಹುಚ್ಚ’, ‘ವಾಲಿ’, ‘ಚಂದು’, ‘ಕಿಚ್ಚ’ ಮೊದಲಾದ ಸಿನಿಮಾಗಳು ರಿಲೀಸ್​ ಆದವು. ಸುದೀಪ್​ ನಟನೆಯ ಸಾಲು ಸಾಲು ಚಿತ್ರಗಳು ತೆರೆಗೆ ಬಂದವು. ಅವರ ನಟನೆಯನ್ನು ನೋಡಿ ಪರಭಾಷೆಯವರು ಕೂಡ ಸುದೀಪ್​ಗೆ ಆಹ್ವಾನ ನೀಡಿದರು.

‘2008’ರಲ್ಲಿ ತೆರೆಗೆ ಬಂದ ಹಿಂದಿಯ ‘ಫೂಂಕ್​’ ಸಿನಿಮಾ ಮೂಲಕ ಸುದೀಪ್ ಬಾಲಿವುಡ್​ಗೆ ಕಾಲಿಟ್ಟರು​. ನಂತರ ತೆಲುಗು ಚಿತ್ರದಲ್ಲೂ ಸುದೀಪ್​ ನಟಿಸಿದರು. ಅವರ ನಟನೆಯ ‘ಈಗ’ ಚಿತ್ರ ಸೂಪರ್​-ಡೂಪರ್​ ಹಿಟ್​ ಆಗಿತ್ತು. ತೆಲುಗಿನಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಎಸ್​.ಎಸ್​. ರಾಜಮೌಳಿ ನಿರ್ದೇಶನವಿದೆ. ಕಾಲಿವುಡ್​​ನಲ್ಲೂ ಸುದೀಪ್​ ಛಾಪು ಮೂಡಿಸಿದ್ದಾರೆ.

ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿ, ಡೈರೆಕ್ಟರ್​ ಆಗಿಯೂ ಸುದೀಪ್​ ಸೈ ಎನಿಸಿಕೊಂಡಿದ್ದಾರೆ. 2006ರಲ್ಲಿ ತೆರೆಗೆ ಬಂದ ‘ಮೈ ಆಟೋಗ್ರಾಫ್​’ ಚಿತ್ರವನ್ನು ಅವರು ನಿರ್ದೇಶನ, ನಿರ್ಮಾಣ ಮಾಡಿದ್ದರು. 2014ರಲ್ಲಿ ತೆರೆಗೆ ಬಂದ ‘ಮಾಣಿಕ್ಯ’ ಅವರ ನಿರ್ದೇಶನದ ಕೊನೆಯ ಸಿನಿಮಾ. 2018ರಲ್ಲಿ ತೆರೆಗೆ ಬಂದ ‘ಅಂಬಿ ನಿಂಗ್​ ವಯಸ್ಸಾಯ್ತೋ’ ಚಿತ್ರಕ್ಕೆ ಸುದೀಪ್​ ಬಂಡವಾಳ ಹೂಡಿದ್ದರು. ಕನ್ನಡದ ‘ಬಿಗ್​ ಬಾಸ್​’ ರಿಯಾಲಿಟಿ ಶೋನ 8 ಸೀಸನ್​ಗಳನ್ನು ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಸುದೀಪ್​ ಪತ್ನಿ ಪ್ರಿಯಾ ಅಭಿನಂದನೆ ತಿಳಿಸಿದ್ದಾರೆ. ಇದಕ್ಕೆ ಸುದೀಪ್​ ಧನ್ಯವಾದ ತಿಳಿಸಿದ್ದಾರೆ.

ಈಗ ಸುದೀಪ್​ ಚಿತ್ರರಂಗದಲ್ಲಿ 26 ವರ್ಷ ಕಳೆದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆ ಕೇಳಿ ಬರುತ್ತಿದೆ. ಸೆಲೆಬ್ರಿಟಿಗಳು ಕೂಡ ಸುದೀಪ್​ಗೆ ಶುಭಾಶಯ ತಿಳಿಸುತ್ತಿದ್ದಾರೆ. ಕಳೆದ ವರ್ಷ ಸುದೀಪ್​ ಚಿತ್ರರಂಗದಲ್ಲಿ 25 ವರ್ಷ ಆಚರಿಸಿಕೊಂಡಿದ್ದರು. ಅವರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸನ್ಮಾನ ಮಾಡಿದ್ದರು.

ಇದನ್ನೂ ಓದಿ: ಶಮಂತ್​ ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್​ ಮಾಡಿದ ಕಿಚ್ಚ ಸುದೀಪ್​; ವೈರಲ್​ ಆಯ್ತು ವಿಡಿಯೋ

ಟಾಲಿವುಡ್​ ಅಂಗಳದಲ್ಲಿ ಕಿಚ್ಚ ಸುದೀಪ್​; ಫೆಬ್ರವರಿ 4ರಂದು ರಿಲೀಸ್​ ಆಗುತ್ತಿದೆ ಸಿನಿಮಾ